ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kareena Kapoor: ಬಾಲಿವುಡ್ ನಟಿ ಕರೀನಾ ಕಪೂರ್ ಸೀರೆಯಲ್ಲಿ ಫುಲ್ ಮಿಂಚಿಂಗ್; ಇಲ್ಲಿದೆ ಫೋಟೊ

Kareena Kapoor Khan: ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ ಖಾನ್ ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುತ್ತಾರೆ. ಸಿನಿಮಾ ಇವೆಂಟ್‌ನಲ್ಲಿ ಹೆಚ್ಚಾಗಿ ಭಾಗವಹಿಸುವ ಕರೀನಾ ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಸೌಂದರ್ಯ ಮತ್ತು ಫ್ಯಾಷನ್‌ ಸೆನ್ಸ್‌ನಿಂದ ಎಲ್ಲರ ಮನಸೂರೆಗೊಂಡಿದ್ದಾರೆ.

Kareena
1/5

ಕರೀನಾ ಇಂಗ್ಲೆಂಡ್‌ನ ಬರ್ಮಿಂಗ್‌ ಹ್ಯಾಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿ ದ್ದರು. ಬಿಳಿ ಬಣ್ಣದ ಸೀರೆಯುಟ್ಟು ವೇದಿಕೆಗೆ ಆಗಮಿಸಿದ ಕರೀನಾ, ಅಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳನ್ನು ಸೆಳೆದಿದ್ದಾರೆ.

2/5

ಬಾಲಿವುಡ್‌ನ ಸ್ಟೈಲ್ ಐಕಾನ್ ಎಂದೇ ಪ್ರಸಿದ್ಧಿಯಾಗಿರುವ ಕರೀನಾ, ವಜ್ರದಂತೆ ಹೊಳೆಯುವ ಶಿಮ್ಮರಿ ಸೀರೆಯಲ್ಲಿ ಮಿಂಚಿದ್ದು ಅವರ ಲುಕ್ ಅಭಿಮಾನಿಗಳನ್ನು ಆಕರ್ಷಿಸಿದೆ. ಸೀರೆಗೆ ಮ್ಯಾಚಿಂಗ್‌ ಆಗುವ್‌ ನೆಕ್ಲೀಸ್, ಕಿವಿಯೋಲೆ ಧರಿಸಿದ್ದು ಗಮನ ಸೆಳೆದಿದೆ.

3/5

ಕರೀನಾಳ ಈ ಲುಕ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಅನೇಕರು ಅವರನ್ನು ಗ್ಲಾಮರ್‌ನ ಅತೀ ಬ್ಯೂಟಿ ಲುಕ್ ಎಂದು ಬಣ್ಣಿಸಿದ್ದಾರೆ. ಬಾಲಿವುಡ್ ರಾಣಿ, ಸೌಂದ ರ್ಯದ ಮೆರುಗು ಎಂದೆ ಕಮೆಂಟ್‌ ಮಾಡಿದ್ದಾರೆ. ನಟಿ ಕರಿಷ್ಮಾ ಕಪೂರ್‌ ಅವರು ತಮ್ಮ ಸಹೋದರಿಯನ್ನು“ನನ್ನ ವಜ್ರ” ಎಂದು ಕರೆದಿದ್ದಾರೆ.

4/5

ಕರೀನಾ ಕಪೂರ್ ಇತ್ತೀಚೆಗೆ ಸುಜಯ್ ಘೋಷ್ ನಿರ್ದೇಶನದ 'ಜಾನೆ ಜಾನ್', ರೋಹಿತ್ ಶೆಟ್ಟಿ ನಿರ್ದೇಶನದ 'ಸಿಂಗಂ ಅಗೈನ್' ಮತ್ತು ಹನ್ಸಲ್ ಮೆಹ್ತಾ ನಿರ್ದೇಶನದ 'ದಿ ಬಕಿಂಗ್‌ ಹ್ಯಾಮ್ ಮರ್ಡರ್ಸ್' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

5/5

ಮುಂದಿನ ದಿನಗಳಲ್ಲಿ ಅವರು ನಿರ್ದೇಶಕಿ ಮೇಘನಾ ಗುಲ್ಜಾರ್ ಅವರ 'ದಾಯರಾ' (Daayra) ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಜತೆ ನಟಿಸಲಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.