Big Jumka fashion 2026: ಸೆಲೆಬ್ರಿಟಿ ಲುಕ್ ನೀಡುವ ಬಟ್ಟಲಗಲದ ಬಿಗ್ ಜುಮ್ಕಾಗಳು
Big Jumkas: ಸೆಲೆಬ್ರಿಟಿ ಲುಕ್ ನೀಡುವ ನೋಡಲು ಪುಟ್ಟ ಬಟ್ಟಲಿನಂತೆ ಕಾಣಿಸುವ ಬಿಗ್ ಜುಮ್ಕಾಗಳು ಮತ್ತೊಮ್ಮೆ ಯುವತಿಯರ ಕಿವಿಯನ್ನು ಅಲಂಕರಿಸುತ್ತಿವೆ. ಯಾವ್ಯಾವ ವಿನ್ಯಾಸದವು ಟ್ರೆಂಡಿಯಾಗಿವೆ? ಎಂಬುದರ ಬಗ್ಗೆ ಜ್ಯುವೆಲ್ ಸ್ಟೈಲಿಸ್ಟ್‌ಗಳು ವಿವರಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಧರಿಸಿದಾಗ ಥೇಟ್ ಸೆಲೆಬ್ರಿಟಿ ಲುಕ್ ನೀಡುವ ನೋಡಲು ಪುಟ್ಟ ಬಟ್ಟಲಿನಂತೆ ಕಾಣಿಸುವ ಬಿಗ್ ಜುಮ್ಕಾಗಳು ಈ ಜನರೇಷನ್ ಯುವತಿಯರ ಕಿವಿಯನ್ನು ಸಿಂಗರಿಸುತ್ತಿವೆ.
ಟ್ರೆಂಡಿಯಾಗಿರುವ ಬಿಗ್ ಜುಮ್ಕಾಗಳು
ಹೌದು, ಬಿಗ್ ಸೈಝಿನ ವೈವಿಧ್ಯಮಯ ಜುಮ್ಕಾಗಳು ಹಾಗೂ ಕಿವಿಗಿಂತ ದೊಡ್ಡದಾಗಿರುವ ಜುಮ್ಕಾಗಳು ಈ ಸೀಸನ್ನಲ್ಲಿ ಟ್ರೆಂಡಿಯಾಗಿವೆ. ಅವುಗಳಲ್ಲಿ ದೊಡ್ಡ ಸೈಝಿನ ಹ್ಯಾಂಗಿಂಗ್ ಹೂಪ್ ಡಿಸೈನ್‌ನವು, ಬೀಡ್ಸ್, ಪರ್ಲ್ ಹೀಗೆ ಸಾಕಷ್ಟು ವೆರೈಟಿಯವು ವೈಟ್, ಬ್ಲ್ಯಾಕ್ ಹಾಗೂ ಗೋಲ್ಡ್ ಪ್ಲೇಟೆಡ್ ಮೆಟಲ್‌ಗಳಲ್ಲಿ ದೊರೆಯುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಬಟ್ಟಲಗಲದ ಬಿಗ್ ಜುಮ್ಕಾಗಳು
ಎಲ್ಲರಿಗೂ ತಿಳಿದಿರುವಂತೆ, ಪ್ರತಿ ಸೀಸನ್ನಲ್ಲೂ ಬಿಗ್ ಜುಮ್ಕಾಗಳಲ್ಲಿ ಒಂದೊಂದು ಬಗೆಯ ಜುಮ್ಕಾಗಳು ಕಾಲಿಡುತ್ತವೆ. ಅವುಗಳಲ್ಲಿ ಈ ಬಾರಿ ನಾನಾ ಬಗೆಯ ಬಟ್ಟಲಾಕಾರದ ಜುಮ್ಕಾಗಳು ಕಾಲಿಟ್ಟಿವೆ. ಇವು ಯಾವುದೇ ಬಗೆಯ ಟ್ರೆಡಿಷನಲ್ ಅಥವಾ ಎಥ್ನಿಕ್ ಉಡುಪಿಗೆ ಮ್ಯಾಚ್ ಆಗುವಂತಹ ಡಿಸೈನ್ನಲ್ಲಿ ಬಂದಿವೆ. ಇನ್ನು ಜುಮಕಿಯ ಕೆಳಗಡೆ ಸಾಲುಸಾಲಾಗಿ ಇರುವ ಬೀಡ್ಸ್ ಬಿಗ್ ಜುಮ್ಕಾಗಳು ಧರಿಸಿದವರನ್ನು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್ ರೀಟಾ.
ಲೈಟ್‌ವೇಟ್ ಬಿಗ್ ಜುಮ್ಕಾಗಳು
ಸಾಕಷ್ಟು ಜನರಿಗೆ ಬಟ್ಟಲಗಲದ ಬಿಗ್ ಜುಮ್ಕಾಗಳು ಭಾರವಾಗುವುದಿಲ್ಲವೇ! ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ಇದೀಗ ಇವು ಭಾರವಿಲ್ಲದ ಮೆಟಲ್‌ನಲ್ಲಿ ಆಗಮಿಸಿವೆ. ಅವುಗಳಲ್ಲಿ ಲೈಟ್‌ವೇಟ್ ವೈಟ್ ಮೆಟಲ್ , ಬ್ಲಾಕ್ ಮೆಟಲ್ ಅಥವಾ ವನ್ ಗ್ರಾಮ್ ಗೋಲ್ಡ್‌ನವು ಪ್ರಚಲಿತದಲ್ಲಿವೆ. ಇವನ್ನು ಧರಿಸಿದಾಗ ಭಾರವೆನಿಸುವುದಿಲ್ಲ ಎನ್ನುವ ಸ್ಟೈಲಿಸ್ಟ್ ರಿಯಾ ಪ್ರಕಾರ, ಬಿಗ್ ಸೈಝಿನ ಜುಮ್ಕಾಗಳಲ್ಲಿ ಸ್ಟಡ್ಸ್ ಹಾಗೂ ಹ್ಯಾಂಗಿಂಗ್ ಶೈಲಿಯವು ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ.
ಬಿಗ್ ಜುಮ್ಕಾಗಳನ್ನು ಆಯ್ಕೆ ಮಾಡುವ ಮುನ್ನ
- ಟ್ರಯಲ್ ನೋಡಿ ಖರೀದಿ ಮಾಡಿ.
- ಯಾವುದೇ ಕಾರಣಕ್ಕೂ ಪರಿಶೀಲಿಸದೇ ಖರೀದಿಸಬೇಡಿ.
- ಆನ್‌ಲೈನ್ ಶಾಪಿಂಗ್‌ಗಿಂತ ಅಂಗಡಿಗೆ ತೆರಳಿ ಕೊಳ್ಳುವುದು ಉತ್ತಮ.
- ನಿಮ್ಮ ಕಿವಿಯ ಆಕಾರಕ್ಕೆ ಹೊಂದುವಂತದ್ದನ್ನು ಕೊಳ್ಳಿ.
- ಫಿನಿಶಿಂಗ್ ಚೆನ್ನಾಗಿರುವುದನ್ನು ಆಯ್ಕೆ ಮಾಡಿ ಧರಿಸಿ.