Blouse Fashion 2026: ಮಾರುಕಟ್ಟೆಯಲ್ಲಿ ರೆಡಿಮೇಡ್ ಬ್ಲೌಸ್‌ಗಳ ಹಂಗಾಮ
Readymade Blouses: ಮುಂಬರುವ ಹಬ್ಬದ ಸೀಸನ್‌ಗೆ ಈಗಾಗಲೇ ಲೆಕ್ಕವಿಲ್ಲದಷ್ಟು ರೆಡಿಮೇಡ್ ಬ್ಲೌಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಯಾವ್ಯಾವ ಡಿಸೈನ್‌ನವು ಕಾಲಿಟ್ಟಿವೆ? ಖರೀದಿಸುವಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
1/5
ಮುಂಬರುವ ಫೆಸ್ಟಿವ್ ಸೀಸನ್‌ಗೆ ಈಗಲೇ ವೈವಿಧ್ಯಮಯ ರೆಡಿಮೇಡ್ ಬ್ಲೌಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ.
2/5
ಮಿಕ್ಸ್ ಮ್ಯಾಚ್ ರೆಡಿಮೇಡ್ ಬ್ಲೌಸ್‌ಗಳು
ಮುಂಬರುವ ಹಬ್ಬದ ಸೀಸನ್‌ನಲ್ಲಿ ಉಡುವ ನಾನಾ ಬಗೆಯ ಸೀರೆಗಳಿಗೆ ಮ್ಯಾಚ್ ಮಾಡಲು ಲೆಕ್ಕವಿಲ್ಲದಷ್ಟು ಮಿಕ್ಸ್ ಮ್ಯಾಚ್ ಹಾಗೂ ಕಾಂಟ್ರಾಸ್ಟ್ ಶೇಡ್‌ನ ಬಗೆಬಗೆಯ ವಿನ್ಯಾಸದ ರೆಡಿಮೇಡ್ ಬ್ಲೌಸ್‌ಗಳು ಎಂಟ್ರಿ ನೀಡಿವೆ ಎನ್ನುತ್ತಾರೆ ಮಾರಾಟಗಾರರು.
3/5
ರೆಡಿಮೇಡ್ ಬ್ಲೌಸ್‌ಗಳ ಲೋಕ
ಎಲ್ಲಾ ವರ್ಗದ ಮಾನಿನಿಯರಿಗೂ ಇಷ್ಟವಾಗುವಂತಹ ನಾನಾ ಬಗೆಯ ರೆಡಿಮೇಡ್ ಬ್ಲೌಸ್‌ಗಳು ಆಗಮಿಸಿವೆ. ಬೆಲೆಬಾಳುವ ರೇಷ್ಮೆ ಸೀರೆಯ ಮ್ಯಾಚಿಂಗ್ ಮಾಡುವುದರಿಂದಿಡಿದು ಕಾಟನ್, ಕ್ರೇಪ್, ಜಾರ್ಜೆಟ್, ಪಾರ್ಟಿ ಸಿಕ್ವೀನ್ಸ್ ಸೀರೆಗಳಿಗೂ ಬಗೆಬಗೆಯ ರೆಡಿಮೇಡ್ ಬ್ಲೌಸ್‌ಗಳು ದೊರೆಯುತ್ತಿವೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ಪಾಯಲ್.
4/5
ವೈವಿಧ್ಯಮಯ ರೆಡಿಮೇಡ್ ಬ್ಲೌಸ್‌ಗಳು
ಸಾದಾ, ಪ್ರಿಂಟ್ಸ್, ಕಲಾಂಕಾರಿ, ಶಿಮ್ಮರ್, ಸಿಕ್ವೀನ್ಸ್, ಬಾರ್ಡರ್, ಬಾರ್ಡರ್ ಲೆಸ್ ಸಿಲ್ಕ್ ಹೀಗೆ ಲೆಕ್ಕವಿಲ್ಲದಷ್ಟು ಬಗೆಯ ರೆಡಿಮೇಡ್ ಬ್ಲೌಸ್‌ಗಳು ಇಂದು ದೊರೆಯುತ್ತಿವೆ.
5/5
ರೆಡಿಮೇಡ್ ಬ್ಲೌಸ್ ಖರೀದಿಸುವವರ ಗಮನದಲ್ಲಿರಲಿ
- ಸೀರೆ ಜತೆಯಲ್ಲಿಟ್ಟುಕೊಂಡು ಬ್ಲೌಸ್ ಖರೀದಿಸಿ.
- ಸ್ಟ್ರೀಟ್ ಶಾಪಿಂಗ್‌ನಲ್ಲೂ ರೆಡಿಮೇಡ್ ಬ್ಲೌಸ್ ದೊರೆಯುತ್ತವೆ.
- ಸೀರೆ ಸೆಂಟರ್‌ಗಳಲ್ಲಿ ಬ್ರ್ಯಾಂಡೆಡ್ ಹುಡುಕುವುದಾದಲ್ಲಿ ಬೆಲೆ ಜಾಸ್ತಿ.
- ಬಹಳಷ್ಟು ಶಾಪ್‌ಗಳಲ್ಲಿ ಟ್ರಯಲ್ ಅವಕಾಶ ಇರುವುದಿಲ್ಲ, ಹಾಗಾಗಿ ಕೊಳ್ಳುವ ಮುನ್ನ ಸೈಜ್ ತಿಳಿದುಕೊಂಡು ಖರೀದಿಸಿ.
- ಆದಷ್ಟೂ ಬ್ಲೌಸ್‌ನ ಒಳಗೆ ಹಾಕಿರುವ ಹೊಲಿಗೆ ತಗೆಯಲು ಹಾಕಲು ಬಟ್ಟೆ ಇದೆಯೇ ಎಂಬುದನ್ನು ಪರಿಶೀಲಿಸಿ.
- ರೈನ್ಬೋ ಹಾಗೂ ಮಲ್ಟಿ ಕಲರ್‌ನ ಬ್ಲೌಸ್ ಸಾಕಷ್ಟು ಸೀರೆಗೆ ಮ್ಯಾಚ್ ಮಾಡಬಹುದು.
- ಇಂಡೋ-ವೆಸ್ಟರ್ನ್ ಲುಕ್ ನೀಡುವ ಬ್ಲೌಸ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.