Bhavana Ramanna: ನಟಿ ಭಾವನಾ ರಾಮಣ್ಣ ಮಗಳ ನಾಮಕರಣ ಸಂಭ್ರಮ: ಅಜ್ಜಿಯ ಹೆಸರಿಟ್ಟ ನಟಿ!
Bhavana Ramanna: ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದಾರೆ. ಗರ್ಭಿಣಿಯಾಗಿದ್ದಾಗಲೇ ಭಾವನಾ ಅವರು ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದರು. ಭಾವನಾ ಅವರ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಆಗಿದ್ದರಿಂದಾಗಿ ಅವಧಿ ಪೂರ್ವವಾಗಿ ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.
ಸ್ಯಾಂಡಲ್‌ವುಡ್ ನಟಿ ಭಾವನ ರಾಮಣ್ಣ ಐವಿಎಫ್ ಮೂಲಕ ಮಗು ಪಡೆದುಕೊಂಡಿರೋದು ಗೊತ್ತೇ ಇದೆ. ಭಾವನಾ ಐವಿಎಫ್ ಮೂಲಕ ಎರಡು ಮಗುವನ್ನು ಪಡೆದುಕೊಂಡಿದ್ದರು. ಆದರೆ ದುರ್ವಿಧಿಯಂತೆ ಒಂದು ಮಗು ಸಾವನ್ನಪ್ಪಿತ್ತು. ಇದೀಗ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದು, ಅದರ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ತಮ್ಮ 40ನೇ ವಯಸ್ಸಿನಲ್ಲಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಭಾವನಾ ರಾಮಣ್ಣ ತಾವು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಗರ್ಭ ಧರಿಸಿರುವುದಾಗಿ ಗುಡ್ ನ್ಯೂಸ್ ಹಂಚಿಕೊಂಡಿದ್ದರು.
ಆಗಸ್ಟ್ 20ರಂದು ಹೆಣ್ಣು ಮಗುವಿಗೆ ಭಾವನಾ ರಾಮಣ್ಣ ಜನ್ಮ ನೀಡಿದ್ದು, ಮಗಳಿಗೆ ʻರುಕ್ಮಿಣಿʼ ಎಂದು ಹೆಸರಿಟ್ಟಿದ್ದಾರೆ.
ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ. ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ.
ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಮಗಳು ಮುದ್ದು ಮುಖವನ್ನು ಹಿಂದೊಮ್ಮೆ ನಟಿ ರಿವೀಲ್ ಮಾಡಿದ್ದರು. ಇದೀಗ ನಾಮಕರಣದ ಫೋಟೋ ವೈರಲ್ ಆಗಿದೆ.
ಗರ್ಭಿಣಿಯಾಗಿದ್ದಾಗಲೇ ಭಾವನಾ ಅವರು ತಮ್ಮ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದರು. ಭಾವನಾ ಅವರ ಅವಳಿ ಮಕ್ಕಳಲ್ಲಿ ಒಂದು ಮಗುವಿಗೆ ಸಮಸ್ಯೆ ಆಗಿದ್ದರಿಂದಾಗಿ ಅವಧಿ ಪೂರ್ವವಾಗಿ ಆಪರೇಷನ್ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು.
ಇದೇ ಕಾರಣಕ್ಕೆ ಎರಡು ತಿಂಗಳ ಹಿಂದೆ ಅಂದರೆ ಎಂಟನೇ ತಿಂಗಳಲ್ಲಿಯೇ ಭಾವನಾ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.