ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಿರಸಿಯ ಎಂ.ಎಂ ಮಹಾವಿದ್ಯಾಲಯದಲ್ಲಿ ʼಕ್ರಿಮಿನಲ್‌ʼ ಶೂಟಿಂಗ್‌; ಧ್ರುವ, ರಚ್ಚುಗೆ ಸನ್ಮಾನ

ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' ಚಿತ್ರದ ಶೂಟಿಂಗ್‌ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಭರದಿಂದ ಸಾಗಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಬನವಾಸಿ, ಸೇರಿದಂತೆ ಹಲವು ಕಡೆಗಳಲ್ಲಿ ಮೊನ್ನೆ ಚಿತ್ರೀಕರಣ ನಡೆಸಲಾಗಿತ್ತು.

ಸಂಗ್ರಹ ಚಿತ್ರ
1/4

ಧ್ರುವ ಸರ್ಜಾ ಅವರ 7ನೇ ಸಿನಿಮಾ 'ಕ್ರಿಮಿನಲ್' ಚಿತ್ರದ ಶೂಟಿಂಗ್‌ ಶಿರಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಭರದಿಂದ ಸಾಗಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿ ಕಾಣಿಸಿಕೊಳ್ಳಲಿದ್ದಾರೆ. ಬನವಾಸಿ, ಸೇರಿದಂತೆ ಹಲವು ಕಡೆಗಳಲ್ಲಿ ಮೊನ್ನೆ ಚಿತ್ರೀಕರಣ ನಡೆಸಲಾಗಿತ್ತು. ಮಾಹಿತಿ ಪ್ರಕಾರ ಶಿವಮೊಗ್ಗ, ಹಾವೇರಿ ಹಾಗೂ ಶಿರಸಿಯಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಅವರು 'ಹೋರಿ ಶಿವ' ಪಾತ್ರದಲ್ಲಿ ನಟಿಸಲಿದ್ದಾರೆ.

2/4

ಶಿರಸಿಯ ಎಂ ಎಂ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಳೆದ ಎರಡು ದಿನಗಳಿಂದ ಶೂಟಿಂಗ್‌ ನಡೆಸಲಾಗಿತ್ತು. ಕ್ರಿಮಿನಲ್‌ ಚಿತ್ರದ ನಾಯಕ ಧ್ರುವ ಸರ್ಜಾ ಹಾಗೂ ನಾಯಕಿ ರಚಿತಾ ರಾಮ್‌ ಅವರಿಗೆ ಮಹಾವಿದ್ಯಾಲಯದಲ್ಲಿ ಸನ್ಮಾನಿಸಲಾಗಿದೆ. ಶಿರಸಿಯ ಅಧಿದೇವತೆ ಮಾರಿಕಾಂಬಾ ದೇವಿಯ ಫೋಟೋವನ್ನು ನೀಡಿ ಪ್ರಾಶುಂಪಾಲರಾದ ಜಿಎಸ್‌ ಟಿ ಭಟ್‌ ಸ್ಮಾನಿಸಿದ್ದಾರೆ. ಈ ವೇಳೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹೆಗಡೆ ಹಾಗೂ ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು.

3/4

ಉತ್ತರ ಕರ್ನಾಟಕ ಸೊಗಡಲ್ಲಿ ಸಿನಿಮಾ ಮೂಡಿ ಬರಲಿದೆ. ಮನಿಶ್ ಶಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್​ನಲ್ಲಿ ನಡೆದ ಪ್ರೇಮ ಕಥೆ ಬಳಕೆ ಮಾಡಲಾಗಿದೆ.ಈ ಚಿತ್ರದಲ್ಲಿ ತಾರಾ ಅವರು ಧ್ರುವ ತಾಯಿ ಪಾತ್ರ ಮಾಡುತ್ತಿದ್ದಾರೆ.

4/4

ಕೆರೆಬೇಟೆ ಸಿನಿಮಾ ಖ್ಯಾತಿಯ ಡೈರೆಕ್ಟರ್ ರಾಜ್ ಗುರು ಈ ಸಿನಿಮಾದ ನಿರ್ದೇಶಕರು. ಗೋಲ್ಡ್ ಮೈನ್ ನ ಮನೀಶ್ ಶಾ ‘ಕ್ರಿಮಿನಲ್’, ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಕನ್ನಡ ನಾಡಿನ ಮಣ್ಣಿನಲ್ಲಿ ನಡೆದ ನೈಜ ಪ್ಯೂರ್ ಲವ್ ಸ್ಟೋರಿ ಇದಾಗಿದೆ.

Vishakha Bhat Heggar

View all posts by this author