ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Ramola: ರಕ್ಷಕ್‌ ಬುಲೆಟ್‌ ಗೆಳತಿ ರಮೋಲಾಗೆ ಸಂಕಷ್ಟ; ಫಿಲ್ಮ್‌ ಚೇಂಬರ್‌ಗೆ ನಿರ್ಮಾಪಕನಿಂದ ದೂರು

ಕಿರುತೆರೆಯಲ್ಲಿ ಮಿಂಚಿ ಈಗ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ನಟಿ ರಮೋಲಾ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಕನ್ನಡತಿ ಧಾರಾವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಫೇಮಸ್​ ಆಗಿದ್ದ ನಟಿ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ರಿಚ್ಚಿ ಸಿನಿಮಾದ ನಟ ರಿಚ್ಚಿ ಫಿಲಂ ಚೇಂಬರ್ ಗೆ ದೂರು‌ ನೀಡಿದ್ದಾರೆ.

ರಮೋಲಾಗೆ ಸಂಕಷ್ಟ; ಫಿಲ್ಮ್‌ ಚೇಂಬರ್‌ಗೆ ನಿರ್ಮಾಪಕನಿಂದ ದೂರು

Vishakha Bhat Vishakha Bhat Aug 22, 2025 6:42 PM

ಬೆಂಗಳೂರು: ಕಿರುತೆರೆಯಲ್ಲಿ ಮಿಂಚಿ ಈಗ ಭರ್ಜರಿ ಬ್ಯಾಚುಲರ್ ರಿಯಾಲಿಟಿ ಶೋನಲ್ಲಿ (Actress Ramola) ಸ್ಪರ್ಧಿಯಾಗಿರುವ ನಟಿ ರಮೋಲಾ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಕನ್ನಡತಿ ಧಾರಾವಾಹಿಯಲ್ಲಿ ಅದ್ಭುತ ನಟನೆಯ ಮೂಲಕ ಫೇಮಸ್​ ಆಗಿದ್ದ ನಟಿ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದೆ. ರಿಚ್ಚಿ ಸಿನಿಮಾದ ನಟ ರಿಚ್ಚಿ ಫಿಲಂ ಚೇಂಬರ್ ಗೆ ದೂರು‌ ನೀಡಿದ್ದಾರೆ. ನಟಿ ರಮೋಲಾ ಅವರು ‘ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ಈ ಬಗ್ಗೆ ಫಿಲ್ಮ್ ಚೇಂಬರ್​​ಗೆ ದೂರು ನೀಡಿದ್ದಾರೆ. ಸಿನಿಮಾದ ಪ್ರಮೋಷನ್​ಗೆ ರಮೋಲಾ ಬರುತ್ತಿಲ್ಲ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.

ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲು ಪ್ರಚಾರದ ಅಗತ್ಯವಿದೆ. ಹಾಗಾಗಿ ಪ್ರಚಾರಕ್ಕೆ ಬಂದು ಸಿನಿಮಾಗೆ ಸಪೋರ್ಟ್‌ ಮಾಡಿ ಎಂದು ಹಲವು ಬಾರಿ ಫೋನ್‌ ಮಾಡಿದ್ದೆವು. ಆದರೆ ರಮೋಲಾ ಯಾವ ರೀತಿಯಲ್ಲೂ ಸ್ಪಂದಿಸಲಿಲ್ಲ ಎಂದು ನಿರ್ದೇಶಕ ಹೇಳಿದ್ದಾರೆ.

ರಿಚ್ಚಿ ಸಿನಿಮಾದಲ್ಲಿ ರಮೋಲಾ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರಮೋಷನ್ಸ್‌ ಬನ್ನಿ ಎಂದರೆ ಬರುತ್ತಿಲ್ಲ ಎಂದು ನಿರ್ಮಾಪಕ ಹೇಮಂತ್‌ ರಿಚ್ಚಿ ಫಿಲ್ಮ್‌ ಚೇಂಬರ್‌ಗೆ ದೂರು ಕೊಟ್ಟಿದ್ದಾರೆ. ದೂರು ದಾಖಲಾದ ಬಳಿಕ ನಟಿ ಈ ಕುರಿತು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಸದ್ಯಕ್ಕೆ ನಟಿ ಮೇಲೆ ದೂರು ದಾಖಲಾಗಿದ್ದು ಮುಂದೇನು ನಡೆಯಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ.

ನಟಿ ರಮೋಲಾ ಅವರು ಮೂಲತಃ ಶಿವಮೊಗ್ಗಾದವರು. ಅವರು ಸೀರಿಯಲ್, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಪ್ರೇಕ್ಷಕರು ಹಾಗೂ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತರು. ಈ ಮೊದಲು ಅವರು ಸಿನಿಮಾ, ಸೀರಿಯಲ್ ಮಾತ್ರವಲ್ಲ, ವೆಬ್ ಸಿರೀಸ್‌ನಲ್ಲಿ ಸಹ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡತಿ ಧಾರಾವಾಹಿಯ ಸಾನಿಯಾ ಎಂಬ ಪಾತ್ರದಲ್ಲಿ ನಟಿಸಿದ್ದ ಅವರಿಗೆ ಅಪಾರ ಅಭಿಮಾನಿ ಬಳಗವಿದೆ.

ರಮೋಲಾ ಭರ್ಜರಿ ಬ್ಯಾಚುಲರ್ಸ್‌ ಶೋ ಮೂಲಕ ಕರ್ನಾಟಕದ ಮನೆಮಾತಾಗಿದ್ದರು. ಫೈನಲ್‌ವರೆಗೆ ತಲುಪಿ, ರನ್ನರ್‌ ಅಪ್‌ ಕೂಡ ಆಗಿದ್ದರು. ಇನ್ನು ರಮೋಲಾ ಅವರ ಬೆಲ್ಲಿ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿಗಳವೇ ಇದೆ. ಈ ಹಿನ್ನೆಲೆ ಅವರಿಗೆ ಅವಕಾಶಗಳು ಸಿಗುತ್ತಿವೆ.