ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Fashion 2025: ದೀಪಾವಳಿಯ ರಂಗು ಹೆಚ್ಚಿಸುವ ಡಿಸೈನರ್‌ವೇರ್‌ಗಳಿವು

Deepavali Fashion 2025: ದೀಪಾವಳಿ ಹಬ್ಬಕ್ಕೆಂದೇ ಲೆಕ್ಕವಿಲ್ಲದಷ್ಟು ನಾನಾ ವಿನ್ಯಾಸದ ಝಗಮಗಿಸುವ ಉಡುಪುಗಳು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿದ್ದು, ಯಾವ್ಯಾವ ಬಗೆಯವು ನಿಮ್ಮನ್ನು ಆತ್ಯಾಕರ್ಷಕವಾಗಿಸಬಲ್ಲವು? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ವಿವರಿಸಿದ್ದಾರೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ದೀಪಾವಳಿಯ ರಂಗು ಹೆಚ್ಚಿಸುವ ಡಿಸೈನರ್‌ವೇರ್‌ಗಳು ಇದೀಗ ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸಿವೆ. ಹೌದು, ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬಕ್ಕೆ ಸೂಟ್ ಆಗುವಂತೆ ವರ್ಷ ವರ್ಷವೂ ನಾನಾ ವಿನ್ಯಾಸದ ಝಗಮಗಿಸುವ ಡಿಸೈನರ್‌ವೇರ್‌ಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಔಟ್‌ಫಿಟ್‌ಗಳು ಕಾಲಿಡುತ್ತವೆ. ಕಾಟನ್ ಹಾಗೂ ಡಲ್ ಫಿನಿಶಿಂಗ್ ಫ್ಯಾಬ್ರಿಕ್ ಹಾಗೂ ಡಿಸೈನರ್‌ವೇರ್‌ಗಳು ಮುಂದಿನ ಸೀಸನ್‌ವರೆಗೂ ಸೈಡಿಗೆ ಸರಿಯುತ್ತವೆ. ಕಲರ್‌ಫುಲ್ ಅದರಲ್ಲೂ ಹೆವ್ವಿ ವರ್ಕ್ ಡಿಸೈನ್ ಇರುವಂತವು ಹಾಗೂ ಝಗಮಗಿಸುವಂತಹ ಉಡುಪುಗಳು ಬೇಡಿಕೆ ಹೆಚ್ಚಿಸಿಕೊಳ್ಳುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

2/5

ಮಿಂಚಿಸುವ ಡಿಸೈನರ್‌ವೇರ್ಸ್

ಈ ಫೆಸ್ಟೀವ್ ಸೀಸನ್‌ನಲ್ಲಿ ಶೈನಿಂಗ್ ಇರುವಂತಹ ನಾನಾ ಬಗೆಯ ಫ್ಯಾಬ್ರಿಕ್‌ನ ಅದರಲ್ಲೂ ಗೋಲ್ಡ್, ಸಿಲ್ವರ್ ಶೇಡ್‌ನ ಡಿಸೈನರ್‌ವೇರ್‌ಗಳು ಟ್ರೆಂಡಿಯಾಗಿವೆ. ಇನ್ನು, ಮಿಕ್ಸ್ ಮ್ಯಾಚ್ ಮಾಡಲು ಲಭ್ಯವಿರುವ ಫ್ಯಾಬ್ರಿಕ್‌ಗಳಿಗೆ ಮೊದಲಿಗಿಂತ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ.

3/5

ಡಿಸೈನರ್ ಅಶ್ವಿನಿ ಪ್ರಕಾರ, ಶೈನಿಂಗ್ ಫ್ಯಾಬ್ರಿಕ್ ಫೆಸ್ಟಿವ್ ಸೀಸನ್‌ಗೆ ಹೇಳಿ ಮಾಡಿಸಿದಂತಿರುವುದರಿಂದ ಅತಿ ಹೆಚ್ಚು ಬಳಕೆ ಆಗುತ್ತದೆ. ಮೊದಲಿನಂತೆ ಈ ಶೈನಿಂಗ್ ಫ್ಯಾಬ್ರಿಕ್‌ನಿಂದ ಇಡೀ ಡಿಸೈನರ್‌ವೇರ್ ಸಿದ್ಧಗೊಳ್ಳುವುದಿಲ್ಲ. ಬದಲಾಗಿ ಇದಕ್ಕೆ ನಾನಾ ಬಗೆಯ ವಿನ್ಯಾಸವನ್ನು ಮಿಕ್ಸ್ ಮ್ಯಾಚ್ ಮಾಡಲಾಗುತ್ತದೆ. ಹಾಗಾಗಿ ನೋಡಲು ಇದು ತೀರಾ ಶೈನಿಂಗ್ ಎಂದನಿಸುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನೋಡಲು ಆಕರ್ಷಕವಾಗಿ ಕಾಣುತ್ತದೆ ಎನ್ನುತ್ತಾರೆ.

4/5

ಶೈನಿಂಗ್ ಕ್ರಾಪ್ ಲೆಹೆಂಗಾ

ಶೈನಿಂಗ್ ಫ್ಯಾಬ್ರಿಕ್ ಹೊಂದಿರುವ ಸಾಫ್ಟ್ ಸಿಲ್ಕ್ ಇಲ್ಲವೇ ಪ್ರಿಂಟೆಡ್ ಫ್ಲೋರಲ್ ಕ್ರಾಪ್ ಲೆಹೆಂಗಾಗಳು, ಇಂದು ಫ್ಯಾಷನ್‌ನಲ್ಲಿವೆ. ಅದರಲ್ಲೂ ಟೀನೇಜ್ ಹುಡುಗಿಯರಿಗೆ ಸೂಟ್ ಆಗುವಂತಹ ನಾನಾ ಬಗೆಯ ಪ್ರಿಂಟೆಡ್ ಫ್ಲೋರಲ್ ಲೆಹೆಂಗಾಗಳು ಹೆಚ್ಚು ಬೇಡಿಕೆಯಲ್ಲಿವೆ ಎನ್ನುವ ಮಾಡೆಲ್ ರಾಣಿ ಪ್ರಕಾರ, ಕ್ರಾಪ್ ಟಾಪ್ ಸಾದಾ ಡಿಸೈನ್‌ನಲ್ಲಿ ಲಭ್ಯವಿದ್ದು, ಇನ್ನುಳಿದಂತೆ ಚಿಕ್ಕ ಹಾಗೂ ದೊಡ್ಡ ಹೂವುಗಳನ್ನೊಳಗೊಂಡ ಪ್ರಿಂಟೆಡ್ ಲೆಹೆಂಗಾ ಅಥವಾ ಗಾಗ್ರಗಳು ಇಂದು ಟ್ರೆಂಡ್‌ನಲ್ಲಿವೆ.

5/5

ಝಗಮಗಿಸುವ ಎಥ್ನಿಕ್ ಗೌನ್

ಗೋಲ್ಡನ್ ಶೇಡ್‌ನ ಸಾದಾ ಹಾಗೂ ಪ್ರಿಂಟೆಡ್ ಎಂಬೊಸಿಂಗ್ ಗೌನ್‌ಗಳು ಇಂದು ಹುಡುಗಿಯರನ್ನು ಮಾತ್ರವಲ್ಲ, ವಿವಾಹಿತರನ್ನು ಸೆಳೆದಿವೆ. ಅಲ್ಲಲ್ಲಿ ಮೊಟಿಫ್ಸ್ ಇರುವ ಈ ಗೌನ್‌ಗಳು ಹೆಚ್ಚು ಜನಪ್ರಿಯಗೊಂಡಿವೆ.

ಶೀಲಾ ಸಿ ಶೆಟ್ಟಿ

View all posts by this author