ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Avneet Kaur: ರೆಡ್ ಗೌನ್‌ನಲ್ಲಿ ಸೆಕ್ಸಿ ಲುಕ್‌ ಕೊಟ್ಟ ಬಾಲಿವುಡ್‌ ಸ್ಟಾರ್‌ ನಟಿ

Bollywood Actress Avneet Kaur: ಬಾಲಿವುಡ್‌ ನಟಿ ಅವನೀತ್ ಕೌರ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. ರಿಯಾಲಿಟಿ ಶೋನಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಅವನೀತ್ ಕೌರ್, ನಟಿಯಾಗಿ ಮಿಂಚುತ್ತಿದ್ದಾರೆ.ಇದೀಗ ನಟಿಯ ಬೋಲ್ಡ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

1/5

ನಟಿ ಅವನೀತ್‌ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 3 ಕೋಟಿಗೂ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ನಟಿ ಆಗಾಗ್ಗೆ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ನಟಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

2/5

ನಟಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೊಗಳು ನೆಟ್ಟಿಗರ ಗಮನ ಸೆಳೆ ಯುತ್ತಿವೆ.ಅವನೀತ್  ಕೌರ್ ರೆಡ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದು, ಸೆಕ್ಸಿ ಲುಕ್‌ ಮೂಲಕ ಪೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ನಾನು ನನ್ನದೇ ಆದ ಪ್ರೀತಿಯಲ್ಲಿ ಸಮಯ ಕಳೆಯಬೇಕು ಎನ್ನುವ ಕ್ಯಾಪ್ಷನ್ ನೀಡಿ ಪೋಟೋ ಶೇರ್ ಮಾಡಿದ್ದಾರೆ.

3/5

ನಟಿಯ ಗೌನ್ ವಿಭಿನ್ನವಾಗಿ ವಿನ್ಯಾಸಗೊಂಡಿದ್ದು, ಟ್ರೆಂಡಿ ಲುಕ್ ನೀಡಿದೆ. ಬ್ರೈಟ್ ಆಗಿರುವ ಮೇಕಪ್ ಜೊತೆಗೆ ಗ್ಲಾಸಿ ಲಿಪ್‌ಶೈನ್‌ ಮೂಲಕ ಅವರ ಲುಕ್‌ನ ಅಂದ ಹೆಚ್ಚಿಸಿದೆ. ನಟಿ ಯಾವುದೇ ಆಭರಣಗಳನ್ನು ಧರಿಸದೆ ಗೌನ್‌ಗೆ ಮ್ಯಾಚ್ ಆಗುವಂತೆ ಫ್ರೀ ಹೇರ್ ಸ್ಟೈಲ್ ಮಾಡಿದ್ದಾರೆ.

4/5

ಇತ್ತೀಚೆಗಷ್ಟೆ ಕ್ರಿಕೆಟ್‌ ತಾರೆಯಾದ ವಿರಾಟ್ ಕೊಹ್ಲಿ ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಂ ಫೋಟೋವೊಂದಕ್ಕೆ ಲೈಕ್ ನೀಡಿದ್ದರಿಂದ ಬಹಳಷ್ಟು ಸುದ್ದಿಯಲ್ಲಿದ್ದರು. 2012 ರಲ್ಲಿ ರಿಯಾಲಿಟಿ ಶೋ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಅವನೀತ್ ಕೌರ್, ಹಲವು ರಿಯಾಲಿಟಿ ಶೋ, ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.

5/5

ಅವನೀತ್ ಕೌರ್ ತಮ್ಮ ವೃತ್ತಿಜೀವನವನ್ನು ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಲಿಟಲ್ ಮಾಸ್ಟರ್ಸ್‌ ಕಾರ್ಯಕ್ರಮ ಮೂಲಕ  ಪ್ರಾರಂಭಿಸಿದರು. ಆ ಬಳಿಕ ಕಿರುತೆರೆಯಲ್ಲಿ  ತನ್ನದೇ ಆದ ಛಾಪು ಮೂಡಿಸಿದ ಅವನೀತ್ ಕೌರ್, ಪ್ರಸ್ತುತ ವೆಬ್ ಸರಣಿಗಳು ಮತ್ತು ಬಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ