ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dog Designewears: ನಿಮ್ಮನೆ ಮುದ್ದು ನಾಯಿಮರಿಗಳಿಗೂ ಬಂತು ಕಲರ್‌ಫುಲ್ ಡಿಸೈನರ್‌ವೇರ್ಸ್

Dog Designewears: ಮನೆಯ ಮುದ್ದು ಶ್ವಾನಗಳು ಕೂಡ ಗ್ರ್ಯಾಂಡ್ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇವಕ್ಕೆ ಪೂರಕ ಎಂಬಂತೆ, ನಾನಾ ಪೆಟ್ ಶಾಪ್‌ಗಳು ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಅವುಗಳಲ್ಲಿ ಯಾವ್ಯಾವ ಬಗೆಯವು ಬೇಡಿಕೆ ಪಡೆದುಕೊಂಡಿವೆ. ಈ ಕುರಿತಂತೆ ಡಾಗ್ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್
1/5

ಗ್ರ್ಯಾಂಡ್ ಸಮಾರಂಭಗಳಲ್ಲಿ ಮನೆಯ ಮುದ್ದಿನ ನಾಯಿ ಮರಿಗಳು ಕೂಡ ಡಿಸೈನರ್‌ವೇರ್‌ಗಳಲ್ಲಿ ಮಿನುಗುತ್ತಿವೆ. ಮನುಷ್ಯರಂತೆ ಉಡುಪನ್ನು ಧರಿಸಿ ಅಲಂಕೃತಗೊಂಡಿವೆ.

2/5

ಮುದ್ದು ಶ್ವಾನಗಳಿಗೆ ವೈವಿಧ್ಯಮಯ ಡಿಸೈನರ್ಸ್

ಪೆಟ್ ಆನ್‌ಲೈನ್ ಹಾಗೂ ಆಫ್‌ಲೈನ್ ಶಾಪ್‌ಗಳು ಡಾಗ್ಗಿಗಳ ನಾನಾ ಬಗೆಯ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪುಟ್ಟ ನಾಯಿಮರಿಯಿಂದಿಡಿದು ದೊಡ್ಡ ಗೋಲ್ಡನ್ ರಿಟ್ರಿವರ್‌ನಂತಹ ನಾಯಿ ಕೂಡ ಧರಿಸಬಹುದಾದ ಡಿಸೈನರ್‌ವೇರ್‌ಗಳನ್ನು ಲಾಂಚ್ ಮಾಡಿವೆ. ಆಯಾ ಜಾತಿಯ ಶ್ವಾನಗಳಿಗೆ ಅನುಗುಣವಾಗಿ ಇವುಗಳನ್ನು ಆಯ್ಕೆ ಮಾಡಬಹುದು ಎನ್ನುತ್ತಾರೆ ಡಾಗ್ ಸ್ಟೈಲಿಸ್ಟ್ ನಿಯತಿ.

3/5

ಚಾಲ್ತಿಯಲ್ಲಿರುವ ಡಾಗ್ ಎಥ್ನಿಕ್‌ವೇರ್ಸ್

ಸಿಲ್ಕ್, ಕ್ರೆಪ್, ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೆ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್‌ನಂತೆ ಕಾಣುವ ವೇಸ್‌ಕೋಟ್ ಶೈಲಿಯಂತವು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಪೆಟ್ ಶಾಪ್‌ವೊಂದರ ಮಾಲೀಕರಾದ ರಾಘವ್.

4/5

ಶ್ವಾನದ ಆಕಾರಕ್ಕೆ ತಕ್ಕಂತೆ ಉಡುಪು

ಉದ್ಯಾನನಗರಿಯಲ್ಲಿ ಸಾಕಷ್ಟು ಬೋಟಿಕ್‌ಗಳು ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲಿದು ಡಿಸೈನ್ ಮಾಡಿಕೊಡುತ್ತಿವೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್ ಮಾಡಿ, ರೆಡಿ ಮಾಡಿಕೊಡುತ್ತವೆ.

5/5

ಡಾಗ್ ಡಿಸೈನರ್‌ವೇರ್ಸ್ ಟಿಪ್ಸ್

  • ಆನ್‌ಲೈನ್‌ನಲ್ಲಿ ಕೆಲವೊಮ್ಮೆ ಆಫರ್‌ಗಳಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
  • ನಿಮ್ಮ ಶ್ವಾನದ ಸೈಝ್‌ಗೆ ತಕ್ಕಂತೆ ಖರೀದಿಸಿ.
  • ದೊಗಲೆಯಾದಲ್ಲಿ ಚೆನ್ನಾಗಿ ಕಾಣಿಸುವುದಿಲ್ಲ.
  • ಆದಷ್ಟೂ ಚುಚ್ಚದಂತವನ್ನು ಆಯ್ಕೆ ಮಾಡಿ. ಗ್ರ್ಯಾಂಡ್ ಆಗಿರುವಂತವು ಚೆನ್ನಾಗಿ ಕಾಣಿಸುತ್ತವೆ.

ಶೀಲಾ ಸಿ ಶೆಟ್ಟಿ

View all posts by this author