ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ವಿರಾಟ್ ಕೊಹ್ಲಿ, ಅನುಷ್ಕಾ ಲಂಡನ್‌ನಲ್ಲಿ ವಾಸಿಸಲು ಕಾರಣ ಬಹಿರಂಗ

ಸೆಲೆಬ್ರಿಟಿ ಜೋಡಿಗಳಲ್ಲಿ ಒಂದಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2024ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದ ಮೂಲಕ ಅವರ ಅಭಿಮಾನಿಗಳು ಸಾಕಷ್ಟು ಬೇಸರವನ್ನೂ ಹೊರಹಾಕಿದ್ದರು. ಆದರೆ ಈಗ ಅವರು ಲಂಡನ್‌ಗೆ ಯಾಕೆ ತೆರಳಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ಪತಿ, ಖ್ಯಾತ ವೈದ್ಯರೂ ಆಗಿರುವ ಡಾ. ಶ್ರೀರಾಮ್ ನೆನೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

1/7

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ 2024ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ವೈವಾಹಿಕ ಜೀವನಕ್ಕೆ ಪ್ರವೇಶ ಪಡೆದ ಈ ಸೆಲೆಬ್ರಿಟಿ ಜೋಡಿ ಮಗು ಹುಟ್ಟಿದ ಬಳಿಕ ಲಂಡನ್‌ಗೆ ತೆರಳಿ ಅಲ್ಲಿಯೇ ವಾಸ ಮಾಡುವುದಾಗಿ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು.

2/7

ಪ್ರಸ್ತುತ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಗ್ಲಾಮರ್‌ ಜೀವನದಿಂದ ದೂರವಾಗಿ ಶಾಂತ ಜೀವನವನ್ನು ನಡೆಸುತ್ತಿದ್ದಾರೆ. 2024ರಲ್ಲಿ ಭಾರತ ತ್ಯಜಿಸಿರುವ ಇವರು ಕೆಲಸದ ನಿಮಿತ್ತ ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಅನುಷ್ಕಾ ಮತ್ತು ವಿರಾಟ್ ಲಂಡನ್‌ಗೆ ತೆರಳುವ ನಿರ್ಧಾರದ ಹಿಂದಿನ ನಿಜವಾದ ಕಾರಣ ಏನು ಎನ್ನುವ ಕುತೂಹಲ ಸಾಕಷ್ಟು ಮಂದಿಯಲ್ಲಿ ಇದ್ದು, ಅದು ಈಗ ಬಹಿರಂಗವಾಗಿದೆ.

3/7

ಕೆಲವೇ ತಿಂಗಳುಗಳ ಹಿಂದೆ ಮಾಧುರಿ ದೀಕ್ಷಿತ್ ಅವರ ಪತಿ, ಆರೋಗ್ಯ ಮತ್ತು ಸ್ವಾಸ್ಥ್ಯ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಡಾ. ಶ್ರೀರಾಮ್ ನೇನೆ ಅವರು ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರನ್ನು ತಮ್ಮ ಪಾಡ್‌ಕ್ಯಾಸ್ಟ್‌ನಲ್ಲಿ ಪರಿಚಯಿಸಿದರು. ಇವರಿಬ್ಬರೂ ವಿರಾಟ್ ಕೊಹ್ಲಿ ಮೇಲಿನ ತಮ್ಮ ಅಭಿಮಾನವನ್ನು ಚರ್ಚೆ ನಡೆಸಿದರು.

4/7

ನೇನೆ ಮತ್ತು ಯುಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಸಂವಾದದಲ್ಲಿ ಡಾ. ನೇನೆ ಅವರು ಅನುಷ್ಕಾ ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ನೆನಪಿಸಿಕೊಂಡರು. ಒಂದು ದಿನ ಅನುಷ್ಕಾ ಅವರೊಂದಿಗೆ ಸಂಭಾಷಣೆ ನಡೆಸಿದ್ದೇವೆ. ಅದು ತುಂಬಾ ಆಸಕ್ತಿದಾಯಕವಾಗಿತ್ತು. ಅವರು ತಮ್ಮ ಯಶಸ್ಸನ್ನು ಇಲ್ಲಿ ಆನಂದಿಸಲು ಸಾಧ್ಯವಾಗದ ಕಾರಣ ಲಂಡನ್‌ಗೆ ತೆರಳುವ ಬಗ್ಗೆ ಯೋಚಿಸುತ್ತಿದ್ದರು ಎಂದರು ನೇನೆ.

5/7

ಅವರು ಸಾಧಿಸಿರುವುದನ್ನು ನಾವು ಪ್ರಶಂಸಿಸುತ್ತೇವೆ. ಅವರು ಮಾಡುವ ಪ್ರತಿಯೊಂದು ಕೆಲಸವು ಎಲ್ಲರ ಗಮನ ಸೆಳೆಯುತ್ತದೆ. ಇದರಿಂದ ಸೆಲೆಬ್ರಿಟಿಗಳು ಬಹುತೇಕ ಒಂಟಿಯಾಗುತ್ತಾರೆ ಎಂದು ಈ ವೇಳೆ ನೇನೆ ಅವರು ಹೇಳಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸುತ್ತಾ ಅನುಷ್ಕಾ ಮತ್ತು ವಿರಾಟ್ ಕೂಡ ತಮ್ಮ ಮಕ್ಕಳನ್ನು ಎಲ್ಲಾ ಗ್ಲಾಮರ್‌ನಿಂದ ದೂರವಿಡಲು ಬಯಸುತ್ತಾರೆ. ಅದಕ್ಕಾಗಿ ಅವರು ಲಂಡನ್‌ಗೆ ತೆರಳಿದರು ಎಂದು ಬಹಿರಂಗಪಡಿಸಿದರು.

6/7

ನಾನು ಎಲ್ಲರೊಂದಿಗೆ ಹೊಂದಿಕೊಳ್ಳುತ್ತೇನೆ. ಆದರೆ ಎಲ್ಲರಿಗೂ ಅದು ಸವಾಲಿನದ್ದಾಗಿರುತ್ತದೆ. ಯಾವಾಗಲೂ ಸೆಲ್ಫಿ ಕ್ಷಣ ಇರುತ್ತದೆ. ಇದು ಕೆಟ್ಟದಲ್ಲ. ಆದರೆ ಭೋಜನ ಮಾಡುವಾಗ ಎಲ್ಲಿಗಾದರೂ ಹೋಗಬೇಕಾದರೆ ನಾವು ಸಾಕಷ್ಟು ಸಭ್ಯರಾಗಿರಬೇಕು. ನನ್ನ ಹೆಂಡತಿಗೆ ಅದು ಸಮಸ್ಯೆಯಾಗುತ್ತದೆ. ಅನುಷ್ಕಾ ಮತ್ತು ವಿರಾಟ್ ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಬೆಳೆಸಲು ಬಯಸುತ್ತಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

7/7

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2013ರಲ್ಲಿ ದೂರದರ್ಶನ ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ ಭೇಟಿಯಾದರು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದರು. 2017ರಲ್ಲಿ ಇಟಲಿಯಲ್ಲಿ ವಿವಾಹವಾದ ದಂಪತಿಗೆ 2021ರಲ್ಲಿ ಹೆಣ್ಣು ಮಗು ಜನಿಸಿತ್ತು. ಅವಳಿಗೆ ವಾಮಿಕಾ ಎಂದು ಹೆಸರಿಡಲಾಯಿತು. ಬಳಿಕ 2024ರಲ್ಲಿ ಅವರು ಗಂಡು ಮಗುವನ್ನು ಸ್ವಾಗತಿಸಿದ್ದು, ಅದಕ್ಕೆ ಅಕೈ ಎಂದು ಹೆಸರಿಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author