ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Belt Dress Fashion 2026: ವೈವಿಧ್ಯಮಯ ವಿನ್ಯಾಸಗಳಲ್ಲಿ ಬಂತು ಬೆಲ್ಟ್ ಡ್ರೆಸ್

Belt Dresses: ನಾನಾ ಬಗೆಯ ಬೆಲ್ಟ್ ಡ್ರೆಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಸೀಸನ್‌ನಲ್ಲಿ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಬೆಲ್ಟ್‌ನೊಂದಿಗೆ ಬಿಡುಗಡೆಯಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಅದರಲ್ಲೂ ಹೆಚ್ಚು ಪ್ರಚಲಿತದಲ್ಲಿರುವ ಮಾನೋ ಕ್ರೋಮ್ ವರ್ಣದವು ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್‌ಗಳು ಟೀನೇಜ್ ಹುಡುಗಿಯರನ್ನು ಸೆಳೆದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಮಾಹಿತಿ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್
1/5

ಬೆಲ್ಟ್ ಡ್ರೆಸ್‌ಗಳು ಮರಳಿ ಟ್ರೆಂಡಿಯಾಗಿವೆ. ಈ ಸೀಸನ್‌ನಲ್ಲಿ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಬೆಲ್ಟ್‌ನೊಂದಿಗೆ ಬಿಡುಗಡೆಯಾಗಿದ್ದು, ನೋಡಲು ಅತ್ಯಾಕರ್ಷಕವಾಗಿವೆ. ಅದರಲ್ಲೂ ಹೆಚ್ಚು ಪ್ರಚಲಿತದಲ್ಲಿರುವ ಮಾನೋ ಕ್ರೋಮ್ ವರ್ಣದವು ಉಡುಪಿನ ಜತೆಯಲ್ಲೆ ಅಟ್ಯಾಚ್ ಆಗಿರುವಂತಹ ಬೆಲ್ಟ್ ಡ್ರೆಸ್‌ಗಳು ಟೀನೇಜ್ ಹುಡುಗಿಯರನ್ನು ಸೆಳೆದಿವೆ.

2/5

ಮಾನೋಕ್ರೋಮ್ ಬೆಲ್ಟ್ ಡ್ರೆಸ್

ಈ ಉಡುಪಿನಲ್ಲಿ ಅಟ್ಯಾಚ್ ಆಗಿರುವ ಬೆಲ್ಟ್ ಸೇಮ್ ಟು ಸೇಮ್ ಉಡುಪಿನ ಬಣ್ಣದ್ದಾಗಿರುತ್ತವೆ. ಒಂದೇ ಶೇಡ್ ಹೊಂದಿರುತ್ತವೆ. ಸಿನಿಮಾ ತಾರೆಯರು ಈ ಶೈಲಿಯ ಡ್ರೆಸ್ ಪ್ರಿಯರು.

ಸ್ಟೇಟ್‌ಮೆಂಟ್ ಬೆಲ್ಟ್ ಡ್ರೆಸ್

ಇವು ಉಡುಪಿನ ಥೀಮ್ಗೆ ತಕ್ಕಂತೆ ವಿನ್ಯಾಸವನ್ನೊಳಗೊಂಡ ವಿಶೇಷ ರೀತಿಯ ಬೆಲ್ಟ್‌ಗಳು. ಡ್ರೆಸ್‌ನೊಂದಿಗೆ ಇವು ಕೂಡ ಬೋಲ್ಡ್ ಪ್ಯಾಟರ್ನ್ ನಲ್ಲಿರುತ್ತವೆ. ಔಟ್ ಫಿಟ್ ಜತೆ ಎದ್ದು ಕಾಣುತ್ತವೆ. ಇವುಗಳ ಬೆಲೆ ಕೊಂಚ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ಸ್.

3/5

ಬಿಗ್ ಬಕಲ್ ಬೆಲ್ಟ್ ಡ್ರೆಸ್

ಇನ್ನು, ಟಮ್ಮಿಯ ಭಾಗವನ್ನು ಹೈಲೈಟ್ ಮಾಡುವ ಬಿಗ್ ಬಕಲ್ ಬೆಲ್ಟ್ ಡ್ರೆಸ್‌ಗಳು ರೆಟ್ರೋ ಲುಕ್ ನೀಡುತ್ತವೆ. ಇಂತಹ ಉಡುಪುಗಳನ್ನು ಹಳೆಯ ಸಿನಿಮಾಗಳಲ್ಲಿ ಕಾಣಬಹುದು. ಆದರೆ, ಈ ಉಡುಪಿಗೆ ಹೆಚ್ಚು ಆಕ್ಸೆಸರೀಸ್ ಧರಿಸಬಾರದು ಎಂಬುದು ಸ್ಟೈಲಿಸ್ಟ್ ರಿಯಾ ಅಭಿಪ್ರಾಯ.

4/5

ಟೈಯಿಂಗ್ ಬೆಲ್ಟ್ ಡ್ರೆಸ್

ಫ್ಯಾಬ್ರಿಕ್‌ನಲ್ಲಿ ತಯಾರಿಸಿದ ಬೆಲ್ಟ್ ಇದಾಗಿದ್ದು, ಟೈಯಿಂಗ್ ಮಾಡುವ ಅಪ್ಷನ್ ಇರುತ್ತದೆ. ಸೈಡ್, ಸೆಂಟರ್ ಹಾಗೂ ಹಿಂದೆ ಟೈಯಿಂಗ್ ಮಾಡುವ ವಿಧಾನವನ್ನು ಈ ಡ್ರೆಸ್‌ನಲ್ಲಿ ಅಳವಡಿಸಲಾಗಿರುತ್ತದೆ. ‌

ಕ್ಯಾಶುವಲ್ ಬೆಲ್ಟ್ ಡ್ರೆಸ್

ಕ್ಯಾಶುವಲ್ ಬೆಲ್ಟ್‌ಗಳನ್ನು ಒಳಗೊಂಡ ಉಡುಪುಗಳು ನಾರ್ಮಲ್ ಲುಕ್ ಮಾತ್ರ ನೀಡುತ್ತವೆ.

5/5

ಫಾರ್ಮಲ್ ಬೆಲ್ಟ್ ಡ್ರೆಸ್

ಸ್ಲಿಮ್ ಹಾಗೂ ಸರಳವಾದ ಬೆಲ್ಟ್ ಡ್ರೆಸ್ ಈ ವಿಭಾಗಕ್ಕೆ ಸೇರುತ್ತವೆ. ಯಾವುದೇ ಫ್ಯಾನ್ಸಿ ಡಿಸೈನ್ ಇಲ್ಲದ ಸರಳ ಬಕಲ್‌ಗಳನ್ನು ಹೊಂದಿದ ಗೋಲ್ಡನ್ ಹಾಗೂ ಸಿಲ್ವರ್‌ನವು ಈ ವಿನ್ಯಾಸದಲ್ಲಿ ಚಾಲ್ತಿಯಲ್ಲಿವೆ. ಈ ಬೆಲ್ಟ್‌ಗಳನ್ನು ತೆಗೆದು ಇತರೇ ಉಡುಪುಗಳೊಂದಿಗೂ ಧರಿಸಬಹುದು.

ಬಗೆಬಗೆಯ ಬೆಲ್ಟ್ ಡ್ರೆಸ್‌ಗಳಿವು

ಕಾಂಟ್ರಸ್ಟ್ ಶೇಡ್ಸ್‌ನ ಪೇಟೆಂಟ್ ಬೆಲ್ಟ್ ಡ್ರೆಸ್, ಬೂಟ್ ಕಟ್ ಜೀನ್ಸ್‌ಗೆ ಹೊಂದುವ ಆರ್ನಾಟ್ ಬಕ್ಕಲ್ಸ್ ಬೆಲ್ಟ್‌ ಡ್ರೆಸ್, ಹವರ್ ಗ್ಲಾಸ್ ಶೇಪ್ ನೀಡುವ ಡಬ್ಬಲ್ ಬಕ್ಕಲ್ ಡ್ರೆಸ್, ಸ್ಕಿನ್ನಿ ಬೆಲ್ಟ್ ಡ್ರೆಸ್, ಬ್ಲೇಜರ್ ಹಾಗೂ ಕೋಟ್‌ನಂತಹ ಉಡುಪುಗಳಲ್ಲಿನ ಇಕ್ವೆಟೇರಿಯನ್, ವ್ರಾಪ್, ಕ್ಲೊಶರ್, ಫ್ರಿಂಝ್, ಲೂಪ್ ಲೆಯರ್, ಕೆವ್ ಬಕ್ಕಲ್ ಬೆಲ್ಟ್ ಡ್ರೆಸ್‌ಗಳು ಕೂಡ ಚಾಲ್ತಿಯಲ್ಲಿವೆ ಎನ್ನುತ್ತಾರೆ ಮಾರಾಟಗಾರರು.

ಶೀಲಾ ಸಿ ಶೆಟ್ಟಿ

View all posts by this author