ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Basavanagudi Kadalekai Parishe: ಸ್ಟ್ರೀಟ್ ಶಾಪಿಂಗ್ ಪ್ರಿಯರ ಸ್ವರ್ಗವಾದ ಬಸವನಗುಡಿ ಕಡಲೆಕಾಯಿ ಪರಿಷೆ!

Street Shopping 2025: ಈಗಾಗಲೇ ಬಸವನಗುಡಿಯಲ್ಲಿ ಆರಂಭವಾಗಿರುವ ಕಡಲೆಕಾಯಿ ಪರಿಷೆ ಸದ್ಯ ಸ್ಟ್ರೀಟ್ ಶಾಪಿಂಗ್ ಪ್ರಿಯರ ಸ್ವರ್ಗವಾಗಿದೆ. ಇನ್ನು, ಒಂದೆರೆಡು ದಿನಗಳ ಕಾಲ ಮುಂದುವರೆಯುವ ಈ ಪರಿಷೆಯಲ್ಲಿ ಕೊಳ್ಳುಗರು ಗಮನದಲ್ಲಿಟ್ಟುಕೊಳ್ಳಬೇಕಾದ್ದೇನು? ಈ ಕುರಿತ ಡಿಟೀಲ್ಸ್‌ ಇಲ್ಲಿದೆ.

ಬಸವನಗುಡಿ ಕಡಲೆಕಾಯಿ ಪರಿಷೆ (ಚಿತ್ರಗಳು: ಮಿಂಚು)
1/5

ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯ ರಂಗು ಹೆಚ್ಚಾಗಿದೆ. ಎಲ್ಲಿ ನೋಡಿದರೂ ಅಂಗಡಿಗಳ ದರ್ಬಾರು. ಸ್ಟ್ರೀಟ್ ಶಾಪಿಂಗ್ ಮಾಡುವವರಿಗೆ ಸದ್ಯ ಇನ್ನೂ ಒಂದೆರೆಡು ದಿನ ಹೇಳಿ ಮಾಡಿಸಿದ ತಾಣವಾಗಿದೆ.

ಪರಿಷೆಯಲ್ಲಿ ಏನೇನು ಲಭ್ಯ

ಡ್ರೆಸ್‌ಗಳು, ಇಮಿಟೇಷನ್ ಹಾಗೂ ಜಣಕ್ ಆಭರಣಗಳು, ಹೇರ್ ಆಕ್ಸೆಸರೀಸ್, ಗೃಹಾಲಂಕಾರದ ಸಾಮಗ್ರಿಗಳು, ಫುಡ್ ಸ್ಟಾಲ್‌ಗಳು, ಹಾರ್ಡ್‌ವೇರ್/ಮೊಬೈಲ್ ಬಿಡಿ ಭಾಗಗಳು, ಬುಕ್ಸ್, ಕರಕುಶಲ ವಸ್ತುಗಳು, ಮಕ್ಕಳಿಗೆ ಬೇಕಾದ ಆಟಿಕೆಗಳು, ದಿನ ನಿತ್ಯ ಬಳಕೆಗೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಮನೆಗೆ ಬೇಕಾದ ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದೊರೆಯುತ್ತವೆ.

2/5

ಕಾರ್ಡ್‌ಗಳ ಬಳಕೆ ಬೇಡ

ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಇಲ್ಲಿ ವರ್ಕೌಟ್ ಆಗುವುದಿಲ್ಲ. ಜಿಪೇ ಮಾಡಬಹುದು ಅಥವಾ ಎಷ್ಟು ಬೇಕು, ಅಷ್ಟು ನಗದು ಹಾಗೂ ಚಿಲ್ಲರೆ ಹಣ ಬ್ಯಾಗ್‌ನಲ್ಲಿಟ್ಟುಕೊಳ್ಳುವುದು ಉತ್ತಮ.

3/5

ಲಿಸ್ಟ್ ಮಾಡಿ ಖರೀದಿಸಿ

ಅಗತ್ಯ ವಿರುವ ವಸ್ತುಗಳ ಲಿಸ್ಟ್ ಮೊದಲೇ ಮಾಡಿ. ಅನಗತ್ಯ ದುಂದು ವೆಚ್ಚ ಮಾಡಬೇಡಿ.

ಬೆಲೆ ಮೊದಲೇ ತಿಳಿದುಕೊಳ್ಳಿ

ಕೆಲವೆಡೆ ಫಿಕ್ಸೆಡ್ ರೇಟ್ ಇರುವುದಿಲ್ಲ. ಚೌಕಾಸಿಗೆ ಹೆಚ್ಚಿನ ಮಹತ್ವ ಇರುತ್ತದೆ. ಬಜೆಟ್ ಎಷ್ಟೆಂದು ಮೊದಲೇ ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡುವಾಗ ಚೌಕಾಸಿ ಮಾಡಿ. ಯಾವುದೇ ವಸ್ತು ಕೊಳ್ಳುವಾಗ ಅದರ ಮೇಲೆ ಅತಿಯಾದ ಪ್ರೀತಿ ತೋರಿಸಬೇಡಿ. ಇದನ್ನು ಗಮನಿಸುವ ಮಾರಾಟಗಾರ ಅದಕ್ಕೆ ದುಪ್ಪಟ್ಟು ಬೆಲೆ ಹೇಳುವ ಸಾಧ್ಯತೆ ಇರುತ್ತದೆ.

4/5

ಪ್ಳಾಸ್ಟಿಕ್ ಅವಾಯ್ಡ್ ಮಾಡಿ

ಪ್ಲಾಸ್ಟಿಕ್ ಬ್ಯಾಗ್ ಅವಾಯ್ಡ್ ಮಾಡಿ. ಶಾಪಿಂಗ್ ಹೊರಡುವ ಮುನ್ನ ದೊಡ್ಡ ಕ್ಯಾರಿ ಬ್ಯಾಗನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ.

5/5

ಪರೀಕ್ಷಿಸಿ ಖರೀದಿಸಿ

ಇಲ್ಲಿ ಸೆಕೆಂಡ್ ಹ್ಯಾಂಡ್ ವಸ್ತುಗಳು ಅಥವಾ ಡ್ಯಾಮೇಜ್ ಇರುವ ವಸ್ತುಗಳು ಮಾರಾಟವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಕೊಂಡು ಕೊಳ್ಳುವಾಗ ಪರೀಕ್ಷಿಸಿ ಕೊಳ್ಳಿ. ಪರಿಷೆಯಲ್ಲಿ ಖರೀದಿಸುವ ವಸ್ತುಗಳಿಗೆ ಗ್ಯಾರಂಟಿ ಇರುವುದಿಲ್ಲಎಂಬುದು ನೆನಪಿರಲಿ. ಸ್ಟ್ರೀಟ್ ಶಾಪಿಂಗ್‌ನಲ್ಲಿ ವರ್ತ್ ಎನಿಸುವಂತದ್ದನ್ನು ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author