Disha Patani: ಬ್ಯಾಕ್ಲೆಸ್ ಪೋಸ್ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ದಿಶಾ ಪಟಾನಿ; ಬ್ಯೂಟಿ ಕ್ವೀನ್ ಎಂದ ನೆಟ್ಟಿಗರು
ದಿಶಾ ಪಟಾನಿ ಅವರು ಸ್ಟೈಲಿಶ್ ಬಟ್ಟೆಯಲ್ಲಿ ಫೋಟೊ ಶೂಟ್ ಮಾಡಿಸಿಕೊಳ್ಳುವುದು ಹೊಸ ವಿಚಾರವಲ್ಲ. ಹಾಗಿದ್ದರು ಅವರು ಈ ಬಾರಿ ತುಸು ಹೆಚ್ಚಾಗಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನೆಟ್ಟಿಗರ ಗಮನ ಸೆಳೆದಿದ್ದಾರೆ. ಅವರ ಕೆಲವು ಫೋಟೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Disha Patani


ಎಂ.ಎಸ್. ಧೋನಿ: ದಿ ಅನ್ಟೋಲ್ಡ್ ಸ್ಟೋರಿ', 'ಕುಂಗ್ ಫೂ ಯೋಗ', 'ಭಾಗಿ 2', 'ಭಾರತ್', 'ಮಲಂಗ್' ಸಿನಿಮಾ ಮೂಲಕ ಜನಪ್ರಿಯವಾದ ನಟಿ ದಿಶಾ ಪಟಾನಿ ಅವರು ತಮ್ಮ ಅದ್ಭುತ ಅಭಿನಯದಿಂದ ಮನೆಮಾತಾಗಿದ್ದಾರೆ. 2015ರಲ್ಲಿ ನಟ ವರುಣ್ ತೇಜ್ ಜೊತೆಗೆ 'ಲೋಫರ್' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಇವರು ಬಳಿಕ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.

ನೋಡಲು ಸಖತ್ ಬೋಲ್ಡ್ ಆಗಿರುವ ಇವರು ಇತ್ತೀಚೆಗಷ್ಟೇ ಫೋಟೊ ಶೂಟ್ ಮಾಡಿಸಿ ಕೊಂಡಿದ್ದು ಅವರ ಕೆಲವು ಫೋಟೊ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ಫೋಟೊದಲ್ಲಿ ನಟಿ ದಿಶಾ ಪಟಾನಿ ಅವರು ಬ್ಯಾಕ್ ಸೈಡ್ ಪೋಸ್ ನಲ್ಲಿ ಫೋಟೊ ತೆಗೆಸಿಕೊಂಡಿದ್ದು ಈ ಫೋಟೊ ಹೈಲೈಟ್ ಆಗಿದೆ. ಥ್ರೆಡ್ ವಿನ್ಯಾಸದ ಬ್ಯಾಕ್ಲೆಸ್ ಗ್ರೇ ಕಲರ್ ಕಾಂಬಿನೇಶನ್ ಹೊಂದಿದ್ದ ಈ ಬಟ್ಟೆ ಅವರಿಗೆ ಸಖತ್ ಸ್ಟೈಲಿಶ್ ಲುಕ್ ನೀಡಿದ್ದು ಸೆಕ್ಸಿಯಾಗಿ ಅವರು ಕಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ದಿಶಾ ಅವರು ರೆಡ್ ಹಾಗೂ ಪರ್ಪಲ್ ಕಲರ್ ಕಾಂಬಿನೇಶನ್ ಇರುವ ಮಾಡಲಿಂಗ್ ಬಟ್ಟೆ ತೊಟ್ಟಿದ್ದನ್ನು ಕಾಣಬಹುದು. ಸಿಂಪಲ್ ಮೇಕಪ್ ಹಾಗೂ ಕರ್ಲಿ ಹೇರ್ ಸ್ಟೈಲ್ ನಲ್ಲಿ ಸಖತ್ ಹಾಟ್ ಆಗಿ ನಟಿ ದಿಶಾ ಪಟಾನಿ ಅವರು ಫೋಟೊದಲ್ಲಿ ಕಂಡಿದ್ದಾರೆ.

ನಟಿ ದಿಶಾ ಪಟಾನಿ ಅವರು ಮೆರೂನ್ ಕಲರ್ ಸ್ಟೈಲಿಶ್ ವೆಸ್ಟರ್ನ್ ಔಟ್ ಫಿಟ್ ನಲ್ಲಿ ಕ್ಯೂಟ್ ಆಗಿ ಕಂಡಿದ್ದಾರೆ. ಡೀಪ್ ನೆಕ್ ಇದ್ದು ಅವರು ಈ ಬಟ್ಟೆಯಲ್ಲಿ ಬೋಲ್ಡ್ ಆಗಿ ಫೋಟೊಗೆ ಪೋಸ್ ನೀಡಿದ್ದಾರೆ. ನ್ಯಾಚುರಲ್ ಮೆಕಪ್ ಮತ್ತು ಫ್ರೀ ಹೇರ್ ಸ್ಟೈಲ್ ಅವರಿಗೆ ಹೊಸ ಲುಕ್ ನೀಡಿದಂತಿದೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ದಿಶಾ ಅವರು ಮಾಡರ್ನ್ ಡ್ರಸ್ ನಲ್ಲಿ ಸಖತ್ ಹಾಟ್ ಆಗಿ ಕಂಡಿದ್ದಾರೆ. ಓಪನ್ ನೆಕ್ ಮತ್ತು ಬೆಲ್ಲಿ ಕ್ರಾಪ್ ಸ್ಟೈಲ್ ವಿನ್ಯಾಸದ ಈ ಬಟ್ಟೆಯಲ್ಲಿ ನಟಿ ದಿಶಾ ಅವರು ಸ್ಟನಿಂಗ್ ಲುಕ್ ನಿಂದ ಮಿಂಚಿದ್ದಾರೆ ಎನ್ನಬಹುದು. ಕ್ಲಾಸಿಕ್ ಮೇಕಪ್ ಹಾಗೂ ಕರ್ಲಿ ಫ್ರಿ ಹೇರ್ ಸ್ಟೈಲ್ ನ ಅವರ ಈ ಲುಕ್ ಪಡ್ಡೆ ಹುಡುಗರ ನಿದ್ದೆ ಕದಿಯುವಂತಿದೆ.

ನಟಿ ದಿಶಾ ಅವರ ಇನ್ನೊಂದು ಫೋಟೊದಲ್ಲಿ ವಿದೇಶಿ ಪ್ರವಾಸದ ವೇಳೆ ಎಂಜಾಯ್ ಮಾಡಿದ್ದನ್ನು ಕಾಣಬಹುದು. ಪರ್ಲ್ ವೈಟ್ ಮಿನಿ ವೆಸ್ಟರ್ನ್ ಡ್ರೆಸ್ ನಲ್ಲಿ ತುಂಬಾ ಪ್ರಿಟಿಯಾಗಿ ನಟಿ ದಿಶಾ ಅವರು ಕಂಡಿದ್ದಾರೆ. ಡ್ರೆಸ್ ಗೆ ಮ್ಯಾಚ್ ಆಗುವ ಹೇರ್ ಸ್ಟೈಲ್ ಕೂಡ ಅವರು ಮಾಡಿದ್ದು ಕ್ಯಾಡಿಂಡ್ ಫೋಟೊದಲ್ಲಿ ನಟಿ ದಿಶಾ ಬಹಳಷ್ಟು ಸುಂದರವಾಗಿ ಕಂಡಿದ್ದಾರೆ.