Bubble Hairstyle 2026: ಸೆಲೆಬ್ರಿಟಿ ಲುಕ್‌ಗಾಗಿ ಬಂತು ಬಬಲ್ ಹೇರ್‌ಸ್ಟೈಲ್
ಸೆಲೆಬ್ರಿಟಿ ಲುಕ್‌ಗಾಗಿ ಅತಿ ಸುಲಭವಾಗಿ ಮಾಡಬಹುದಾದ ಬಬಲ್ ಹೇರ್‌ಸ್ಟೈಲ್ ಹೈ ಫ್ಯಾಷನ್ ಕೆಟಗರಿಯಲ್ಲಿದೆ. ಅಂದಹಾಗೆ, ಈ ಹೇರ್‌ಸ್ಟೈಲ್ ಹೊಸ ಆವಿಷ್ಕಾರವೇನಲ್ಲ! ಈ ಹಿಂದೆಯೂ ಈ ಹೇರ್‌ಸ್ಟೈಲ್ ಚಾಲ್ತಿಯಲ್ಲಿತ್ತು. ಆದರೆ, ಇದೀಗ ಮತ್ತೊಮ್ಮೆ ಈ ಹೇರ್‌ಸ್ಟೈಲ್ ಹೈ ಫ್ಯಾಷನ್ ಫಾಲೋ ಮಾಡುವ ಮಾಡೆಲ್‌ಗಳು, ಪೇಜ್3 ಸೆಲೆಬ್ರೆಟಿಗಳು ಹಾಗೂ ಸಿನಿ ತಾರೆಯರ ಲಿಸ್ಟ್‌ಗೆ ಸೇರಿಕೊಂಡಿದೆ. ಇದ್ಯಾವ ಬಗೆಯ ಹೇರ್‌ಸ್ಟೈಲ್? ಮಾಡುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್ .
ಬಬಲ್ ಹೇರ್‌ಸ್ಟೈಲ್ ಸೆಲೆಬ್ರೆಟಿ ಲಿಸ್ಟ್‌ಗೆ ಸೇರಿಕೊಂಡಿದೆ. ಹೌದು, ಸೆಲೆಬ್ರೆಟಿ ಲುಕ್ ಬಯಸುವವರು ಅತಿ ಸುಲಭವಾಗಿ ಮಾಡಬಹುದಾದ ಮನಮೋಹಕ ಬಬಲ್ ಹೇರ್‌ಸ್ಟೈಲ್ ಈ ಸೀಸನ್‌ನಲ್ಲಿ ಹೈ ಫ್ಯಾಷನ್ ಕೆಟಗರಿ ಲಿಸ್ಟ್‌ನಲ್ಲಿದೆ.
ಸೆಲೆಬ್ರೆಟಿ ಲುಕ್ ನೀಡುವ ಬಬಲ್ ಹೇರ್‌ಸ್ಟೈಲ್
ಅಂದಹಾಗೆ, ಈ ಹೇರ್‌ಸ್ಟೈಲ್ ಹೊಸ ಆವಿಷ್ಕಾರವೇನಲ್ಲ! ಈ ಹಿಂದೆಯೂ ಈ ಹೇರ್‌ಸ್ಟೈಲ್ ಚಾಲ್ತಿಯಲ್ಲಿತ್ತು. ಆದರೆ, ಇದೀಗ ಮತ್ತೊಮ್ಮೆ ಈ ಹೇರ್‌ಸ್ಟೈಲ್ ಹೈ ಫ್ಯಾಷನ್ ಫಾಲೋ ಮಾಡುವ ಮಾಡೆಲ್‌ಗಳು, ಪೇಜ್3 ಸೆಲೆಬ್ರೆಟಿಗಳು ಹಾಗೂ ಸಿನಿ ತಾರೆಯರ ಲಿಸ್ಟ್‌ಗೆ ಸೇರಿಕೊಂಡಿದೆ.
ಏನಿದು ಬಬಲ್ ಹೇರ್‌ಸ್ಟೈಲ್?
ಉದ್ದನೆಯ ಕೂದಲಿಗೆ ಪೋನಿಟೇಲ್ ಹಾಕಿ, ನಂತರ ಪ್ರತಿ ಎರಡ್ಮೂರು ಇಂಚಿಗೆ ಕಲರ್‌ಫುಲ್ ಅಥವಾ ಮಾನೋಕ್ರೋಮ್ ಶೇಡ್ ಎಲಾಸ್ಟಿಕ್ ರಬ್ಬರ್ ಬ್ಯಾಂಡ್‌ಗಳನ್ನು ಹಾಕುವುದು. ಮಧ್ಯೆ ಮಧ್ಯೆ ಕೂದಲಿಗೆ ಬಬ್ಬಲ್‌ನಂತಹ ಆಕಾರ ನೀಡುವುದು.
ಬಬಲ್ ಹೇರ್‌ಸ್ಟೈಲ್ ಸ್ಟೈಲಿಂಗ್
ಬಬಲ್ ಹೇರ್‌ಸ್ಟೈಲನ್ನು ಆದಷ್ಟೂ ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ಮ್ಯಾಚ್ ಮಾಡಲಾಗುತ್ತಿದೆ. ಅದರಲ್ಲೂ ಫ್ಯಾಷನ್ ಫೋಟೋ ಶೂಟ್‌ಗಳಲ್ಲಿ, ರ‍್ಯಾಂಪ್ ವಾಕ್‌ಗಳಲ್ಲಿ ಈ ಹೇರ್‌ಸ್ಟೈಲನ್ನು ಅತಿ ಹೆಚ್ಚಾಗಿ ವಿನ್ಯಾಸಗೊಳಿಸಲಾಗುತ್ತಿದೆ ಎನ್ನುವ ಹೇರ್‌ಸ್ಟೈಲಿಸ್ಟ್ ಸ್ಮೃತಿ ಪ್ರಕಾರ, ಈ ಹೇರ್‌ಸ್ಟೈಲ್ ಇಡೀ ಲುಕ್ಕನ್ನುಬದಲಿಸುತ್ತದಂತೆ.
ಬಬಲ್ ಹೇರ್‌ಸ್ಟೈಲ್ ಪ್ರಿಯರಿಗೆ ಟಿಪ್ಸ್
- ಎಲಾಸ್ಟಿಕ್ ಹೇರ್‌ಬ್ಯಾಂಡ್ ಬದಲು ಶಿಮ್ಮರ್ ಬ್ಯಾಂಡ್ ಇಲ್ಲವೇ ಶೈನಿಂಗ್ ಥ್ರೆಡ್ ಕೂಡ ಬಳಸಬಹುದು.
- ಉದ್ದನೆಯ ಕೂದಲಿಗೆ ಅತ್ಯಾಕರ್ಷಕವಾಗಿ ಕಾಣಿಸುತ್ತದೆ.
- ಹೈ ಪೋನಿಟೇಲ್‌ಗೆ ಬಬ್ಬಲ್ ಹೇರ್‌ಸ್ಟೈಲ್ ಸೂಕ್ತ.
- ಬಬಲ್‌ನಂತೆ ಕಾಣಿಸಲು ಕೂದಲನ್ನು ಎಲಾಸ್ಟಿಕ್ ಬ್ಯಾಂಡ್ ಹಾಕಿರುವ ಜಾಗದಲ್ಲಿ ಕೊಂಚ ಲೂಸಾಗಿ ಎಳೆಯಿರಿ.
- ಎಲ್ಲಾ ಬಬಲ್ ವಿನ್ಯಾಸ ಒಂದೇ ತರಹನಾಗಿ ಕಾಣಿಸಬೇಕು.