Aqua Makeup: ಸಮ್ಮರ್‌ನಲ್ಲಿ ನಯಾ ಕಾನ್ಸೆಪ್ಟ್‌ನಲ್ಲಿ ಮರಳಿದ ಅಕ್ವಾ ಐ ಮೇಕಪ್
ಪ್ರತಿ ಬಾರಿಯಂತೆ ಈ ಬಾರಿಯೂ ಸಮ್ಮರ್‌ನಲ್ಲಿ ಅಕ್ವಾ ಐ ಮೇಕಪ್ ಟ್ರೆಂಡಿಯಾಗಿದೆ. ಒಂದಿಷ್ಟು ಹೊಸ ವಿನ್ಯಾಸದೊಂದಿಗೆ ಮರಳಿದೆ. ಈ ಸೀಸನ್‌ನಲ್ಲಿ ಅಕ್ವಾ ಐ ಮೇಕಪ್, ಟ್ರೆಂಡಿ ಐ-ಮೇಕಪ್‌ನಲ್ಲಿ ಸೇರಿಕೊಂಡಿದ್ದು, ಜೆನ್ ಜಿ ಹುಡುಗಿಯರ ಕಂಗಳನ್ನು ಅಲಂಕರಿಸುತ್ತಿದೆ. ಫಂಕಿ ಲುಕ್ಕನ್ನು ಹೈ ಲೈಟ್ ಮಾಡುವುದರೊಂದಿಗೆ ಡಿಫರೆಂಟ್ ಇಮೇಜ್ ನೀಡುತ್ತಿದೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಸಮ್ಮರ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವ ಅಕ್ವಾ ಐ ಮೇಕಪ್ ಟ್ರೆಂಡಿಯಾಗಿದೆ. ನಯಾ ವಿನ್ಯಾಸಗಳೊಂದಿಗೆ ಮತ್ತೊಮ್ಮೆ ಫಂಕಿ ಲುಕ್ ಲುಕ್‌ನಲ್ಲಿ ಕಾಣಿಸಿಕೊಂಡಿದೆ.
ಕಣ್ಣಿಗೆ ಅಕ್ವಾ ಲುಕ್!
ಹೌದು, ಈ ಸೀಸನ್‌ನಲ್ಲಿ ಅಕ್ವಾ ಐ ಮೇಕಪ್, ಟ್ರೆಂಡಿ ಐ-ಮೇಕಪ್‌ನಲ್ಲಿ ಸೇರಿಕೊಂಡಿದ್ದು, ಜೆನ್ ಜಿ ಹುಡುಗಿಯರ ಕಂಗಳನ್ನು ಅಲಂಕರಿಸುತ್ತಿದೆ. ಫಂಕಿ ಲುಕ್ಕನ್ನು ಹೈ ಲೈಟ್ ಮಾಡುವುದರೊಂದಿಗೆ ಡಿಫರೆಂಟ್ ಇಮೇಜ್ ನೀಡುತ್ತಿದೆ.
ಅಕ್ವಾ ಐ ಮೇಕಪ್‌ಗೆ ಸಾಥ್ ನೀಡುವ ವರ್ಣಗಳು
ಅಕ್ವಾ ಲುಕ್‌ಗೆ ಸಾಥ್ ನೀಡುವ ಬಣ್ಣಗಳೆಂದರೇ, ಗಾಢ-ತಿಳಿ ಬ್ಲ್ಯೂ, ಸ್ಕೈ ಬ್ಲ್ಯೂ, ವೈಟ್ ಜತೆಗೆ ಬ್ಲ್ಯೂ. ಇವು ಅಕ್ವಾ ಲುಕ್ ನೀಡುವುದರೊಂದಿಗೆ ಈ ಸೀಸನ್‌ನ ಔಟಿಂಗ್, ವೀಕೆಂಡ್ ಬ್ರಂಚ್ ಪಾರ್ಟಿ, ನೈಟ್ ಪಾರ್ಟಿ ಲುಕ್ಕನ್ನು ಮತ್ತಷ್ಟು ಅತ್ಯಾಕರ್ಷಕವಾಗಿಸುತ್ತಿದೆ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ ರಾಜ್. ಅವರ ಪ್ರಕಾರ, ಐ ಮೇಕಪ್‌ನಲ್ಲಿ ಸದ್ಯಕ್ಕೆ, ಹಳದಿ ಮಿಶ್ರ ಗುಲಾಬಿ, ಪುದೀನಾ ಎಲೆ ಬಣ್ಣದ ಆಕರ್ಷಕ ಹಸಿರು ಬಣ್ಣದ ಮಿಕ್ಸ್ ಮ್ಯಾಚ್ ಇರುವಂತಹ ಐ ಮೇಕಪ್ ಹಿಂದೆ ಸರಿದಿವೆ. ಇವುಗಳೊಂದಿಗೆ ರೆಟ್ರೋ ಲುಕ್ ನೀಡುವ ಹಳೆಯ ಕೆಂಪು, ಕಪ್ಪು, ತಿಳಿ ಗುಲಾಬಿ ಬಣ್ಣದ ಟಿಪಿಕಲ್ ಶೇಡ್‌ಗಳು ಸದ್ಯ ಮರೆಯಾಗಿವೆ. ಫಂಕಿ ಲುಕ್ ಜೊತೆಗೆ ಗ್ಲಾಮರಸ್ ಲುಕ್ ನೀಡುವ ಹೊಸ ಬ್ಲ್ಯೂ ಶೇಡ್‌ನ ನಾನಾ ವರ್ಣಗಳು ಟ್ರೆಂಡಿಯಾಗಿವೆ ಎನ್ನುತ್ತಾರೆ ಐ ಮೇಕಪ್ ಸ್ಪೆಷಲಿಸ್ಟ್ ಜೋಸೆಫ್.
ಅವರ ಪ್ರಕಾರ, ಈ ಶೈಲಿಯ ಐ ಮೇಕಪ್‌ನಲ್ಲಿ ಇದೀಗ ಮಿಕ್ಸ್ ಅಂಡ್ ಮ್ಯಾಚ್ ಗ್ಲಾಮರಸ್ ಶೇಡ್‌ನ ಕರೆಂಟ್ ಬ್ಲ್ಯೂ, ಕೊಬಾಲ್ಟ್ ಹಾಗೂ ಆ್ಯಪಲ್ ಅಕ್ವಾ ಗ್ರೀನ್ ಶೇಡ್ ಕೂಡ ಮಿಕ್ಸ್ ಮ್ಯಾಚ್ ಆಗಿವೆ. ಕಣ್ಣಿನ ರೆಪ್ಪೆಗಳನ್ನು ಆಕರ್ಷಣೀಯವಾಗಿಸುತ್ತಿವೆ ಎನ್ನುತ್ತಾರೆ.
ಬೇಸಿಗೆಯಲ್ಲಿ ಐ ಮೇಕಪ್ ಮಾಡುವಾಗ ಗಮನಿಸಬೇಕಾದ ವಿಷಯಗಳು
ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ವಾಟರ್ ಪ್ರೂಫ್ ಪೆನ್ಸಿಲ್ ಅಥವಾ ಸ್ಕೆಚ್ ಐ ಪೆನ್ ಬಳಸಕೂಡದು. ಬಳಸಿದಲ್ಲಿ ಚರ್ಮ ಬಿರುಕು ಮೂಡಬಹುದು. ಇಲ್ಲವೇ ಒಣಗಿದಂತಾಗಬಹುದು. ಆದಷ್ಟೂ ಶೈನಿ ಇಲ್ಲವೇ ಮಾಯಿಶ್ಚರೈಸಿಂಗ್ ಅಂಶ ಇರುವಂತದ್ದನ್ನು ಬಳಸುವುದು ಉತ್ತಮ. ಇನ್ನು, ಈ ಬಾರಿ ಐ ಮೇಕಪ್‌ನಲ್ಲಿ ಮ್ಯಾಟ್ ಫಿನಿಶಿಂಗ್ ಮರೆಯಾಗಿದೆ. ಮತ್ತೊಮ್ಮೆ ಫ್ರೆಶ್ ಕಲರ್‌ಗಳಿಗೆ ಮಾನ್ಯತೆ ದೊರೆತಿದೆ ಎನ್ನುತ್ತಾರೆ ಮೇಕಪ್ ಸ್ಪೆಷಲಿಸ್ಟ್ ಜಾನಿ.
ಐ-ಮೇಕಪ್ ಪ್ರಿಯರಿಗೆ ಟಿಪ್ಸ್
- ಐ ಮೇಕಪ್ ನಂತರ ಕೊನೆಯಲ್ಲಿ ಐ ಪೆನ್ಸಿಲ್‌ನಲ್ಲಿ ತೆಳುವಾದ ಲೈನರ್ ಹಾಕಿ. ಆಕರ್ಷಕವಾಗಿ ಕಾಣಿಸುವುದು.
- ಕಾಂಟ್ರಾಸ್ಟ್ ಬಣ್ಣಬಣ್ಣದ ಐ ಪೆನ್ಸಿಲ್‌ಗಳಿಂದ ಪಾರ್ಟಿ ಲುಕ್ ನೀಡಬಹುದು.
- ಶಿಮ್ಮರ್ ಬ್ಲ್ಯೂ ಶೇಡ್‌ನ ಐ ಮೇಕಪ್ ಪಾರ್ಟಿಯ ರಂಗು ಹೆಚ್ಚಿಸುತ್ತವೆ.
- ಬೇಸಿಗೆಯ ಐ ಮೇಕಪ್‌ನಲ್ಲಿ ಯಾವುದೇ ಕಾರಣಕ್ಕೂ ವಾಟರ್‌ಪ್ರೂಫ್ ಸೌಂದರ್ಯ ವರ್ಧಕಗಳನ್ನು ಬಳಸಕೂಡದು.
- ಐ ಮೇಕಪ್ ಮಾಡಿದ ನಂತರ ಡ್ರೈ ಆಗಲು ಬಿಡಬೇಕು.