ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Christmas Fashion 2025: ಕ್ರಿಸ್‌ಮಸ್ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾದ ಗೌನ್‌ಗಳಿವು

Trendy Gowns: ಕ್ರಿಸ್‌ಮಸ್ ಸೆಲೆಬ್ರೆಷನ್‌ಗೆಂದೇ ನಾನಾ ಬಗೆಯ ಟ್ರೆಂಡಿ ಗೌನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಡಾಲ್‌ನಂತೆ ಕಾಣಿಸಲು ಬಾಲ್ ಗೌನ್, ಬಾಡಿ ಶೇಪ್‌ಗೆ ಪ್ರೋಮ್ ಗೌನ್, ಫ್ರಾಕ್‌ನಂತಹ ಶೀತ್ ಗೌನ್, ವೈವಿಧ್ಯಮಯ ಟೀ ಲೆಂಥ್ ಗೌನ್, ಫಿಶ್‌ಟೇಲ್ ಗೌನ್ ಸೇರಿದಂತೆ ಇವುಗಳ ಆಯ್ಕೆ ಹೇಗೆ? ಇಲ್ಲಿದೆ ಡಿಟೇಲ್ಸ್.

ಮಾರುಕಟ್ಟೆಗೆ ಕಾಲಿಟ್ಟ ಆಕರ್ಷಕ ಗೌನ್‌ಗಳು (ಚಿತ್ರಕೃಪೆ: ಪಿಕ್ಸೆಲ್)
1/5

ಪ್ರತಿಬಾರಿಯಂತೆ ಈ ಸಾಲಿನಲ್ಲೂ ಕ್ರಿಸ್‌ಮಸ್ ಗೌನ್‌ಗಳು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ. ಟ್ರೆಂಡಿಯಾಗಿವೆ. ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

2/5

ಡಾಲ್‌ನಂತೆ ಕಾಣಿಸಲು ಬಾಲ್ ಗೌನ್

ನೀವೂ ಡಾಲ್‌ನಂತೆ ಕಾಣಬೇಕೇ! ಹಾಗಾದಲ್ಲಿ ನೀವು ಬಾಲ್ ಗೌನ್ ಚೂಸ್ ಮಾಡಬಹುದು. ನೋಡಲು ಆಕರ್ಷಕವಾಗಿ ಕಾಣುತ್ತದೆ. ಕೆಳಗಡೆ ಗೌನ್ ಹರಡಿಕೊಂಡಿರುವುದರಿಂದ ಇದು ಸೇಮ್ ಟು ಸೇಮ್ ಗೊಂಬೆಯ ಲುಕ್ ನೀಡುತ್ತದೆ. ಹವರ್ ಗ್ಲಾಸ್ ಶೇಪ್‌ನವರಿಗೆ ಇದು ಹೇಳಿ ಮಾಡಿಸಿದಂತಿರುತ್ತದೆ.

3/5

ಬಾಡಿ ಶೇಪ್‌ಗೆ ಪ್ರೋಮ್ ಗೌನ್

ಪ್ರೋಮ್ ಗೌನ್‌ಗಳು ಹೆಚ್ಚಾಗಿ ಹರಡಿಕೊಳ್ಳುವುದಿಲ್ಲ. ಬದಲಿಗೆ ಬಾಡಿ ಶೇಪ್‌ಗೆ ತಕ್ಕಂತೆ ಕಾಣುತ್ತವೆ. ಇವನ್ನು ಅತಿ ಹೆಚ್ಚಾಗಿ ಪಾರ್ಟಿಯಲ್ಲಿ ವೇರ್ ಮಾಡುತ್ತಾರೆ. ನೋಡಲು ಲಾಂಗ್ ಫ್ರಾಕ್‌ನಂತೆ ಕಾಣಿಸುತ್ತವೆ. ಬ್ಲೌಸ್ ಮಾದರಿಯಂತೆ ಗೌನ್ ಪ್ರತ್ಯೇಕವಾಗಿ ಕಾಣುತ್ತವೆ.

ಫ್ರಾಕ್‌ನಂತಹ ಶೀತ್ ಗೌನ್

ಶೀತ್ ಗೌನ್‌ಗಳಿಗಿಂತ ಶೀತ್ ಫ್ರಾಕ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಪ್ಲಂಪಿಯಾಗಿರುವವರು ಈ ಶೀತ್ ಗೌನನ್ನು ಧರಿಸಬಹುದು. ಶೀತ್ ಗೌನ್‌ಗೆ ಬಳಸುವ ಫ್ಯಾಬ್ರಿಕ್ ವಿಭಿನ್ನವಾಗಿರುತ್ತದೆ. ಹೆಚ್ಚು ಹರಡಿಕೊಳ್ಳುವುದಿಲ್ಲ. ಸಿಂಪಲ್ ಹಾಗೂ ಫ್ರಾಕ್ ಲುಕ್ ಬೇಕೆನ್ನುವವರು ಈ ಗೌನ್ ಮೊರೆ ಹೋಗಬಹುದು.

4/5

ವೈವಿಧ್ಯಮಯ ಟೀ ಲೆಂಥ್ ಗೌನ್

ಉದ್ದುದ್ದದ ಗೌನ್‌ಗಳನ್ನು ಧರಿಸಲು ಇಷ್ಟವಿಲ್ಲದವರು ಟೀ ಲೆಂಥ್ ಗೌನ್ ಧರಿಸಬಹುದು. ಇದು ಮಂಡಿಯವರೆಗೂ ನೋಡಲು ಸೇಮ್ ಟು ಸೇಮ್ ಫ್ರಾಕ್ನಂತೆಯೇ ಇರುತ್ತದೆ. ನಾನಾ ವೆರೈಟಿಗಳಲ್ಲಿಯೂ ದೊರೆಯುತ್ತದೆ.

ಫಿಶ್‌ಟೇಲ್ ಗೌನ್ ಸೆಳೆತ

ಫಿಶ್‌ಟೇಲ್ ವಿನ್ಯಾಸದಿಂದಿಡಿದು, ಫಿಶ್ ಫೆದರ್‌ನಂತೆ ಕಾಣುವ ವಿನ್ಯಾಸವನ್ನು ಹೊಂದಿರುವ ಮೆರ್ಮೈಡ್ ಗೌನ್ ಟೀನೇಜ್ ಹುಡುಗಿಯರನ್ನು ಮಾತ್ರವಲ್ಲ, ಸೆಲೆಬ್ರಿಟಿಗಳನ್ನು ಆಕರ್ಷಿಸುತ್ತಿವೆ ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪರ್ಟ್ಸ್.

5/5

ಗೌನ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು

  • ನಿಮ್ಮ ಎತ್ತರಕ್ಕೆ ಸರಿಯಾದ ಗೌನ್ ಆಯ್ಕೆ ಮಾಡಿ.
  • ಗೌನ್ ಡಿಸೈನ್‌ಗಳು ನಿಮ್ಮ ವ್ಯಕ್ತಿತ್ವಕ್ಕೆ ಮ್ಯಾಚ್ ಆಗುತ್ತವೆಯೇ ಪರಿಶೀಲಿಸಿ.
  • ಕ್ರಿಸ್‌ಮಸ್ ಸೆಲೆಬ್ರೆಷನ್‌ಗೆ ಸೂಟ್ ಆಗುವಂತಿರಲಿ.
  • ಟ್ರೆಂಡ್‌ಗೆ ತಕ್ಕಂತೆ ಸೂಟ್ ಆಗುವಂತದ್ದನ್ನು ಧರಿಸಿ.
  • ಆಕ್ಸೆಸರೀಸ್ ಕೂಡ ಮ್ಯಾಚ್ ಆಗುವುದು ಅಗತ್ಯ.

ಶೀಲಾ ಸಿ ಶೆಟ್ಟಿ

View all posts by this author