ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Photos: ಮೊದಲನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಡಾಲಿ ಧನಂಜಯ ದಂಪತಿ; ಇಲ್ಲಿವೆ ಅಪರೂಪದ ಫೋಟೋಗಳು

ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರು ಕಳೆದ ವರ್ಷ ಫೆ. 16ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ದೂರಿಯಾಗಿ ನಡೆದ ಈ ಮದುವೆಗೆ ಸಾವಿರಾರು ಅಭಿಮಾನಿಗಳು, ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಆಗಮಿಸಿ, ಧನು ಮತ್ತು ಧನ್ಯತಾಗೆ ಶುಭ ಹಾರೈಸಿದ್ದರು. ಅಂದಹಾಗೆ, ಧನಂಜಯ್‌ ಅವರು ಇಂದು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪತ್ನಿ ಧನ್ಯತಾ ಅವರು ಕೆಲ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1/10

ಧನಂಜಯ್ ಅವರು ಚಿತ್ರರಂಗದಲ್ಲಿ 'ನಟ ರಾಕ್ಷಸ'ನಾದರೆ, ಧನ್ಯತಾ ಅವರು ವೃತ್ತಿಯಲ್ಲಿ ಸ್ತ್ರೀರೋಗ ತಜ್ಞರು. ಕಲೆ ಮತ್ತು ವೈದ್ಯಕೀಯ ಜಗತ್ತಿನ ಈ ಅಪರೂಪದ ಬೆಸುಗೆ ಇವರದ್ದು.

2/10

ಇವರಿಬ್ಬರ ಪರಿಚಯ ಮತ್ತು ಪ್ರೇಮಕ್ಕೆ ಸಾಕ್ಷಿಯಾಗಿದ್ದು ಸಾಂಸ್ಕೃತಿಕ ನಗರಿ ಮೈಸೂರು. ಇಬ್ಬರೂ ತಮ್ಮ ಶಿಕ್ಷಣವನ್ನು ಮೈಸೂರಿನಲ್ಲೇ ಪೂರೈಸಿದ್ದು, ಈ ನಗರ ಇವರ ಜೀವನದಲ್ಲಿ ಮಹತ್ವದ ಸ್ಥಾನ ಪಡೆದಿದೆ.

3/10

ಆರಂಭದಲ್ಲಿ ಧನು & ಧನ್ಯಾ ಅವರದ್ದು ಪರಿಚಯ ಮತ್ತು ಸ್ನೇಹವಾಗಿತ್ತು. ಧನ್ಯತಾ ಅವರು ಧನಂಜಯ್ ಅವರ ಅಭಿಮಾನಿಯಾಗಿದ್ದರು. ಕಾಲಕ್ರಮೇಣ ಈ ಸ್ನೇಹ ಪ್ರೇಮಕ್ಕೆ ತಿರುಗಿತು.

4/10

ಧನ್ಯತಾ ಅವರ ಸರಳತೆ ಮತ್ತು ವ್ಯಕ್ತಿತ್ವಕ್ಕೆ ಧನಂಜಯ್ ಮನಸೋತರು. ಧನ್ಯತಾ ಅವರ ಸ್ವಭಾವವೇ ಧನಂಜಯ್‌ ಅವರನ್ನು ಹೆಚ್ಚು ಆಕರ್ಷಿಸಿತು.

5/10

2024ರ ನವೆಂಬರ್ ತಿಂಗಳಿನಲ್ಲಿ ಧನ್ಯತಾ ಅವರ ಜೊತೆಗೆ ಮದುವೆ ಆಗುತ್ತಿರುವ ಬಗ್ಗೆ ಅಧಿಕೃತವಾಗಿ ಧನಂಜಯ್ ಘೋಷಿಸಿದರು.

6/10

2025ರ ಫೆಬ್ರವರಿ 16ರಂದು ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ಸ್‌ನಲ್ಲಿ ಧನು & ಧನ್ಯತಾ ಅವರ ವಿವಾಹ ಅದ್ದೂರಿಯಾಗಿ ನೆರವೇರಿತು.

7/10

ಡಾಲಿ ಮದುವೆಗೆ ಸ್ಯಾಂಡಲ್‌ವುಡ್‌ನ ದಿಗ್ಗಜರು, ರಾಜಕೀಯ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.

8/10

ಫೆಬ್ರವರಿ 16 ರಂದು ಇವರ ಮದುವೆ ವಾರ್ಷಿಕೋತ್ಸವವಾದರೆ, ಅದರ ಮರುದಿನವೇ (ಫೆಬ್ರವರಿ 17) ಧನ್ಯತಾ ಅವರ ಹುಟ್ಟುಹಬ್ಬ. ಹೀಗಾಗಿ ಫೆಬ್ರವರಿ ಇವರಿಗೆ ಡಬಲ್ ಸಂಭ್ರಮದ ತಿಂಗಳು.

9/10

ಈ ಮಧ್ಯೆ ಧನಂಜಯ್ ಅವರು ತಾವು ತಂದೆಯಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವಾರ್ಷಿಕೋತ್ಸವವು ಮಗುವಿನ ನಿರೀಕ್ಷೆಯ ಸಂಭ್ರಮವನ್ನೂ ಡಬಲ್‌ ಮಾಡಿದೆ.

10/10

ಇಂದು ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಜೋಡಿ ನೀವು ಶುಭ ಹಾರೈಸಿ.