ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cannes 2025: ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ ರೆಡ್ ಕಾರ್ಪೆಟ್‌ನಲ್ಲಿ ಮಿಂಚಿದ ಲಾಪತಾ ಲೇಡೀಸ್ ಖ್ಯಾತಿಯ ನಿತಾಂಶಿ ಗೋಯೆಲ್

Cannes 2025: 17 ವರ್ಷದ ಯುವ ನಟಿ ನಿತಾಂಶಿ ಗೋಯಲ್‌, 2025ರ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ತಮ್ಮ ಆಕರ್ಷಕ ಲುಕ್‌ನಿಂದ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಆಕೆಯ ಲುಕ್‌ನ ಒಂದು ಝಲಕ್ ಇಲ್ಲಿದೆ.

ನಿತಾಂಶಿ ಗೋಯಲ್‌
1/6

17 ವರ್ಷದ ಯುವ ನಟಿ ನಿತಾಂಶಿ ಗೋಯಲ್‌, 2025ರ ಕಾನ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಈ ನಟಿ ತಮ್ಮ ಆಕರ್ಷಕ ಲುಕ್‌ನಿಂದ ಮಾತ್ರವಲ್ಲ, ಸಾಮಾಜಿಕ ಜಾಲತಾಣದಲ್ಲೂ ಅಭಿಮಾನಿಗಳ ಮನಗೆದ್ದಿದ್ದಾರೆ. ಆಕೆಯ ಲುಕ್‌ನ ಒಂದು ಝಲಕ್ ಇಲ್ಲಿದೆ.

2/6

ನಿತಾಂಶಿ ಗೋಯಲ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ. ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಸ್ವಲ್ಪವಾದರೂ ಪ್ರತಿನಿಧಿಸಲು ಕೃತಜ್ಞಳಾಗಿದ್ದೇನೆ ಮತ್ತು ಹೆಮ್ಮೆಪಡುತ್ತಿದ್ದೇನೆ. ಕಾನ್‌ನ ರೆಡ್‌ ಕಾರ್ಪೆಟ್‌ನಲ್ಲಿ ನಡೆದದ್ದು ಕನಸಿನಂತಿತ್ತು. ಎಲ್ಲರ ಪ್ರೀತಿಗೆ ಧನ್ಯವಾದಗಳು," ಎಂದು ಬರೆದುಕೊಂಡಿದ್ದಾರೆ.

3/6

ಜೇಡ್ ಬೈ ಮೋನಿಕಾ ಮತ್ತು ಕರಿಷ್ಮಾ (MK) ವಿನ್ಯಾಸದ ಅದ್ಭುತವಾದ ಸ್ಟ್ರಾಪ್‌ಲೆಸ್ ಕಪ್ಪು ಮತ್ತು ಚಿನ್ನದ ಗೌನ್‌ನ ಧರಿಸಿದ ನಿತಾಂಶಿ ರೆಡ್‌ ಕಾರ್ಪೆಟ್‌‌ನಲ್ಲಿ ಮಿಂಚಿದರು. ನಟಿ ಧರಿಸಿದ್ದ ಗೌನ್‌ ಕಾರ್ಸೆಟೆಡ್ ರವಿಕೆ ಮತ್ತು ದೊಡ್ಡ ಟ್ಯೂಲ್ ಓವರ್‌ಲೇ ಅನ್ನು ಹೊಂದಿತ್ತು.

4/6

ಗೌನ್‌ನಲ್ಲಿ ಕಸಾಬ್ ಲೇಸ್ ಕಸೂತಿ ಮತ್ತು ಸೂಕ್ಷ್ಮವಾದ ಮ್ಯಾಕ್ರಮೆ ವಿವರಗಳು ಹೆಣೆದುಕೊಂಡಿದ್ದವು. ಇದರ ಜೊತೆಗೆ ಮರ್ಮೈಡ್-ಶೈಲಿಯ ಸಿಲೂಯೆಟ್ ಫ್ರೇಮ್ ಮತ್ತು ತೆಳುವಾದ ಟ್ಯೂಲ್ ಟ್ರೇನ್ ಆಕರ್ಷಕವಾಗಿತ್ತು.

5/6

ಚಂದ್ರನ ಬೆಳಕಿನಲ್ಲಿ ಅರಳುವ ವಸಂತ ಹೂವುಗಳ ಪ್ರಣಯದಿಂದ ಪ್ರೇರಿತವಾದ ಈ ಉಡುಗೆ, ಶಾಂತ ಬಣ್ಣದ ಛಾಯೆ, ಸೌಮ್ಯವಾದ ಹೊಳಪು ಮತ್ತು ಸಂಕೀರ್ಣವಾದ ಕೈಕಸೂತಿಯನ್ನು ಪ್ರತಿಬಿಂಬಿಸಿತು. ನಿತಾಂಶಿ ತಮ್ಮ ಲುಕ್‌ಗೆ ಸೂಕ್ಷ್ಮವಾದ ಚಿನ್ನದ ಸ್ವಿರ್ಲ್ ಚೋಕರ್, ಸರ್ಪ-ವಿನ್ಯಾಸದ ಕಿವಿಯೋಲೆಗಳು, ಉಂಗುರಗಳು ಮತ್ತು ಎತ್ತರದ ಹೀಲ್ಸ್‌ಗಳನ್ನು ಧರಿಸಿದ್ದರು

6/6

ಲಾಪತಾ ಲೇಡೀಸ್ ಖ್ಯಾತಿಯ ಈ ನಟಿ, ಸೊಗಸಾದ ಉಪ್‌ಡೋ ಕೇಶವಿನ್ಯಾಸ ಮತ್ತು ಮೃದುವಾದ ಗ್ಲಾಮ್ ಮೇಕಪ್‌ನೊಂದಿಗೆ, ಹೊಳೆಯುವ ಕೆನ್ನೆಗಳು ಮತ್ತು ಗುಲಾಬಿ ಲಿಪ್‌ಗ್ಲಾಸ್‌ನಿಂದ ಕಂಗೊಳಿಸಿದರು. ಪರಿಪೂರ್ಣ ಗ್ಲಾಮ್ ಮತ್ತು ಸೊಬಗಿನೊಂದಿಗೆ, ನಿತಾಂಶಿ ರೆಡ್‌ ಕಾರ್ಪೆಟ್‌ನಲ್ಲಿ ರಾಜಕುಮಾರಿಯಂತೆ ಕಾಣಿಸಿದರು. ವಿನ್ಯಾಸಕಿ ಮೋನಿಕಾ ಶಾ ಹೇಳುವಂತೆ, ಸೌಮ್ಯವಾದ ಹೊಳಪಿನಿಂದ ರೊಮ್ಯಾಂಟಿಕ್ ಸಿಲೂಯೆಟ್‌ಗಳವರೆಗೆ, ಈ ಲುಕ್ ಆಧುನಿಕ ಟಚ್ ನೀಡಿ ಈ ಡ್ರೆಸ್ ಅನ್ನು ವಿನ್ಯಾಸಗೊಳಿಸಲಾಗಿದ್ದು,ರೆಡ್‌ ಕಾರ್ಪೆಟ್‌‌ಗೆ ಹೇಳಿ ಮಾಡಿಸಿದಂತಿದೆ.