ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shishir Shastry Birthday: ಗ್ರ್ಯಾಂಡ್‌ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ 'Bigg Boss' ಶಿಶಿರ್‌ ಶಾಸ್ತ್ರಿ; ಇಲ್ಲಿವೆ ನೋಡಿ ಫೋಟೋಗಳು

'ಬಿಗ್‌ ಬಾಸ್ ಕನ್ನಡ 11' ಸ್ಪರ್ಧಿ ಮತ್ತು ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಅವರ ಹುಟ್ಟುಹಬ್ಬವನ್ನು ಅವರ ಗೆಳತಿ, 'ಬಿಗ್‌ ಬಾಸ್ ಕನ್ನಡ 11'ರ ಮತ್ತೋರ್ವ ಸ್ಪರ್ಧಿ ಐಶ್ವರ್ಯಾ ಶಿಂಧೋಗಿ ಅತ್ಯಂತ ಅದ್ದೂರಿಯಾಗಿ ಆಚರಿಸಿದ್ದಾರೆ. ದೊಡ್ಮನೆಯೊಳಗೆ ಚಿಗುರಿದ ಇವರಿಬ್ಬರ ಸ್ನೇಹ, ಹೊರಗೆ ಬಂದ ನಂತರವೂ ಮುಂದುವರೆದಿದ್ದು, ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಆಗಾಗ ರೀಲ್ಸ್‌ಗಳನ್ನು ಮಾಡಿ ಗಮನ ಸೆಳೆಯುತ್ತಿರುವುದು ಅಭಿಮಾನಿಗಳಿಗೆ ತಿಳಿದೇ ಇದೆ. ಈ ಬಾರಿ ಶಿಶಿರ್ ಶಾಸ್ತ್ರಿ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಐಶ್ವರ್ಯಾ ವಿಶೇಷ ವ್ಯವಸ್ಥೆ ಮಾಡಿದ್ದರು. ಶಿಶಿರ್ ಅವರ ತಂದೆ-ತಾಯಿ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಈ ಬರ್ತ್‌ಡೇ ಪಾರ್ಟಿ ಅದ್ದೂರಿಯಾಗಿ ನಡೆದಿದೆ.

1/5

'ಬಿಗ್‌ ಬಾಸ್ ಕನ್ನಡ 11' ಸ್ಪರ್ಧಿ ಶಿಶಿರ್ ಶಾಸ್ತ್ರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ

2/5

ಶಿಶಿರ್ ಶಾಸ್ತ್ರಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ

3/5

ಶಿಶಿರ್ ಶಾಸ್ತ್ರಿ ಬರ್ತ್‌ಡೇ ಪಾರ್ಟಿಯ ಫೋಟೋಗಳು ಇಲ್ಲಿ ಲಭ್ಯವಿದೆ

4/5

ಗೆಳೆಯ ಶಿಶಿರ್ ಹುಟ್ಟುಹಬ್ಬದ ಪಾರ್ಟಿಯನ್ನು ಐಶ್ವರ್ಯಾ ಶಿಂಧೋಗಿ ವಿಶೇಷವಾಗಿ ಆಯೋಜಿಸಿದ್ದರು

5/5

ಶಿಶಿರ್ ಶಾಸ್ತ್ರಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಅವರ ತಂದೆ-ತಾಯಿ ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು