ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Crop Top Fashion 2026: ಬೋಲ್ಡ್ ಲುಕ್‌ಗಾಗಿ ಬಾಕ್ಸಿ ಕ್ರಾಪ್‌ ಟಾಪ್‌ ಸ್ಟೈಲಿಂಗ್‌

Kajal Aggarwal: ಕಾಲೇಜು ಹುಡುಗಿಯರ ಫೇವರೇಟ್‌ ಲಿಸ್ಟ್‌ನಲ್ಲಿರುವ ಬಾಕ್ಸಿ ಕ್ರಾಪ್‌ ಟಾಪ್‌ಗಳು ಮತ್ತೊಮ್ಮೆ ವೈಬ್ರೆಂಟ್‌ ಕಲರ್‌ನಲ್ಲಿ ಬಿಡುಗಡೆಗೊಂಡಿವೆ. ಧರಿಸಿದವರಿಗೆ ಬೋಲ್ಡ್ ಲುಕ್‌ ನೀಡುವ ಇವನ್ನು ಸ್ಟೈಲಿಂಗ್‌ ಮಾಡುವುದು ಹೇಗೆ? ಈ ಕುರಿತ ವಿವರ ಇಲ್ಲಿದೆ.

ಚಿತ್ರಗಳು: ಕಾಜಲ್‌ ಅಗರ್‌ವಾಲ್‌, ಬಾಲಿವುಡ್‌ ನಟಿ
1/5

ದೊಗಲೆಯಾಗಿ ಕಾಣಿಸುವ ಬಾಕ್ಸಿ ಕ್ರಾಪ್‌ ಟಾಪ್‌ಗಳು ಟೀನೇಜ್‌-ಕಾಲೇಜ್‌ ಹುಡುಗಿಯರ ಫೇವರೇಟ್‌ ಲಿಸ್ಟ್‌ನಿಂದ ಇನ್ನೂ ಹೊರ ಬಿದ್ದಿಲ್ಲ!. ಆಗಲೇ ಇವು ಮತ್ತೊಮ್ಮೆ ಹೊಸ ವೈಬ್ರೆಂಟ್‌ ಕಲರ್‌ಗಳಲ್ಲಿ ಕಾಣಿಸಿಕೊಂಡಿವೆ. ಬೆಲ್ಲಿ ತೋರಿಸಲು ಬಯಸುವ ಯುವತಿಯರನ್ನು ಆವರಿಸಿಕೊಂಡಿವೆ.

2/5

ಕಾಜಲ್‌ ಅಗರ್‌ವಾಲ್‌ ಬಾಕ್ಸಿ ಕ್ರಾಪ್‌ ಟಾಪ್‌

ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಕಾಜಲ್‌ ಅಗರ್ವಾಲ್‌ ಧರಿಸಿದ್ಧ ವೈಬ್ರೆಂಟ್‌ ಆರೆಂಜ್‌ ಕಲರ್‌ನ ಬಾಕ್ಸಿ ಕ್ರಾಪ್‌ ಟಾಪ್‌ ಟ್ರೆಂಡಿಯಾಗಿದೆ. ಫೋಟೋಗಳು ವೈರಲ್‌ ಆಗಿವೆ. ಕಾಜಲ್‌ ಮದುವೆಯಾಗಿ ಮಗುವಾದ ನಂತರವೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದಕ್ಕೆ ಸಾಥ್‌ ನೀಡಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

3/5

ಬಾಕ್ಸಿ ಕ್ರಾಪ್‌ ಟಾಪ್‌ ವಿಶೇಷತೆ

ವೈಬ್ರೆಂಟ್‌ ಕಲರ್‌ಗಳಲ್ಲಿ ಆನ್‌ಲೈನ್‌ ಶಾಪ್‌ಗಳಲ್ಲಿ ದೊರಕುತ್ತಿರುವ ಈ ಬಾಕ್ಸಿ ಕ್ರಾಪ್‌ ಟಾಪ್‌ಗಳು ಲೂಸಾದ ಶೋಲ್ಡರ್‌ ಅಂದರೇ ದೊಗಲೆ ಸ್ಲೀವ್‌ ಡಿಸೈನ್‌ ಹೊಂದಿರುತ್ತವೆ. ಕೇಪ್‌ನಂತಹ ವಿನ್ಯಾಸ ಒಳಗೊಂಡಿರುತ್ತವೆ. ಧರಿಸಿದಾಗ ಬೆಲ್ಲಿಯಿಂದ ಮೇಲೆ ಕೂರುತ್ತವೆ.

4/5

ಬಾಕ್ಸಿ ಕ್ರಾಪ್‌ ಟಾಪ್‌ ಮಿಕ್ಸ್ ಮ್ಯಾಚ್‌ ಸ್ಟೈಲಿಂಗ್‌

1) ಮಾಡರ್ನ್‌ ಲುಕ್‌ ನೀಡುವ ಇವನ್ನು ಸಾಕಷ್ಟು ಬಗೆಯ ಉಡುಗೆಗಳೊಂದಿಗೆ ಮಿಕ್ಸ್ ಮ್ಯಾಚ್‌ ಮಾಡಬಹುದು.

2) ಲಾಂಗ್‌-ಶಾರ್ಟ್ ಸ್ಕರ್ಟ್‌ನೊಂದಿಗೆ ಧರಿಸಬಹುದು.

3) ಡೆನಿಮ್‌ ಪ್ಯಾಂಟ್‌, ಸ್ಕರ್ಟ್‌ನೊಂದಿಗೂ ಮ್ಯಾಚ್‌ ಮಾಡಬಹುದು.

5/5

4) ಮಿನಿ ಶಾರ್ಟ್ಸ್ ಹಾಗೂ ಜೀನ್ಸ್ ಶಾರ್ಟ್‌ಗಳೊಂದಿಗೆ ಧರಿಸಿದಾಗ ಗ್ಲಾಮರಸ್‌ ಲುಕ್‌ ನೀಡುತ್ತವೆ.

5) ಇವಕ್ಕೆ ಮಿನಿಮಲ್‌ ಆಕ್ಸೆಸರೀಸ್‌ ಧರಿಸಿದರೇ ಸಾಕು!

6) ವೀಕೆಂಡ್‌ ಔಟಿಂಗ್‌ಗೆ ಇದು ಫ್ಯಾಷನೆಬಲ್‌ ಔಟ್‌ಫಿಟ್‌.

7) ವೈಬ್ರೆಂಟ್‌ ಕಲರ್‌ನವು ಬೋಲ್ಡ್ ಲುಕ್‌ ನೀಡುತ್ತವೆ.

ಶೀಲಾ ಸಿ ಶೆಟ್ಟಿ

View all posts by this author