Beauty Tips: ತುಟಿಯ ಸೌಂದರ್ಯ ಹೆಚ್ಚಿಸುವ ಬಣ್ಣ ಬಣ್ಣದ ಲಿಪ್ ಪೆನ್ಸಿಲ್‌ಗಳ ಜಾದೂ
Lip Pencils: ಲಿಪ್‌ಸ್ಟಿಕ್ ಹಚ್ಚುವ ಮುನ್ನ ಲಿಪ್ ಪೆನ್ಸಿಲ್‌ನಿಂದ ಲೈನ್ ಹಾಕುವುದರಿಂದ ನಿಮ್ಮ ತುಟಿಗಳು ಮತ್ತಷ್ಟು ಅಂದವಾಗಿ ಕಾಣಿಸುತ್ತವೆ. ಆಯಾ ಲಿಪ್‌ಸ್ಟಿಕ್‌ಗೆ ಹೊಂದುವಂತೆ ಲಿಪ್ ಪೆನ್ಸಿಲ್‌ಗಳಿಂದ ಲೈನ್ ಎಳೆದಾಗ ಮಾತ್ರ ಮೇಕಪ್ ಮತ್ತಷ್ಟು ಹೈಲೈಟಾಗುವುದು. ಈ ಕುರಿತಂತೆ ಒಂದಿಷ್ಟು ಟಿಪ್ಸ್ ಇಲ್ಲಿವೆ.
ತುಟಿಯ ಸೌಂದರ್ಯವನ್ನು ಹೆಚ್ಚಿಸುವ ನಾನಾ ಕಲರ್‌ಗಳ ಲಿಪ್ ಪೆನ್ಸಿಲ್‌ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿದ್ದು, ಲೆಕ್ಕವಿಲ್ಲದಷ್ಟೂ ಬ್ರ್ಯಾಂಡ್‌ಗಳಲ್ಲಿ ದೊರಕುತ್ತಿವೆ.
ಲಿಪ್ ಪೆನ್ಸಿಲ್ ಸೂಕ್ತ ಬಳಕೆ ಅವಶ್ಯ
ಹೌದು, ಆಯಾ ಲಿಪ್‌ಸ್ಟಿಕ್‌ಗೆ ಹೊಂದುವಂತೆ ಲಿಪ್ ಪೆನ್ಸಿಲ್‌ಗಳಿಂದ ಲೈನ್ ಎಳೆದಾಗ ಮಾತ್ರ ಮೇಕಪ್ ಮತ್ತಷ್ಟು ಹೈಲೈಟಾಗುವುದು. ಹಾಗಾಗಿ ತುಟಿಯ ಬಣ್ಣದ ಕಲರ್‌ಗೆ ಹೊಂದುವಂತಹ ಲಿಪ್ ಪೆನ್ಸಿಲ್‌ಗಳ ಆಯ್ಕೆ ಮಾಡಬೇಕು ಹಾಗೂ ಅದನ್ನು ಪರ್ಫೆಕ್ಟಾಗಿ ಹಚ್ಚುವ ಬಗೆಯನ್ನೂ ಕೂಡ ತಿಳಿದುಕೊಳ್ಳಬೇಕು ಎನ್ನುವ ಬ್ಯೂಟಿ ಎಕ್ಸ್‌ಪರ್ಟ್ ದಿಯಾ, ಈ ಕುರಿತಂತೆ ಒಂದಿಷ್ಟು ಮಾಹಿತಿ ನೀಡಿದ್ದಾರೆ.
ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಲಿಪ್ ಲೈನರ್ಸ್/ಪೆನ್ಸಿಲ್
ಪಿಂಕ್ ಮಿಕ್ಸ್ ರೆಡ್, ವಯ್ಲೆಟ್ ಮಿಕ್ಸ್ ಡಾರ್ಕ್ ಶೇಡ್ಡ್ಸ್, ವೆರೈಟಿ ಪಿಂಕ್ ಶೇಡ್‌ಗಳು, ಮರೂನ್, ಡಾರ್ಕ್ ಚಾಕೋಲೇಟ್, ಪರ್ಪಲ್, ಬ್ರೌನ್ ಕಲರ್‌ನವು ಎಂದಿನಂತೆ ಈ ಸೀಸನ್‌ನಲ್ಲೂ ಬ್ಯೂಟಿ ಲೋಕದಲ್ಲಿವೆ. ಇತ್ತೀಚೆಗೆ ಡಬ್ಬಲ್ ಕಲರ್‌ನ ಲಿಪ್ ಪೆನ್ಸಿಲ್‌ಗಳು ಬಂದಿವೆ.
ಲಿಪ್ ಪೆನ್ಸಿಲ್ ಬಳಸುವುದು ಹೇಗೆ?
ಮೊದಲಿಗೆ ತುಟಿಗಳ ಬಾರ್ಡರ್‌ನಲ್ಲಿ ತೆಳುವಾದ ಲೈನ್ ಹಾಕಿ. ಬಾರ್ಡರ್‌ನಿಂದ ಲೈನ್ ಹೊರ ಬಂದಲ್ಲಿ ನಿಮ್ಮ ಬಳಿಯಿರುವ ಮಾಯಿಶ್ಚರೈಸರ್‌ನಲ್ಲಿ ಹತ್ತಿ ಅದ್ದಿ ಒರೆಸಿ.
ಕೊಂಚ ಬಫ್‌ನಲ್ಲಿ ಪೌಡರ್ ಸಿಂಪಡಿಸಿ. ನಿಮಗಿಷ್ಟವಾದ ಬಣ್ಣದ ಲಿಪ್‌ಸ್ಟಿಕ್ ತುಂಬಿ. ಮತ್ತೊಮ್ಮೆ ಪೆನ್ಸಿಲ್‌ನಲ್ಲಿ ತೆಳುವಾದ ಬಾರ್ಡರ್ ಲೈನರ್ ಹಾಕಿ. ಗಾಢವಾಗಿದ್ದಲ್ಲಿ ಪೌಡರ್ ಬಫ್‌ನಿಂದ ಒಮ್ಮೆ ಡ್ರೈ ಮಾಡಿ. ಟಿಶ್ಯೂ ಪೇಪರ್ ಒತ್ತಿ ಹಿಡಿದೂ ಡ್ರೈ ಮಾಡಬಹುದು.
ಎಕ್ಸ್‌ಪರ್ಟ್ಸ್ ಅಭಿಪ್ರಾಯ
ಮೇಕಪ್‌ನಲ್ಲಿ ಅದರಲ್ಲೂ ಲಿಪ್ ಸ್ಟಿಕ್ ಹಚ್ಚುವ ಮುನ್ನ ಸೂಕ್ತ ಬಣ್ಣದ ಲಿಪ್ ಪೆನ್ಸಿಲ್ ಬಳಸಬೇಕು. ಬಾರ್ಡರ್ ಲೈನ್ ಹಾಕಿ, ಇದರಿಂದಾಗಿ ಹಚ್ಚಿದ ಲಿಪ್‌ಸ್ಟಿಕ್ ಹರಡದು. ಅಲ್ಲದೇ, ನೋಡಲು ನೀಟಾಗಿ ಕಾಣಿಸುತ್ತದೆ. ಯಾವುದೇ ಕಾರಣಕ್ಕೂ ತುಟಿಯಿಂದ ಲಿಪ್‌ಸ್ಟಿಕ್ ಆಚೆ ಬಂದಂತೆ ಕಾಣಿಸುವುದಿಲ್ಲ! ಆಕರ್ಷಕವಾಗಿ ಕಾಣುವುದು ಎನ್ನುತ್ತಾರೆ ಸೆಲೆಬ್ರೆಟಿ ಮೇಕಪ್ ಆರ್ಟಿಸ್ಟ್ ನೇಹಾ ಖನ್ನಾ.
ಪರ್ಫೆಕ್ಟ್ ಲಿಪ್ ಪೆನ್ಸಿಲ್ ಆಯ್ಕೆ ಹೀಗೆ ಮಾಡಿ
- ನೀವು ಅತಿ ಹೆಚ್ಚಾಗಿ ಬಳಸುವ ಲಿಪ್‌ಸ್ಟಿಕ್ ಬಣ್ಣಕ್ಕೆ ಹೊಂದುವಂತಹ ಲಿಪ್ ಪೆನ್ಸಿಲ್ ಖರೀದಿಸಿ.
- ಆದಷ್ಟೂ ಲಿಪ್‌ಸ್ಟಿಕ್‌ಗಿಂತ ಡಾರ್ಕ್ ಕಲರ್ ಇದ್ದಲ್ಲಿ ಎಥ್ನಿವೇರ್‌ಗಳಿಗೆ ಆಕರ್ಷಕವಾಗಿ ಕಾಣಿಸುವುದು.
- ಗ್ಲಾಸಿ ಲಿಪ್‌ಸ್ಟಿಕ್‌ಗಳಿಗೆ ಮಾತ್ರ ಅದೇ ಬಣ್ಣದ ಲಿಪ್ ಪೆನ್ಸಿಲ್ ಬಳಸುವುದು ಉತ್ತಮ.
- ದಪ್ಪನೆಯ ಲೈನ್ ನಿಬ್ ಇರುವಂತಹ ಪೆನ್ಸಿಲ್ ಆಯ್ಕೆ ಬೇಡ!
- ಪೆನ್ಸಿಲ್ ಬೇಡವಾದಲ್ಲಿ ಲಿಪ್ ಸ್ಕೆಚ್ ಪೆನ್‌ಗಳು ಲಭ್ಯ.
- ಆದಷ್ಟೂ ಬ್ರ್ಯಾಂಡೆಡ್ ಲಿಪ್ ಪೆನ್ಸಿಲ್ ಕೊಳ್ಳಿ.