ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಇಂಡೋ-ವೆಸ್ಟರ್ನ್‌ ಡಿಸೈನರ್‌ ಸ್ಕರ್ಟ್‌ನಲ್ಲಿ ವಿಂಟರ್‌ ಫ್ಯಾಷನ್‌ಗೆ ಸೈ ಎಂದ ಅನುಶ್ರೀ

Anchor Anushree Fashion: ವಿಂಟರ್‌ನಲ್ಲೂ ಅತ್ಯಾಕರ್ಷಕವಾಗಿ ಕಾಣಿಸುವಂತಹ ಸ್ಕೈ ಬ್ಲ್ಯೂ ಶೇಡ್‌ನ ಇಂಡೋ-ವೆಸ್ಟರ್ನ್‌ ಶೈಲಿಯ ಜಾಕೆಟ್‌ ಶೈಲಿಯ ಸ್ಕರ್ಟ್ ಫ್ಯಾಷನ್‌ನಲ್ಲಿ ನಿರೂಪಕಿ ಅನುಶ್ರೀಯವರು ಕಾಣಿಸಿಕೊಂಡಿದ್ದಾರೆ. ಅವರ ಈ ಲುಕ್‌ ಮತ್ತು ಔಟ್‌ಫಿಟ್‌ ಬಗ್ಗೆ ಫ್ಯಾಷನ್‌ ವಿಮರ್ಶಕರ ರಿವ್ಯೂ ಏನು? ಇಲ್ಲಿದೆ ವಿವರ.

ನಿರೂಪಕಿ, ನಟಿ ಅನುಶ್ರೀ (ಚಿತ್ರಕೃಪೆ : ಭರತ್‌ ಫೋಟೋಗ್ರಫಿ)
1/4

ಮನಸ್ಸಿಗೆ ಉಲ್ಲಾಸ ನೀಡುವಂತಹ ಆಕಾಶ ನೀಲಿ ವರ್ಣದ ಜಾಕೆಟ್‌ ಶೈಲಿಯ ಟಾಪ್‌ ಹಾಗೂ ಲಾಂಗ್‌ ಸ್ಕರ್ಟ್ನಲ್ಲಿ ಸ್ಟಾರ್‌ ನಿರೂಪಕಿ ಅನುಶ್ರೀ ಕಾಣಿಸಿಕೊಂಡಿದ್ದು, ಇಂಡೋ-ವೆಸ್ಟರ್ನ್‌ ಸೆಮಿ ಎಥ್ನಿಕ್‌ ವಿಂಟರ್ ಫ್ಯಾಷನ್‌ ಸೈ ಎಂದಿದ್ದಾರೆ.

2/4

ಅನುಶ್ರೀ ಅತ್ಯಾಕರ್ಷಕ ಫ್ಯಾಷನ್‌ :

ಅಂದಹಾಗೆ, ಅನುಶ್ರೀ ಫ್ಯಾಷನ್‌ ಸೆನ್ಸ್, ಮೊದಲಿನಿಂದಲೂ ಫ್ಯಾನ್‌ ಫಾಲೋವರ್‌ಗಳನ್ನು ಸೆಳೆಯುತ್ತಲೇ ಇದೆ. ಚಾನೆಲ್‌ನಲ್ಲಿ ಅವರು ಧರಿಸುವ ಒಂದೊಂದು ಸೆಮಿ ಎಥ್ನಿಕ್‌, ಇಂಡೋ-ವೆಸ್ಟರ್ನ್‌ ಹಾಗೂ ಟ್ರೆಡಿಷನಲ್‌ ಔಟ್‌ಫಿಟ್‌ಗಳನ್ನು ನೋಡಿ, ಮಾನಿನಿಯರು ಅದೇ ರೀತಿ ಡಿಸೈನ್‌ ಮಾಡಿಸಿ ಧರಿಸುವುದನ್ನು ಆಗಾಗ್ಗೆ ಕಾಣಬಹುದು.

3/4

ಇಂಡೋ-ವೆಸ್ಟರ್ನ್‌ ಜಾಕೆಟ್‌ ಸ್ಕರ್ಟ್ ವಿಶೇಷತೆ :

ಅನುಶ್ರೀಯವರು ಧರಿಸಿರುವ ಸೆಲೆಬ್ರೆಟಿ ಡಿಸೈನರ್‌ ಚಂದನ್‌ ಗೌಡ ಡಿಸೈನ್‌ನ ಈ ಇಂಡೋ-ವೆಸ್ಟರ್ನ್‌ ಶೈಲಿಯ ವಿಶೇ‍ಷತೆ ಎಂದರೇ, ಇದೊಂದು ಕಾಲರ್‌ ಲೆಸ್‌ ಜಾಕೆಟ್‌ ಲುಕ್‌ ನೀಡುವ ಟಾಪ್‌ ಆಗಿದ್ದು, ಲಾಂಗ್‌ ಸ್ಲೀವ್‌ ಹೊಂದಿದೆ. ಬಾರ್ಡರ್‌ ಜಾಗದಲ್ಲಿ ಗೋಲ್ಡನ್‌ ಡಿಸೈನರ್‌ ಹ್ಯಾಂಡ್‌ವರ್ಕ್‌ ಒಳಗೊಂಡಿದೆ. ಇದು ಅನುಶ್ರೀಯವರಿಗೆ ಎಲಿಗೆಂಟ್‌ ಲುಕ್‌ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/4

ವೈರಲ್‌ ಆಗಿದ್ದ ಅನುಶ್ರೀ ಸೀರೆ :

ಇನ್ನು, ಅನುಶ್ರೀ ಮದುವೆಯಾದ ಹೊಸದರಲ್ಲಿ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ, ಆರೆಂಜ್‌ ಸಿಲ್ಕ್‌ ಬುಟ್ಟಾ ಸೀರೆಯೊಂದು ಯಾವ ಮಟ್ಟಿಗೆ ವೈರಲ್‌ ಆಗಿತ್ತೆಂದರೇ, ಸೀರೆ ವ್ಯಾಪಾರಿಗಳಿಗೆ ಹಬ್ಬ ಸೃಷ್ಟಿಸಿತ್ತು. ಆ ಮಟ್ಟಿಗೆ ಅವರು ಉಟ್ಟ ಸೀರೆ ಲಕ್ಷಗಟ್ಟಲೇ ಮಾರಾಟವಾಗಿದೆಯಂತೆ. ಅಚ್ಚರಿ ಎಂದರೇ, ಇಂದಿಗೂ ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಲೇ ಇದೆ. ಒಟ್ನಲ್ಲಿ, ನಟಿಯರನ್ನು ಹೊರತುಪಡಿಸಿದಲ್ಲಿ, ಸೀರೆ ಟ್ರೆಂಡ್‌ ಸೆಟ್‌ ಮಾಡಿದ ಏಕೈಕ ನಿರೂಪಕಿ ಇವರೇ ಎನ್ನುತ್ತಾರೆ ಫ್ಯಾಷನ್‌ ವಿಶ್ಲೇಷಕರಾದ ಮಿಂಚು.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

ಶೀಲಾ ಸಿ ಶೆಟ್ಟಿ

View all posts by this author