ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ವೈಟ್ ಮಿನಿ ಡ್ರೆಸ್‌ನಲ್ಲಿ ಬೋಲ್ಡ್ ಫೋಟೊಶೂಟ್ ಮಾಡಿಸಿದ ದಿಶಾ ಪಠಾನಿ

ಬಾಲಿವುಡ್‌ನ ಗ್ಲಾಮರಸ್ ನಟಿ ದಿಶಾ ಪಠಾನಿ ತಮ್ಮ ಹೊಸ ಫೋಟೊಶೂಟ್ ಮೂಲಕ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ನಟಿ ಇನ್‌ಸ್ಟಾಗ್ರಾಮ್‌ನಲ್ಲಿ ವೈಟ್ ಮಿನಿ ಡ್ರೆಸ್‌ನ ಫೋಟೊಗಳನ್ನು ಶೇರ್ ಮಾಡಿದ್ದು ಇವರ ಬೋಲ್ಡ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ‌.

Disha Patani
1/5

ಸೋಶಿಯಲ್ ಮೀಡಿಯಾದಲ್ಲಿ ಕ್ರೇಜ್ ಕ್ರಿಯೇಟ್ ಮಾಡುವುದರಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುವ ದಿಶಾ ಪಠಾನಿ ಈ ಬಾರಿಯೂ ಬೋಲ್ಡ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ವೈಟ್ ಮಿನಿ ಡ್ರೆಸ್ ಧರಿಸಿರುವ ದಿಶಾ ಲುಕ್‌ಗೆ ಫ್ಯಾನ್ಸ್​ ಕ್ಲೀನ್ ಬೋಲ್ಡ್ ಆಗಿದ್ದಾರೆ.

2/5

ಮಿನಿ ಡ್ರೆಸ್‌ ಬಹಳ ಟ್ರೆಂಡಿ ಲುಕ್‌ನಲ್ಲಿದ್ದು ಡೀಪ್ ನೆಕ್ಲೈನ್‌ ಅನ್ನು ಗೋಲ್ಡ್ ರಿಂಗ್‌ ಮೂಲಕ ಅಲಂಕರಿಸಲಾಗಿತ್ತು. ಡ್ರೆಸ್‌ಗೆ ತಕ್ಕನಾದ ಇಯರಿಂಗ್ ಹಾಗೂ ಸಿಂಪಲ್ ಮೇಕಪ್ ಮೂಲಕ ಫೋಟೊಶೂಟ್ ಮಾಡಿಸಿಕೊಂಡಿದ್ದು ಸೆಕ್ಸಿ ಪೋಸ್ ನೀಡಿದ್ದಾರೆ.

3/5

ಈ ಫೋಟೊಗಳು ವೈರಲ್ ಆದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಲೈಕ್ಸ್ ಹಾಗೂ ಕಮೆಂಟ್ ಗಿಟ್ಟಿಸಿಕೊಂಡಿದೆ. ಫೋಟೊ ನೋಡಿದ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿಯೊಬ್ಬರು ಬಾಲಿವುಡ್‌ನ ಸೆಕ್ಸಿ ಬೆಡಗಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

4/5

ನಟನೆಯ ಹೊರತಾಗಿ ದಿಶಾ ಪಠಾನಿ ಫ್ಯಾಶನ್ ಸೆನ್ಸ್‌ಗೂ ಫೇಮಸ್ ಆಗಿದ್ದಾರೆ. ಅದ್ಬುತ ಫ್ಯಾಷನ್ ಮೂಲಕ ಅಭಿಮಾನಿಗಳನ್ನು ಸೆಳೆಯುವ ನಟಿ ಇದೀಗ ಸೆಕ್ಸಿ ಲುಕ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.

5/5

2016ರಲ್ಲಿ ʼಎಂಎಸ್ ಧೋನಿ: ಅನ್‌ಟೋಲ್ಡ್‌ ಲವ್ ಸ್ಟೋರಿʼ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ದಿಶಾ ಪಠಾನಿ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶೀಘ್ರದಲ್ಲೇ ನಿರ್ದೇಶಕ ವಿಶಾಲ್ ಭರದ್ವಾಜ್ ಅವರ ಮುಂದಿನ ಚಿತ್ರದಲ್ಲಿ ಶಾಹಿದ್ ಕಪೂರ್‌ ಜತೆಗೆ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ನಾನಾ ಪಾಟೇಕರ್‌ ಮತ್ತು ರಣದೀಪ್ ಹುಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.