ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dog Fashion 2026: ನಾಯಿಮರಿಗಳಿಗೂ ಬಂತು ವೆಡ್ಡಿಂಗ್ ಫ್ಯಾಷನ್‌ವೇರ್ಸ್!

ಇದೀಗ ಮುದ್ದು ಶ್ವಾನಗಳು ಕೂಡ ಮನೆಯ ಮದುವೆ ಸಮಾರಂಭಗಳಲ್ಲಿ ಸಿಂಗಾರಗೊಳ್ಳುತ್ತಿವೆ. ಇದಕ್ಕೆ ಪೂರಕ ಎಂಬಂತೆ, ನಾನಾ ಡಿಸೈನರ್‌ವೇರ್‌ಗಳು ಬಂದಿವೆ. ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್ ಎಂದೆನಿಸುವ ವೇಸ್ಟ್‌ಕೋಟ್ ಶೈಲಿಯಂತವು ಬಂದಿವೆ.

ಚಿತ್ರಕೃಪೆ: ಜುಜು ಪೇಟ್‌ವೇರ್ ಇನ್ಸ್ಟಾ ಪೇಜ್
1/5

ಫ್ಯಾಮಿಲಿಯ ಮದುವೆ ಸಮಾರಂಭಗಳಲ್ಲಿ ಇತ್ತೀಚೆಗೆ ಮುದ್ದಿನ ನಾಯಿ ಮರಿಗಳು ಕೂಡ ಮಿನುಗುತ್ತಿವೆ. ಹೌದು, ಕಳೆದ ವರ್ಷ ಅಂಬಾನಿ ಫ್ಯಾಮಿಲಿಯ ಮುದ್ದು ಶ್ವಾನಗಳು ನಾನಾ ಎಥ್ನಿಕ್‌ವೇರ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಸಾಮಾನ್ಯ ಜನರು ಕೂಡ ತಂತಮ್ಮ ನಾಯಿಮರಿಗಳನ್ನು ಮದುವೆ ಸಮಾರಂಭಗಳಲ್ಲಿ ಸಿಂಗರಿಸುತ್ತಿದ್ದಾರೆ.

2/5

ಟ್ರೆಂಡಿಯಾಗಿರುವ ಪೆಟ್ ಡಿಸೈನರ್‌ವೇರ್ಸ್

ಮದುವೆ ಸಮಾರಂಭಗಳಲ್ಲಿ ನಾಯಿ ಮರಿಗಳಿಗೆ ಹಾಕಿದ ಮುದ್ದಾಗಿ ಕಾಣಿಸುವಂತಹ ಗ್ರ್ಯಾಂಡ್ ಎಥ್ನಿಕ್‌ವೇರ್‌ಗಳಲ್ಲಿ ಇದೀಗ ಸಾಫ್ಟ್ ಬ್ರೋಕೆಡ್ ಕುರ್ತಾ, ಲೆಹೆರಿಯಾ ಕುರ್ತಾ, ಪ್ರಿಂಟೆಡ್ ಕುರ್ತಾ, ಸಾಫ್ಟ್ ಸಿಲ್ಕ್ ಸ್ಕಾಟರ್ಸ್, ಶೆರ್ವಾನಿ, ಹೆರಿಟೇಜ್ ಲುಕ್ ನೀಡುವ ಟ್ರೆಡಿಷನಲ್‌ವೇರ್ಸ್, ಕಲರ್‌ಫುಲ್ ಬಾರ್ಡರ್ ಫ್ರಾಕ್ಸ್, ಕ್ರಾಸ್ ಬಾಡಿ ಚೋಲಿ ವಿತ್ ಲೆಹೆಂಗಾ, ಬಾಂದನಿ ಡ್ರೆಸ್, ಬೋ ಟೈ, ಸಿಲ್ಕ್ ಶರ್ಟ್, ಜಾರ್ಜೆಟ್ ಶರ್ಟ್, ಫ್ರಾಕ್ ಸೇರಿದಂತೆ ಸಾಕಷ್ಟು ಬಗೆಯವು ಬ್ರೀಡ್‌ಗೆ ಮ್ಯಾಚ್ ಆಗುವಂತಹ ಸ್ಟೈಲಿಶ್ ಡಿಸೈನ್‌ನಲ್ಲಿ ಬಂದಿವೆ ಎನ್ನುತ್ತಾರೆ ಡಿಸೈನರ್.

3/5

ಶ್ವಾನಗಳಿಗೆ ತಕ್ಕಂತೆ ಡಿಸೈನರ್‌ವೇರ್ಸ್

ಸ್ಯಾಟಿನ್, ವೆಲ್ವೆಟ್, ಕಾಟನ್, ಕಾಟನ್ ಸಿಲ್ಕ್ ಹೀಗೆ ನಾನಾ ಫ್ಯಾಬ್ರಿಕ್‌ನ ಫ್ರಾಕ್ ಶೈಲಿಯ ಡ್ರೆಸ್‌ಗಳು, ಹೆಣ್ಣು ನಾಯಿಮರಿಗಳಿಗೆ ನಾನಾ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದರೇ, ಗಂಡು ನಾಯಿಮರಿಗಳಿಗೆ ನೋಡಲು ಕೋಟ್ ಎಂದೆನಿಸುವ ವೇಸ್ಟ್‌ಕೋಟ್ ಶೈಲಿಯಂತವು ಬಂದಿವೆ ಎನ್ನುತ್ತಾರೆ ಪೆಟ್ ಡಿಸೈನರ್ ಅನಿತಾ.

4/5

ಕಸ್ಟಮೈಸ್ಡ್ ಡಾಗ್ ಎಥ್ನಿಕ್‌ವೇರ್ಸ್ ಲಭ್ಯ ‌

ಮುದ್ದು ನಾಯಿಮರಿಗಳಿಗೂ ಎಥ್ನಿಕ್‌ವೇರ್‌ಗಳನ್ನು ಹೊಲೆದು ಡಿಸೈನ್ ಮಾಡಿಕೊಡುವ ಡಿಸೈನರ್ಗಳಿದ್ದಾರೆ. ಆಯಾ ಕುಟುಂಬದವರ ಸಮಾರಂಭಗಳಿಗೆ ಅನುಗುಣವಾಗಿ ಡಿಸೈನ್ ಮಾಡಿ, ರೆಡಿ ಮಾಡಿಕೊಡುತ್ತಾರೆ.

5/5

ಆನ್‌ಲೈನ್‌ನಲ್ಲಿ ನಾನಾ ಬಗೆಯ ಡಿಸೈನರ್‌ವೇರ್ಸ್

ಇನ್ನು, ಆನ್‌ಲೈನ್‌ಗಳಲ್ಲಂತೂ ಲೆಕ್ಕವಿಲ್ಲದಷ್ಟೂ ಬಗೆಯ ಡಾಗ್ ಡಿಸೈನರ್‌ವೇರ್ಸ್ ದೊರೆಯುತ್ತಿವೆ ಎನ್ನುತ್ತಾರೆ ಡಾಗ್ ಡಿಸೈನರ್ಸ್.

ಶೀಲಾ ಸಿ ಶೆಟ್ಟಿ

View all posts by this author