ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ashada Sale 2026: ಎಲ್ಲೆಡೆ ಆಷಾಢ ಸೇಲ್ ಅಬ್ಬರ; ಸೀರೆ, ಜ್ಯುವೆಲರಿ ಖರೀದಿಗಿದು ಸಕಾಲ

ಆಷಾಢ ಸೇಲ್ ಅಬ್ಬರ ಎಲ್ಲೆಡೆ ಆರಂಭವಾಗಿದೆ. ಆನ್‌ಲೈನ್ ಹಾಗೂ ಆಫ್‌ಲೈನ್ ರಿಟೇಲ್ ಶಾಪ್‌ಗಳು ಸಾಕಷ್ಟು ಆಫರ್‌ಗಳನ್ನು ನೀಡುತ್ತಿವೆ. ಈ ಸೇಲ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಎಕ್ಸ್‌ಪರ್ಟ್ಸ್ ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಮಿಂಚು
1/5

ಆಷಾಢ ಸೇಲ್ ಅಬ್ಬರ ಹೆಚ್ಚಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಮಾಲ್‌ಗಳಲ್ಲಿ ಮಾತ್ರವಲ್ಲ, ಸಾಕಷ್ಟು ಉಡುಗೆ ಹಾಗೂ ಜ್ಯುವೆಲರಿಯ ಆನ್‌ಲೈನ್ ಹಾಗೂ ಆಫ್‌ಲೈನ್ ಶಾಪ್‌ಗಳು ಕೂಡ ಸೇಲ್ ನಡೆಸುತ್ತಿವೆ.

2/5

ಕೆಲವು ಮಾಲ್‌ಗಳಲ್ಲಿ ಆಷಾಢ ಸೇಲ್

ಕೆಲವು ಮಾಲ್‌ಗಳಲ್ಲಿ ಆಷಾಢ ಸೇಲ್ ನಡೆಯುತ್ತಿದೆ. ಇಲ್ಲಿ ನೀವು ನಾನಾ ಪಾಪುಲರ್ ಬ್ರಾಂಡ್‌ನ ಗುಣ ಮಟ್ಟದ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಸೀರೆ ಶಾಪ್‌ಗಳಲ್ಲಿ ಆಷಾಢ ಸೇಲ್

ಮುಂಬರುವ ಫೆಸ್ಟೀವ್ ಸೀಸನ್ ಗಮನದಲ್ಲಿಟ್ಟುಕೊಂಡು ಕೆಲವು ಸೀರೆ ಸೆಂಟರ್‌ಗಳು ಹಾಗೂ ಶಾಪ್‌ಗಳು ಆಷಾಢ ಸೀರೆ ಸೇಲ್ ಮಾಡುತ್ತಿವೆ. ಇಲ್ಲಿಯೂ ಸಾಕಷ್ಟು ಬಗೆಯ ಸೀರೆಗಳನ್ನು ಆಫರ್‌ಗಳೊಂದಿಗೆ ಖರೀದಿಸಬಹುದು.

3/5

ಜ್ಯುವೆಲರಿಗಳ ಖರೀದಿಗೂ ಸಕಾಲ

ನೀವೇನಾದರೂ ಬೆಳ್ಳಿ-ಬಂಗಾರದ ಆಭರಣಗಳನ್ನು ಮುಂಬರುವ ಶ್ರಾವಣದಲ್ಲಿ ಖರೀದಿ ಮಾಡುವ ಯೋಚನೆಯಿದ್ದಲ್ಲಿ, ಅದನ್ನು ಮುಂದೂಡದೇ ಈ ಸಮಯದಲ್ಲೆ ಖರೀದಿಸಬಹುದು. ಕೆಲವು ಅಂಗಡಿಗಳಲ್ಲಿ ಆಷಾಢ ಸೇಲ್‌ನಲ್ಲಿ ಮೇಕಿಂಗ್ ಚಾರ್ಜ್, ವೇಸ್ಟೆಜ್ ಎಲ್ಲವನ್ನು ಕಡಿತಗೊಳಿಸಲಾಗಿರುತ್ತದೆ. ಇದರಿಂದ ನಿಮಗೆ ಕೊಂಚ ಲಾಭವಾದರೂ ಆಗಬಹುದು.

4/5

ಆನ್‌ಲೈನ್‌ನಲ್ಲೂ ಆಷಾಢ ಸೇಲ್

ಫ್ಯಾಷನ್‌ವೇರ್ಸ್, ಬ್ಯೂಟಿ ಪ್ರಾಡಕ್ಟ್ಸ್, ಕಿಚನ್ ಸಾಮಗ್ರಿಗಳಿಂದಿಡಿದು ಸಾಕಷ್ಟು ವಸ್ತುಗಳಿಗೆ ಆನ್‌ಲೈನ್‌ನಲ್ಲಿ ನಡೆಯುವ ಸಾಕಷ್ಟು ಆಷಾಢ ಸೇಲ್‌ನಲ್ಲಿ ಆಫರ್‌ಗಳ ಸುರಿಮಳೆಯನ್ನೇ ಕಾಣಬಹುದು. ಕಣ್ಣಿಗೆ ಬೇಕಾದ ವಸ್ತುಗಳನ್ನು ಮನೆಯಲ್ಲೆ ಕುಳಿತು ಖರೀದಿಸಬಹುದು.

5/5

ಎಕ್ಸ್‌ಚೇಂಜ್‌ಗೆ ಅವಕಾಶವಿರುವುದಿಲ್ಲ

ಆಷಾಢ ಸೇಲ್‌ನಲ್ಲಿ ಎಕ್ಸ್‌ಚೇಂಜ್‌ಗೆ ಅವಕಾಶವಿರುವುದಿಲ್ಲ! ಎಂಬುದು ನೆನಪಿರಲಿ. ಹಾಗಾಗಿ ಕೊಳ್ಳುವಾಗಲೇ ಅಗತ್ಯವಿರುವಂತದ್ದನ್ನು ಮಾತ್ರ ಖರೀದಿಸಬೇಕು.

ಶೀಲಾ ಸಿ ಶೆಟ್ಟಿ

View all posts by this author