ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Actor Dharmendra: ಬಾಲಿವುಡ್ ʻಹೀ ಮ್ಯಾನ್‌ʼ ಸಿನಿ ಜರ್ನಿ ಹೇಗಿತ್ತು ಗೊತ್ತಾ? ಇಲ್ಲಿದೆ ಡಿಟೇಲ್ಸ್‌

Bollywood Actor Dharmendra Dies At 89: ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದ ಹಿರಿಯ ನಟ ಧರ್ಮೇಂದ್ರ ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟಾಗುವಂತೆ ಮಾಡಿದೆ.ಕೆಲವು ದಿನಗಳ ಹಿಂದೆಯಷ್ಟೇ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಬಳಿಕ ಚೇತರಿಕೆ ಕಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದರು.

ಬಾಲಿವುಡ್ ದಿಗ್ಗಜ ಧರ್ಮೇಂದ್ರ
1/6

ಬಾಲಿವುಡ್ ಹೀಮ್ಯಾನ್ ಎಂದೆ ಖ್ಯಾತಿ ಪಡೆದ ಹಿರಿಯ ನಟ ಧರ್ಮೇಂದ್ರ (Dharmendra) ಅವರು 60-80 ದಶಕದಲ್ಲಿ ಬಾಲಿವುಡ್ ನ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿದ್ದಾರೆ. ಶಿಕಾರ್, ಆಂಖೇನ್, ಯಾಕೀನ್, ಪ್ಯಾರ್ ಹಿ ಪ್ಯಾರ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ಆ ಕಾಲದಲ್ಲಿಯೇ ಹೀರೋ ಆಗಬೇಕು ಎನ್ನುವವರ ಪಾಲಿಗೆ ರೋಲ್ ಮಾಡೆಲ್ ಆಗಿದ್ದರು. ಎಲ್ಲ ತರನಾದ ಪಾತ್ರಕ್ಕೂ ಜೀವ ತುಂಬುವ ಇವರಿಗೆ ಈಗಲೂ ದೊಡ್ಡ ಮಟ್ಟಿಗಿನ ಅಭಿಮಾನಿ ಬಳಗವಿದೆ‌. ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿದ್ದ ಇವರು ಇತ್ತೀಚೆಗಷ್ಟೇ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ತೀವ್ರ ಆರೋಗ್ಯ ಸಮಸ್ಯೆಯಿಂದ ಇಂದು ಅವರು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಆಘಾತ ಉಂಟಾಗುವಂತೆ ಮಾಡಿದೆ.

2/6

ಪಂಜಾಬ್‌ನ ಲುಧಿಯಾನ ಜಿಲ್ಲೆಯ ನಸ್ರಾಲಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ ಧರ್ಮೇಂದ್ರ ಅವರು ಚಿಕ್ಕಂದಿನಿಂದಲೂ ಬಹಳ ಚ್ಯೂಟಿಯಾಗಿದ್ದರು. ಧರ್ಮೇಂದ್ರ ಅವರದ್ದು ಕೇವಲ್ ಕ್ರಿಶನ್ ಡಿಯೋಲ್ ಇವರ ಮೊದಲ ಹೆಸರಾಗಿದ್ದು ಸಿನಿಮಾ ರಂಗಕ್ಕೆ ಕಾಲಿಟ್ಟ ಬಳಿಕ ಈ ಹೆಸರು ಧರ್ಮೇಂದ್ರ ಎಂದು ಫೇಮಸ್ ಆಗಿದೆ. ನಟನಾಗಬೇಕು ಅನ್ನೋ ಹಂಬಲ ಚಿಕ್ಕವಯಸ್ಸಿನಲ್ಲೇ ಅವರಿಗೆ ಇದ್ದಿತ್ತು. ಆದರೆ ಸೂಕ್ತ ಅವಕಾಶ ಸಿಕ್ಕಿರಲಿಲ್ಲ. ಮನೆಯಲ್ಲಿಯೂ ಬಹಳ ಅನುಕೂಲಸ್ತ ರಾದ ಕಾರಣ ಅವರಿಗೆ ಬಹಳ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಸಿದ್ದರು. ಹೀಗಾಗಿ ಸಿನಿಮಾ ಇಂಡಸ್ಟ್ರಿಗೆ ಅವರು ಬರುವ ಮೊದಲೇ ವಿವಾಹಿತರಾಗಿದ್ದರು.

3/6

ಮ್ಯಾಗಜೀನ್‌ನಲ್ಲಿ ಒಂದರ ಜಾಹೀರಾತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶದ ಬಗ್ಗೇ ತಿಳಿದು ಅದಕ್ಕೆ ಆಡಿಷನ್ ಕೊಡುವುದಕ್ಕೆ ಅವರು ಮುಂದಾದರು. ತಮ್ಮ ಕುಟುಂಬದ ಮನವೊಲಿಸಿ ಆಡಿಷನ್ ಕೊಡುವುದಕ್ಕೆ ಮುಂಬೈಗೆ ತೆರಳಿದ್ದು ಈ ಅವಕಾಶ ಅವರನ್ನು ದೊಡ್ಡ ಮಟ್ಟಕ್ಕೆ ಕರೆ ದೊಯ್ಯೂ ವಂತೆ ಮಾಡಿತು. 1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಶೋಲೆ, ಸೀತಾ ಔರ್ ಗೀತಾ, ಚುಪ್ಕೆ ಚುಪ್ಕೆ, ಶರಾಬಿ, ಯಾದೋನ್ ಕಿ ಭಾರತ್', 'ಮೇರಾ ಗಾಂವ್ ಮೇರಾ ದೇಶ್', 'ನೌಕರ್ ಬಿವಿ ಕಾ', 'ಫೂಲ್ ಔರ್ ಪತ್ತರ್', 'ಬೇಗಹಬಾಯ್ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ಅವರು ಅಭಿನಯಿಸಿದ್ದಾರೆ.

4/6

ನಟ ಧರ್ಮೇಂದ್ರ ಅವರ ಸಿನಿಮಾ ಸಾಧನೆಗೆ ಅನೇಕ ಪ್ರಶಸ್ತಿ ಲಭಿಸಿದೆ. ಆಯಿ ಮಿಲನ್ ಕಿಬೇಲಾ ಸಿನಿಮಾಕ್ಕೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮೇರಾ ಗಾಂವ್ ಮೇರಾ ದೇಶ್ ಸಿನಿಮಾಕ್ಕೆ ಅತ್ಯು ತ್ತಮ ನಟ ಪ್ರಶಸ್ತಿ, 1997ರಲ್ಲಿ ಜೀವ ಮಾನ ಸಾಧನೆ ಪ್ರಶಸ್ತಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೂಡ ಅನೇಕ ಪ್ರಶಸ್ತಿ ಸಿಕ್ಕಿದೆ‌. ಭಾರತ ಸರ್ಕಾರದಿಂದ 2012 ರಲ್ಲಿ ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು.

5/6

ಧರ್ಮೇಂದ್ರ ಅವರು 1954 ರಲ್ಲಿ 19 ನೇ ವಯಸ್ಸಿನಲ್ಲಿ ಪ್ರಕಾಶ್ ಕೌರ್ (Prakash Kaur ) ಅವರನ್ನು ವಿವಾಹವಾಗಿದ್ದು ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ವಿಜೇತಾ ಮತ್ತು ಅಜೀತಾ ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನಟ ಸನ್ನಿ ಡಿಯೋಲ್ ಮತ್ತು ನಟ ಬಾಬಿ ಡಿಯೋಲ್ ಅವರು ತಮ್ಮ ತಂದೆಯಂತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.ಬಾಂಬೆನಲ್ಲಿ ಚಲನಚಿತ್ರ ಗಳಲ್ಲಿ ಯಶಸ್ವಿ ನಟರಾದ ಬಳಿಕ ನಟಿ ಹೇಮಾ ಮಾಲಿನಿಯನ್ನು (Hema Malini) ವಿವಾಹ ವಾದರು ಆದರೆ ಅವರು ಈಗಾಗಲೇ ವಿವಾಹವಾಗಿದ್ದರಿಂದ ಈ ವಿವಾಹ ವಿವಾದಕ್ಕೆ ಕಾರಣ ವಾಯಿತು. ಬಳಿಕ ಸಿನಿಮಾರಂಗದಲ್ಲಿ ಈ ವಿವಾದಗಳ ನಡುವೆಯೂ ಅನೇಕ ಹಿಟ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

6/6

ವಯಸ್ಸಾಗುತ್ತಾ ಹೋದಂತೆ ಸಿನಿಮಾದಲ್ಲಿ ನಟಿಸುವುದು ಕಡಿಮೆ ಮಾಡಿದ್ದರು ಇವರು ಇನ್‌ ಸ್ಟಾಗ್ರಾಮ್ ನಲ್ಲಿ ಸಕ್ರಿಯರಾಗಿದ್ದರು. ಟ್ರ್ಯಾಕ್ಟರ್ ಓಡಿಸುವುದು, ತಮ್ಮ ಜಮೀನನ್ನು ನೋಡಿ‌ ಕೊಳ್ಳುವುದು ಸರಳ ಜೀವನ ಪಾಠಗಳು ಮತ್ತು ಕೃಷಿ ಸಲಹೆಗಳನ್ನು ನೀಡುವುದರ ಬಗ್ಗೆ ಆಗಾಗ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಸ್ಥಿತಿ ಸರಿ ಇಲ್ಲದ ಕಾರಣ ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. 72 ಗಂಟೆಗಳಲ್ಲಿ ಅವರ ಸ್ಥಿತಿ ಗಂಭೀರವಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನವೆಂಬರ್ 11ರ ಬೆಳಗ್ಗೆ 89ನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ. ಬಾಲಿವುಡ್ ನಲ್ಲಿ 6 ದಶಕಕ್ಕು ಹೆಚ್ಚಿ ಸಿನಿಮಾ ರಂಗದಲ್ಲಿ ಶ್ರಮಿಸಿದ್ದ ಅವರು ತಮ್ಮ ಅಭಿಮಾನಿಗಳನ್ನು ಕುಟುಂಬವನ್ನು ತೊರೆದು ಬಾರದ ಲೋಕಕ್ಕೆ ಪಯಣಿಸಿದ್ದಾರೆ‌.