Deepavali Makeup 2025: ದೀಪಾವಳಿ ಹಬ್ಬಕ್ಕಿರಲಿ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್
Traditional Grand Makeup: ದೀಪಾವಳಿ ಹಬ್ಬದಲ್ಲಿ ನೀವು ಧರಿಸುವ ಗ್ರ್ಯಾಂಡ್ ಸೀರೆ ಅಥವಾ ಉಡುಪಿಗೆ ಮ್ಯಾಚ್ ಆಗುವಂತಹ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್‌ಗೆ ಸೈ ಎನ್ನಬೇಕು. ಇದಕ್ಕಾಗಿ ಒಂದಿಷ್ಟು ಸಿಂಪಲ್ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.
ದೀಪಾವಳಿ ಹಬ್ಬದಲ್ಲಿ ನೀವು ಧರಿಸುವ ಗ್ರ್ಯಾಂಡ್ ಉಡುಪು ಹಾಗೂ ಸೀರೆಗೆ ತಕ್ಕನಾಗಿ ಗ್ರ್ಯಾಂಡ್ ಟ್ರೆಡಿಷನಲ್ ಮೇಕಪ್ ಮಾಡಿ. ಆಗ ನೋಡಲು ಅತ್ಯಾಕರ್ಷಕವಾಗಿ ಕಾಣಿಸುವಿರಿ ಎನ್ನುತ್ತಾರೆ ಮೇಕಪ್ ಎಕ್ಸ್‌ಪರ್ಟ್ಸ್.
ದೀಪಾವಳಿಯ ಮೇಕಪ್‌ಗೆ ಸಿಂಪಲ್ ಬೇಸಿಕ್ ಜ್ಞಾನ
ದೀಪಾವಳಿ ಹಬ್ಬದ ಮೇಕಪ್‌ಗೆ ಆದಷ್ಟೂ ಗ್ರ್ಯಾಂಡ್ ಲುಕ್ ನೀಡುವ ಉತ್ತಮ ಗುಣಮಟ್ಟದ ಬ್ರ್ಯಾಂಡೆಡ್ ಹೈಡೆಫನೇಷನ್ ಮೇಕಪ್ ಸೌಂದರ್ಯವರ್ಧಕಗಳನ್ನು ಬಳಸಿ. ಇದರಲ್ಲೂ ನಾರ್ಮಲ್, ಆಯ್ಲಿ, ಡ್ರೈ ಸ್ಕಿನ್‌ಗಾಗಿ ನಾನಾ ಬಗೆಯ ಫೌಂಡೇಷನ್‌ಗಳು ಸಿಗುತ್ತವೆ.
ಮೇಕಪ್ ಮಾಡುವುದು ಒಂದು ಕಲೆ
ಮೇಕಪ್‌ಗೂ ಮೊದಲು ಕ್ಲೆನ್ಸಿಂಗ್‌ನಿಂದ ಮುಖವನ್ನು ಕ್ಲೀನ್ ಮಾಡಿ ಕೊಳ್ಳಿ. ನಂತರ ಆಯಿಲ್ ಫ್ರೀ ಸನ್‌ಸ್ಕ್ರೀನ್ ಹಚ್ಚಿ . ಡಾರ್ಕ್ ಸರ್ಕಲ್ ಮರೆಮಾಚಲು ಕನ್ಸಿಲರ್ ಬಳಸಿ. ನಂತರ ಫೌಂಡೇಷನ್ ಹಚ್ಚಿ. ಪೌಡರ್ ಹಚ್ಚಿ, ಕೆನ್ನೆಗೆ ಗ್ಲಿಟರ್ ಬ್ಲಷರ್ ಬಳಸಿ.
ಆಕರ್ಷಕವಾಗಿ ಬಿಂಬಿಸುವ ಐ ಮೇಕಪ್
ಐಬ್ರೊ ಪೆನ್ಸಿಲ್‌ನಿಂದ ಹುಬ್ಬನ್ನು ತಿದ್ದಿ. ನಿಮ್ಮ ಔಟ್‌ಫಿಟ್ ಅಥವಾ ಸೀರೆಗೆ ಮ್ಯಾಚ್ ಆಗುವಂತಹ ಐ ಶ್ಯಾಡೋ ಲೇಪಿಸಿ. ಗ್ರ್ಯಾಂಡ್ ಲುಕ್‌ಗಾಗಿ ಗ್ಲಿಟ್ಟರ್ ಅಥವಾ ಶೈನಿಂಗ್ ಇರುವಂತಹ ಐ ಶ್ಯಾಡೋಗಳನ್ನು ಲೇಪಿಸಿ. ಮಸ್ಕರಾ ಹಾಕಿ. ಐ ಲೈನರ್‌ನಿಂದ ಲೈನ್ ಎಳೆಯಿರಿ. ಕಾಡಿಗೆ ಮರೆಯದೇ ಹಚ್ಚಿ. ಸೆಲೆಬ್ರೆಟಿ ಲುಕ್ಗಾಗಿ ಫೇಕ್ ಲ್ಯಾಶೆಸ್ ಕೂಡ ಬಳಸಬಹುದು.
ವಧನವನ್ನು ಹೈಲೈಟಾಗಿಸುವ ಲಿಪ್‌ಸ್ಟಿಕ್
ಲಿಪ್ ಲೈನರ್‌ನಿಂದ ತುಟಿಯ ಬಾರ್ಡರ್ ಲೈನ್ ಎಳೆದು ನಿಮಗಿಷ್ಟವಾದ ಮುಖಕ್ಕೆ ಹೊಂದುವಂತಹ ಲಿಪ್‌ಸ್ಟಿಕ್ ಬಳಸಿ. ನ್ಯೂಡ್ ಲಿಪ್‌ಸ್ಟಿಕ್ ಗ್ರ್ಯಾಂಡ್ ಲುಕ್ ನೀಡದು. ಹಾಗಾಗಿ ಕೋರಲ್ ಅಥವಾ ಮರೂನ್ ಅಥವಾ ವೈನ್ ಕಲರ್‌ನ ಲಿಪ್‌ಸ್ಟಿಕ್ ಲೇಪಿಸಿ.
ಹೇರ್‌ಸ್ಟೈಲ್ ಆಕರ್ಷಕವಾಗಿರಲಿ
ಗ್ರ್ಯಾಂಡಾಗಿ ಕಾಣಿಸಲು ಆದಷ್ಟೂ ಅತ್ಯಾಕರ್ಷಕ ಹೇರ್‌ಸ್ಟೈಲ್‌ಗಳನ್ನು ಚೂಸ್ ಮಾಡಿ. ಫ್ರೀ ಹಾಗೂ ಹಾಫ್ ಫ್ರೀ ಹೇರ್‌ಸ್ಟೈಲ್‌ನಲ್ಲೆ ಸಾಕಷ್ಟು ಬಗೆಯ ಡಿಸೈನ್‌ಗಳಿವೆ. ಬನ್ ಹೇರ್‌ಸ್ಟೈಲ್ ಕೂಡ ಮಾಡಬಹುದು. ಅಂದ ಹೆಚ್ಚಿಸಲು ಹೂವುಗಳನ್ನು ಮುಡಿಯಬಹುದು.
ಟ್ರೆಡಿಷನಲ್ ಲುಕ್‌ಗಾಗಿ ಹಣೆಗೆ ಬಿಂದಿ
ಇನ್ನು, ಪಕ್ಕಾ ಟ್ರೆಡಿಷನಲ್ ಲುಕ್ ಪಡೆಯಲು ಹಣೆಗೆ ಬಿಂದಿಯಿರಿಸಿ. ಅಗಲವಾದ ಮ್ಯಾಚಿಂಗ್ ಬಿಂದಿ ಕೂಡ ಚೆನ್ನಾಗಿ ಕಾಣಿಸುತ್ತದೆ. ಇನ್ನು, ಸ್ಟೋನ್, ಕ್ರಿಸ್ಟಲ್, ಬೀಡ್ಸ್ ಡಿಸೈನರ್ ಬಿಂದಿಗಳ ಆಯ್ಕೆ ಕೂಡ ಬೆಸ್ಟ್.