Disha Patani: ಕಿಯರಾ ಬಿಕಿನಿ ಲುಕ್ ಕಾಪಿ ಮಾಡಿದ ದಿಶಾ ಪಟಾನಿ- ಫೋಟೋಸ್ ಇಲ್ಲಿವೆ ನೋಡಿ
ಬಾಲಿವುಡ್ ನಟಿ ದಿಶಾ ಪಟಾನಿ ಮತ್ತೊಮ್ಮೆ ಕಿಯಾರಾ ಅಡ್ವಾಣಿ ಜೊತೆ ಸ್ಪರ್ಧೆ ಮಾಡುತ್ತಿರುವಂತೆ ಭಾಸವಾಗುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವಾರ್ 2 ಚಿತ್ರದ ಟೀಸರ್ ಬಿಡುಗಡೆಯಾಗುತ್ತಿದ್ದಂತೆ ದಿಶಾ ಪಟಾನಿ ಹಸಿರು ಬಣ್ಣದ ಬಿಕಿನಿ ತೊಟ್ಟು ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದೇ ಬಣ್ಣದ ಬಿಕಿನಿಯನ್ನು ಕಿಯರಾ ಚಿತ್ರದಲ್ಲಿ ಧರಿಸಿದ್ದರು.



ಬಾಲಿವುಡ್ ನಲ್ಲಿ ವೃತ್ತಿ ಜೀವನವನ್ನು ಒಂದೇ ಸಮಯದಲ್ಲಿ ಪ್ರಾರಂಭಿಸಿದ ನಟಿಯಾರಾದ ದಿಶಾ ಪಟಾನಿ ಮತ್ತು ಕಿಯಾರಾ ಆಡ್ವಾಣಿ ನಡುವೆ ಸ್ಪರ್ಧೆ ಇದೆಯೇ ಎನ್ನುವಂತೆ ಹಲವು ಬಾರಿ ಅವರ ಅಭಿಮಾನಿಗಳಿಗೆ ಭಾಸವಾಗಿದೆ. ಯಾಕೆಂದರೆ ಇವರಿಬ್ಬರು ಒಬ್ಬರನ್ನೊಬ್ಬರು ಉಡುಗೆ ತೊಡುಗೆಯಲ್ಲಿ ಕಾಪಿ ಮಾಡುತ್ತಿರುವುದು ಹಲವು ಬಾರಿ ಬೆಳಕಿಗೆ ಬಂದಿದೆ.

ಸುಶಾಂತ್ ಸಿಂಗ್ ರಜಪೂತ್ ಜೊತೆ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ದಿಶಾ ಮತ್ತು ಕಿಯಾರಾ ಪರಸ್ಪರ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನುವಂತೆ ಭಾಸವಾಗುವ ಚಿತ್ರವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ದಿಶಾ ಪಟಾನಿ ಆಲಿವ್ ಹಸಿರು ಬಣ್ಣದ ಬಿಕಿನಿಯಲ್ಲಿರುವ ಹೊಸ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕಡಲತೀರದ ಬಳಿ ಈ ಚಿತ್ರಕ್ಕೆ ಅವರು ಪೋಸ್ ನೀಡಿದ್ದು, ಈ ವೇಳೆ ತಮ್ಮ ದೇಹ ಸೌಂದರ್ಯವನ್ನೂ ಪ್ರದರ್ಶಿಸಿದ್ದಾರೆ.

ದಿಶಾ ಪಟಾನಿ ಅವರ ಈ ಚಿತ್ರ ಕಿಯಾರಾ ಆಡ್ವಾಣಿ ಅವರಿಗೆ ಪೈಪೋಟಿ ನೀಡುವಂತಿದೆ. ಕಿಯರಾ ಅವರು ಅಭಿನಯಿಸಿರುವ ವಾರ್ 2 ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಇದರಲ್ಲಿ ಅವರು ಇದೇ ಬಣ್ಣದ ಬಿಕಿನಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಇದೀಗ ದಿಶಾ ಚಿತ್ರ ಬಿಡುಗಡೆಯಾದ ಬಳಿಕ ಇದು ಅವರಿಬ್ಬರ ಹೆಚ್ಚಿನ ಅಭಿಮಾನಿಗಳ ಗಮನ ಸೆಳೆದಿದೆ.

ಫ್ಯಾಷನ್ ಆಯ್ಕೆಗಳು ಮತ್ತು ಫಿಟ್ನೆಸ್ ಕುರಿತ ಪೋಸ್ಟ್ಗಳಿಗೆ ಹೆಸರುವಾಸಿಯಾದ ದಿಶಾ ಗುರುವಾರ ಸಂಜೆ ತಡವಾಗಿ ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ತ್ವರಿತವಾಗಿ ವೈರಲ್ ಆಗಿದ್ದು, ಸಾಕಷ್ಟು ಮಂದಿಯಿಂದ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

ಬಹುತೇಕ ಎಲ್ಲರೂ ದಿಶಾ ಅವರು ಕಿಯಾರಾ ಅವರನ್ನು ನಕಲು ಮಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ದಿಶಾ ಅವರ ಇತ್ತೀಚಿನ ಪೋಸ್ಟ್ ಕಿಯಾರಾ ಅವರ ವಾರ್ 2 ಚಿತ್ರದಲ್ಲಿನ ಅವರ ಪಾತ್ರದಿಂದ ಎಲ್ಲರ ಗಮನ ತನ್ನತ್ತ ಸೆಳೆಯಲು ಉದ್ದೇಶಪೂರ್ವಕ ಮಾಡಿರುವ ಕ್ರಮವಾಗಿದೆ ಎಂದು ಹೇಳಿದ್ದಾರೆ.

ರೆಡ್ಡಿಟ್ ಬಳಕೆದಾರರೊಬ್ಬರು ಕಿಯಾರಾ ಬಿಕಿನಿ ಫೋಟೋಗಳು ಸಂಚಲನ ಸೃಷ್ಟಿಸುತ್ತಿರುವುದರಿಂದ ದಿಶಾ ಅಸುರಕ್ಷಿತ ಭಾವನೆ ಉಂಟಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಚಿತ್ರಗಳಿಗೆ ಸಾಕಷ್ಟು ಕಾಮೆಂಟ್ ಗಳು ಬಂದಿದ್ದು,ಅನೇಕರು ದಿಶಾ ಮತ್ತು ಕಿಯರಾ ಅವರ ಒಂದೇ ರೀತಿಯ ಬಿಕಿನಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಹಲವಾರು ಇವರಿಬ್ಬರ ನಡುವೆ ಪೈಪೋಟಿ ಉಂಟಾಗಿರಬಹುದು ಎಂದು ಊಹಿಸಿದ್ದಾರೆ. ಕಿಯಾರಾ ಅವರಂತೆಯೇ ಅದೇ ಬಣ್ಣದ ಥೀಮ್ ಹೊಂದಿರುವ ಬಿಕಿನಿಯನ್ನು ದಿಶಾ ಧರಿಸಿರುವುದು ವಿಪರ್ಯಾಸ . ಅವರ ನಡುವೆ ಖಂಡಿತವಾಗಿಯೂ ಒಂದು ರೀತಿಯ ಪೈಪೋಟಿ ಇದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

ಈ ನಡುವೆಯೂ ಕಿಯಾರಾ ಅವರ ವಾರ್ 2 ಚಿತ್ರದ ಟೀಸರ್ ಸಾಕಷ್ಟು ಸದ್ದು ಮಾಡುತ್ತಿದೆ. ಪರದೆಯ ಮೇಲೆ ಅವರು ಮೊದಲ ಬಾರಿಗೆ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದು, ಈ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಹೆಚ್ಚಿನ ವಿಷಯಗಳು ಮೊದಲ ಬಾರಿಗೆ ಆಗಿದೆ. ಇದು ಮೊದಲ ವೈಆರ್ಎಫ್ ಚಿತ್ರ, ಮೊದಲ ಆಕ್ಷನ್ ಚಿತ್ರ, ಮೊದಲ ಬಿಕಿನಿ ಶಾಟ್ ಎಂದು ತಿಳಿಸಿದ್ದಾರೆ.

ಅಯಾನ್ ಮುಖರ್ಜಿ ನಿರ್ದೇಶನದ ವಾರ್ 2 ಚಿತ್ರದಲ್ಲಿ ಹೃತಿಕ್ ರೋಷನ್ ಕಬೀರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನಿಯರ್ ಎನ್ಟಿಆರ್ ಕೂಡ ಇದರಲ್ಲಿ ನಟಿಸಿದ್ದು, ಈ ಆಗಸ್ಟ್ 14 ರಂದು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.