ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ʻನಿನ್ನ ನಗು ಮಾಸದಂತೆ ನೋಡಿಕೊಳ್ಳುವೆʼ; ಭಾವಿ ಪತ್ನಿ ಕಾವ್ಯರನ್ನು ಪರಿಚಯಿಸಿದ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್

ತೆಲುಗಿನಲ್ಲಿ ಅಲ್ಲು ಸಿರೀಶ್,‌ ವಿಜಯ್‌ ದೇವರಕೊಂಡ ಹೀಗೆ ಸಾಲು ಸಾಲು ಹೀರೋಗಳು ಬ್ಯಾಚುಲರ್‌ ಲೈಫ್‌ಗೆ ಗುಡ್ ಬೈ ಹೇಳಿ ಮದುವೆ ಆಗುತ್ತಿದ್ದಾರೆ. ಆ ಸಾಲಿಗೆ ಈಗ ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್‌ ಕೂಡ ಸೇರಿಕೊಂಡಿದ್ದಾರೆ. ಕಾವ್ಯ ಎಂಬುವವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಬೆಲ್ಲಂಕೊಂಡ ಶ್ರೀನಿವಾಸ್‌, ಇದೀಗ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲು ಮದುವೆ ನಿಶ್ಚಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಇದು ನಿಶ್ಚಿತಾರ್ಥವಲ್ಲ, ಕೇವಲ ಒಂದು ಸಣ್ಣ ಕುಟುಂಬದ ಘೋಷಣೆಯಷ್ಟೇ.. ಸಂಭ್ರಮಾಚರಣೆಗಳು ಇನ್ನು ಮುಂದೆ ಶುರುವಾಗಬೇಕಿದೆ ಮತ್ತು ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು.

1/6

ಭಾವಿ ಪತ್ನಿ ಕಾವ್ಯ ಅವರ ಜೊತೆಗಿನ ಫೋಟೋಗಳನ್ನು ಶೇರ್‌ ಮಾಡಿ, ಸುಂದರ ಸಾಲುಗಳನ್ನು ಹಂಚಿಕೊಂಡಿದ್ದಾರೆ ಬೆಲ್ಲಂಕೊಂಡ ಶ್ರೀನಿವಾಸ್‌.

2/6

"ನನ್ನ ಕಾವ್ಯಾಮ್ಮ, ಬದುಕಿನಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಸುಂದರ ಸಮಯವಿರುತ್ತದೆ... ಹಾಗೆಯೇ ನನ್ನ ಬದುಕು ನಿನ್ನನ್ನು ನನ್ನ ಪ್ರಪಂಚಕ್ಕೆ ಪರಿಚಯಿಸಿತು" ಎಂದಿದ್ದಾರೆ ಶ್ರೀನಿ.

3/6

"ನನ್ನ ಜೀವನಕ್ಕೆ ಬಂದಿದ್ದಕ್ಕಾಗಿ, ಸರಿಯಾದ ಸಮಯದಲ್ಲಿ ನನ್ನನ್ನು ನಂಬಿದ್ದಕ್ಕಾಗಿ ಮತ್ತು ನನ್ನ ದಿನಗಳನ್ನು ಸಕಾರಾತ್ಮಕತೆ ಹಾಗೂ ಅಸಂಖ್ಯಾತ ನಗುಗಳಿಂದ ತುಂಬಿಸಿದ್ದಕ್ಕಾಗಿ ನಿನಗೆ ಧನ್ಯವಾದಗಳು" ಎಂದು ಶ್ರೀನಿವಾಸ್‌ ಬರೆದುಕೊಂಡಿದ್ದಾರೆ.

4/6

"ನಿನ್ನ ಮುಖದ ಮೇಲಿರುವ ಈ ನಗು ಎಂದಿಗೂ ಮಾಸದಂತೆ ನಾನು ನೋಡಿಕೊಳ್ಳುತ್ತೇನೆ. ನಮ್ಮಿಬ್ಬರ ಜೀವನಪರ್ಯಂತದ ಸಾಂಗತ್ಯಕ್ಕಾಗಿ ನಾನು ಕಾತರದಿಂದ ಕಾಯುತ್ತಿದ್ದೇನೆ, ಪ್ರೀತಿಯೊಂದಿಗೆ ನಿನ್ನ ಶ್ರೀನಿ.." ಎಂದು ಬೆಲ್ಲಂಕೊಂಡ ಶ್ರೀನಿವಾಸ್‌ ಹೇಳಿದ್ದಾರೆ.

5/6

33 ವರ್ಷದ ಬೆಲ್ಲಂಕೊಂಡ ಶ್ರೀನಿವಾಸ್‌ ಅವರು 2014ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಇವರ ತಂದೆ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್‌.

6/6

ಕಳೆದ 12 ವರ್ಷಗಳಲ್ಲಿ 10ಕ್ಕೂ ಅಧಿಕ ಸಿನಿಮಾಗಳಲ್ಲಿ ಶ್ರೀನಿವಾಸ್‌ ನಟಿಸಿದ್ದಾರೆ. ಸದ್ಯ ಟೈಸನ್‌ ನಾಯ್ಡು, ಹೈಂಧವ ಎಂಬೆರಡು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.