Photos: ಸದ್ದಿಲ್ಲದೇ ಕರಾವಳಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಜೋಡಿ ಹಕ್ಕಿʼ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್
ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರಾವ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಅತ್ಯಂತ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿಯ 'ಜಾನಕಿ ಟೀಚರ್' ಎಂದೇ ಪ್ರಸಿದ್ಧಿ ಪಡೆದು ಕನ್ನಡಿಗರ ಮನಗೆದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲೂ 'ಬೃಂದಾ' ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಧಾರಾವಾಹಿ ಅಂತ್ಯಗೊಂಡ ಬೆನ್ನಲ್ಲೇ, ಚೈತ್ರಾ ರಾವ್ ತಮ್ಮ ಬದುಕಿನ ಹೊಸ ಪಯಣವನ್ನು ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ಮದುವೆಯ ಸುಂದರ ಕ್ಷಣಗಳ ಫೋಟೋ ಆಲ್ಬಂ ಇಲ್ಲಿದೆ ನೋಡಿ...
1/6
ಸೆಲೆಬ್ರಿಟಿಗಳ ಮದುವೆ ಎಂದರೆ ಸಾಮಾನ್ಯವಾಗಿ ಅದ್ದೂರಿತನ, ಸಾವಿರಾರು ಅತಿಥಿಗಳು ಮತ್ತು ಗ್ರ್ಯಾಂಡ್ ಅಲಂಕಾರವಿರುತ್ತದೆ; ಆದರೆ ನಟಿ ಚೈತ್ರಾ ರಾವ್ ಅತ್ಯಂತ ಸಿಂಪಲ್ ಆಗಿ ಸಪ್ತಪದಿ ತುಳಿದಿದ್ದಾರೆ.
2/6
ಕರಾವಳಿಯ ಸಂಪ್ರದಾಯದ ಪ್ರಕಾರ, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಮದುವೆ ನೆರವೇರಿದೆ.
3/6
ಚೈತ್ರಾ ರಾವ್ ಕೈಹಿಡಿದ ಹುಡುಗನ ಹೆಸರು ಕೌಶಿಕ್. ಇವರು ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಬರಹಗಾರ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
4/6
ನವದಂಪತಿ ತಮ್ಮ ಮದುವೆಯ ಸುಂದರ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, "ಸರಳ, ಪವಿತ್ರ ಮತ್ತು ಪ್ರಶಾಂತ" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
5/6
ಮದುವೆಯ ಫೋಟೋಗಳು ವೈರಲ್ ಆಗುತ್ತಿದ್ದಂತೆ ಕಿರುತೆರೆ ಕಲಾವಿದರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.
6/6
ಮದುವೆಯಾದ ಖುಷಿಯಲ್ಲಿ ʻಜೋಡಿ ಹಕ್ಕಿ' ಧಾರಾವಾಹಿಯ 'ಜಾನಕಿ ಟೀಚರ್' ಖ್ಯಾತಿಯ ಚೈತ್ರಾ ರಾವ್