ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Akshaya Tritiya 2026: ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್ ಜ್ಯುವೆಲರಿಗಳಿಗೆ ಹೆಚ್ಚಿದ ಬೇಡಿಕೆ

Bridal Jewellery: ಅಕ್ಷಯ ತೃತೀಯ ಸೀಸನ್ ಹಿನ್ನೆಲೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಬ್ರೈಡಲ್ ಜ್ಯುವೆಲರಿಗಳು ಆಭರಣ ಲೋಕದಲ್ಲಿ ಬಿಡುಗಡೆಗೊಂಡಿವೆ. ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಕೂಡ ಸಾಮಾನ್ಯವಾಗಿ ಧರಿಸುವಂತಹ ವೆರೈಟಿ ಚಿನ್ನಾಭರಣಗಳು ಲಗ್ಗೆ ಇಟ್ಟಿವೆ. ಯಾವ್ಯಾವ ಬಗೆಯವು ಬೇಡಿಕೆ ಹೆಚ್ಚಿಸಿಕೊಂಡಿವೆ? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ವೈವಿಧ್ಯಮಯ ಬ್ರೈಡಲ್ ಆಭರಣಗಳು ಬಿಡುಗಡೆಗೊಂಡಿವೆ. ಮದುಮಗಳು ಮಾತ್ರವಲ್ಲ, ಮದುವೆಯಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು ಕೂಡ ಸಾಮಾನ್ಯವಾಗಿ ಧರಿಸುವಂತಹ ವೆರೈಟಿ ಚಿನ್ನಾಭರಣಗಳು ಲಗ್ಗೆ ಇಟ್ಟಿವೆ.

2/5

ಬ್ರೈಡಲ್ ಸೆಟ್‌ಗೆ ಬೇಡಿಕೆ

ಬ್ರೈಡಲ್ ಸೆಟ್‌ನಲ್ಲಿ ಕಿವಿಯೊಲೆ, ಮಾಟಿ, ಡಾಬು, ನೆಕ್ಲೇಸ್ ಹಾರ, ಬಾಜುಬಾಂದ್‌ನಿಂದಿಡಿದು ಮದುಮಗಳು ಧರಿಸುವ ಎಲ್ಲಾ ಬಗೆಯ ಆಭರಣಗಳು ಒಳಗೊಂಡಿರುತ್ತವೆ. ಅಂತಹ ಬ್ರೈಡಲ್ ಸೆಟ್‌ಗಳು ಈ ವೆಡ್ಡಿಂಗ್ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

3/5

ಸ್ಕೀಮ್ ಬ್ರೈಡಲ್ ಸೆಟ್ಸ್

ಹಾಗೆಂದು ಎಲ್ಲರೂ ಲಕ್ಷಗಟ್ಟಲೇ ಬೆಲೆಬಾಳುವ ಬ್ರೈಡಲ್ ಸೆಟ್‌ಗಳನ್ನು ಅಂದೇ ಕೊಂಡು ಕೊಳ್ಳುವುದಿಲ್ಲ! ಬದಲಿಗೆ ವರ್ಷಗಟ್ಟಲೆಯಿಂದಲೇ ಹಣವನ್ನು ಕೂಡಿಸಿ, ಆಭರಣ ಅಂಗಡಿಗಳಲ್ಲಿ ಸ್ಕೀಮ್ ಅಥವಾ ಚೀಟಿ ಕಟ್ಟಿ, ಉಳಿತಾಯ ಸ್ಕೀಮ್‌ನ ಸದುಪಯೋಗ ಪಡೆದು ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಬೇಕಾದ ಬ್ರೈಡಲ್ ಸೆಟ್ ಕೊಂಡು ಕೊಳ್ಳುತ್ತಾರೆ. ಇದು ಈ ಸೀಸನ್‌ನಲ್ಲಿ ಸಾಮಾನ್ಯವಾಗಿದೆ ಎನ್ನುತ್ತಾರೆ ಆಭರಣ ವಿನ್ಯಾಸಕರಾದ ರಾಘವ್.

4/5

ಟ್ರೆಡಿಷನಲ್ ವಿನ್ಯಾಸದ ಬ್ರೈಡಲ್ ಸೆಟ್ಸ್

ಈ ವಿನ್ಯಾಸದವು ಮೊದಲಿನಿಂದಲೂ ಬೇಡಿಕೆ ಪಡೆದುಕೊಂಡ ಡಿಸೈನ್ ಎನ್ನಬಹುದು. ಟ್ರೆಡಿಷನಲ್ ಆಗಿ ಮದುವೆಯಾಗುವಂತವರು ಬಹುತೇಕ ಈ ಡಿಸೈನ್‌ನ ಬ್ರೈಡಲ್ ಸೆಟ್‌ಗಳನ್ನೇ ಚೂಸ್ ಮಾಡುತ್ತಿದ್ದಾರೆ ಎನ್ನುತ್ತಾರೆ ಆಭರಣ ಅಂಗಡಿಯೊಂದರ ಮಾಲೀಕರು.

5/5

ಲೈಟ್‌ವೇಟ್ ಬ್ರೈಡಲ್ ಸೆಟ್

ಮಧ್ಯಮ ವರ್ಗದವರು ಖರೀದಿಸಬಹುದಾದ ಲೈಟ್‌ವೇಟ್ ಬ್ರೈಡಲ್ ಸೆಟ್‌ಗಳು ಈ ಸೀಸನ್‌ನಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದೆ. ಕಡಿಮೆ ತೂಕದಲ್ಲಿ ಅಗಲವಾಗಿ ಹಾಗೂ ಗ್ರ್ಯಾಂಡ್ ಆಗಿ ಕಾಣಿಸುವಂತಹ ಲೈಟ್‌ವೇಟ್ ಬ್ರೈಡಲ್ ಸೆಟ್‌ಗಳು ಮಹಿಳೆಯರಿಗೆ ಪ್ರಿಯಾವಾಗುತ್ತಿವೆ ಎನ್ನುತ್ತಾರೆ ಆಭರಣ ಪ್ರೇಮಿಗಳಾದ ರಾಧಾ ಹಾಗೂ ರೇಖಾ.

ಶೀಲಾ ಸಿ ಶೆಟ್ಟಿ

View all posts by this author