Christmas Fashion 2025: ಕ್ರಿಸ್‌ಮಸ್ ಲುಕ್‌ಗೆ ಸ್ಟೈಲಿಸ್ಟ್ ಲಕ್ಷ್ಮಿ ಕೃಷ್ಣ ನೀಡಿದ ಸಿಂಪಲ್ ಟಿಪ್ಸ್
Christmas Fashion: ಕ್ರಿಸ್‌ಮಸ್ ಪಾರ್ಟಿ ಲುಕ್ ಎಲ್ಲರಿಗಿಂತ ಭಿನ್ನವಾಗಿರಬೇಕು! ಇಲ್ಲವೇ ನೋಡಲು ಆಕರ್ಷಕವಾಗಿರಬೇಕು ಎನ್ನುವವರು ಒಂದಿಷ್ಟು ಸ್ಟೈಲಿಂಗ್ ಬಗ್ಗೆ ಗಮನನೀಡಬೇಕು ಎನ್ನುತ್ತಾರೆ ಡಿಸೈನರ್ ಹಾಗೂ ಸೆಲೆಬ್ರೆಟಿ ಸ್ಟೈಲಿಸ್ಟ್ ಲಕ್ಷ್ಮಿ ಕೃಷ್ಣ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.
ಕ್ರಿಸ್‌ಮಸ್ ಪಾರ್ಟಿಗೆ ರೆಡಿಯಾಗುತ್ತಿದ್ದೀರಾ! ಅತ್ಯಾಕರ್ಷಕವಾಗಿ ಕಾಣಿಸಲು ಬಯಸುತ್ತಿದ್ದೀರಾ? ಹಾಗಾದಲ್ಲಿ ಕ್ರಿಸ್‌ಮಸ್ ಸೆಲೆಬ್ರೆಷನ್‌ಗೆ ಅಗತ್ಯವಿರುವಂತೆ ಕೊಂಚ ಫ್ಯಾಷನಬಲ್ ಆಗಿ ರೆಡಿಯಾಗಿ ಎನ್ನುತ್ತಾರೆ ಫ್ಯಾಷನಿಸ್ಟಾ ಲಕ್ಷ್ಮಿ ಕೃಷ್ಣ. ಅವರ ಪ್ರಕಾರ, ಮೊದಲಿಗೆ ಈ ಫೆಸ್ಟೀವ್ ಸೀಸನ್‌ನಲ್ಲಿ ನೀವು ದೇಸಿ ಲುಕ್‌ನಲ್ಲಿ ಕಾಣಿಸಬೇಕಾಗಿಲ್ಲ. ನಿಮ್ಮ ಡ್ರೆಸ್ ಸೆನ್ಸ್‌ಗೆ ಕೊಂಚ ವೆಸ್ಟರ್ನ್ ಟಚ್ ನೀಡಿ, ಆಕ್ಸೆಸರೀಸ್ ಧರಿಸಿ ಎನ್ನುತ್ತಾರೆ.
ಅತ್ಯಾಕರ್ಷಕ ಗ್ಲಾಮರಸ್ ಲುಕ್
ಆದಷ್ಟು ಗ್ಲಾಮರಸ್ ಲುಕ್ ನೀಡುವ ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಟ್ರೆಂಡಿಯಾಗಿರುವ ಡಿಸೈನ್ಸ್ ಚೂಸ್ ಮಾಡಿ. ಉದಾಹರಣೆಗೆ., ಶೋಲ್ಡರ್ ಲೆಸ್, ಆಫ್ ಶೋಲ್ಡರ್ ಗೌನ್ ಹಾಗೂ ಲಾಂಗ್ ಫ್ರಾಕ್ ಚೂಸ್ ಮಾಡಿ ಸೂಪರ್ಬ್ ಲುಕ್ ನೀಡುತ್ತವೆ ಎನ್ನುತ್ತಾರೆ.
ಅತ್ಯಾಕರ್ಷಕವಾಗಿರಲಿ ಆಕ್ಸೆಸರೀಸ್
ಧರಿಸುವ ಆಕ್ಸೆಸರೀಸ್ ಆಕರ್ಷಕವಾಗಿರಲಿ. ಡ್ರೆಸ್‌ಗೆ ಸೂಟ್ ಆಗುವಂತಿರಲಿ. ಹೆವ್ವಿ ಚಿನ್ನದ ಆಭರಣಗಳನ್ನು ಆವಾಯ್ಡ್ ಮಾಡಿ. ಕೈಯಲ್ಲೊಂದು ಬ್ರೆಸ್ಲೇಟ್ ಅಥವಾ ಕಂಗನ್ ಇದ್ದರೇ ಸಾಕು. ಕಿವಿಗೆ ಫ್ಲೋರಲ್ ಅಥವಾ ಜಂಕ್ ಇಯರಿಂಗ್‌ಗಳು ಹೊಂದುತ್ತವೆ. ಹ್ಯಾಂಗಿಂಗ್ಸ್ ಬೇಡ. ರಿಂಗ್ ಫಾರ್ಮ್‌ನಲ್ಲಿರುವಂತವು ಬೆಸ್ಟ್ . ನೋಡಲು ಮನಮೋಹಕವಾಗಿ ಕಾಣುತ್ತವೆ. ನೆಕ್‌ಗೆ ಚೈನ್‌ನಂತದ್ದು ಧರಿಸಿ. ಇಲ್ಲವೇ ಜಂಕ್ ನೆಕ್ಲೆಸ್ ಆದರೂ ಓಕೆ ಎನ್ನುತ್ತಾರೆ ಲಕ್ಷ್ಮಿ ಕೃಷ್ಣ.
ಮೇಕೋವರ್ ಟ್ರೆಂಡಿಯಾಗಿರಲಿ
ನಿಮ್ಮ ಮೇಕಪ್ ಹಾಗೂ ಹೇರ್‌ಸ್ಟೈಲ್ ಟ್ರೆಂಡಿಯಾಗಿರಲಿ. ಇನ್ನು, ಆಫ್ ಶೂ ಮಾದರಿಯ ಕಲರ್‌ಫುಲ್ ಹೈ ಹೀಲ್ಡ್ ಶೂ ಹಾಗೂ ಸ್ಯಾಂಡಲ್‌ಗಳು ಇಂದು ಟ್ರೆಂಡಿಯಾಗಿದ್ದು, ಅವನ್ನು ಧರಿಸಬಹುದು ಎನ್ನುತ್ತಾರೆ.
ಹೀಗಿರಲಿ ಕ್ರಿಸ್‌ಮಸ್ ಲುಕ್
- ಗ್ಲಾಮರಸ್ ಲುಕ್‌ಗೆ ಆದ್ಯತೆ ನೀಡಿ.
- ಮೇಕಪ್ ಅತ್ಯಾಕರ್ಷಕವಾಗಿರಲಿ.
- ಶಿಮ್ಮರ್, ಶೈನಿಂಗ್ ಔಟ್‌ಫಿಟ್ಸ್ ಪಾರ್ಟಿಯ ರಂಗು ಹೆಚ್ಚಿಸುತ್ತವೆ.