ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dog Winter Fashion 2026: ವಿಂಟರ್ ಸೀಸನ್‌ಗೆ ಲಗ್ಗೆ ಇಟ್ಟ ನಯಾ ಡಾಗ್ ವೇರ್‌ಗಳಿವು!

ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ನಿಮ್ಮ ಮುದ್ದು ನಾಯಿಮರಿಗಳನ್ನು ಬೆಚ್ಚಗಿಡುವ ಸ್ಟೈಲಿಶ್ ವಿಂಟರ್‌ವೇರ್‌ಗಳು ಲಗ್ಗೆ ಇಟ್ಟಿವೆ. ಅವು ಯಾವುವು? ಆಯ್ಕೆ ಹೇಗೆ? ಈ ಕುರಿತಂತೆ ಪೆಟ್ ಎಕ್ಸ್‌ಪರ್ಟ್ ಶ್ರಾಫ್ ಇಲ್ಲಿ ವಿವರಿಸಿದ್ದಾರೆ. ಈ ಕುರಿತ ಲೇಖನ ಇಲ್ಲಿದೆ.

ಡಾಗ್ ವೇರ್‌ (ಚಿತ್ರಕೃಪೆ: ಪಿಕ್ಸೆಲ್)
1/5

ಈ ಬಾರಿಯ ವಿಂಟರ್ ಸೀಸನ್‌ನಲ್ಲಿ ನಿಮ್ಮ ಮನೆಯ ಮುದ್ದಿನ ನಾಯಿಮರಿಗಳನ್ನು ಸಿಂಗರಿಸಲು ಸ್ಟೈಲಿಶ್ ಆಗಿರುವಂತಹ ವಿಂಟರ್‌ವೇರ್‌ಗಳು ಲಗ್ಗೆ ಇಟ್ಟಿವೆ. ಹೊಸ ಬಗೆಯ ವಿನ್ಯಾಸದಲ್ಲಿ ಆಗಮಿಸಿವೆ.

2/5

ಟ್ರೆಂಡಿಯಾಗಿರುವ ಸ್ಟೈಲಿಶ್ ಡಾಗ್‌ವೇರ್‌ಗಳಿವು

ಚಳಿಗಾಲದಲ್ಲಿ ಶ್ವಾನಗಳ ದೇಹವನ್ನು ಬೆಚ್ಚಗಿಡುವ ಕಲರ್‌ಫುಲ್ ಸ್ಲಿವ್ಲೆಸ್ ಪಫರ್ ಜಾಕೆಟ್‌ಗಳು ಅದರಲ್ಲೂ ರಿವರ್ಸಿಬಲ್ ಆಗಿ ಧರಿಸಬಹುದಂತವು ಬಂದಿವೆ. ಇವು ನೋಡಲು ಸ್ಟೈಲಿಶ್ ಆಗಿ ನಾಯಿಗಳನ್ನು ಬಿಂಬಿಸುತ್ತವೆ.

3/5

ಡಾಗ್‌ಗಳಿಗೂ ಸ್ವೆಟ್ ಶರ್ಟ್

ಹೌದು, ನಾಯಿಮರಿಗಳಿಗೂ ಹಾಕುವಂತಹ ನಾನಾ ಬಗೆಯ ಡಿಸೈನ್‌ನ ಫ್ಯಾಬ್ರಿಕ್‌ನ ಪೆಟ್ ಸ್ವೆಟ್ ಶರ್ಟ್‌ಗಳು ಈ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ.

ಡಾಗ್ ಉಲ್ಲನ್‌ವೇರ್‌ಗಳು

ಇದೀಗ ನಾಯಿ ಮರಿಗಳಿಗೂ ನಿಟ್ಟೆಡ್ ಅಂದರೇ ಉಲ್ಲನ್‌ವೇರ್‌ಗಳು ಬಂದಿವೆ. ಅಷ್ಟೇಕೆ! ಆಯಾ ಶ್ವಾನದ ಸೈಝಿಗೆ ಕಸ್ಟಮೈಸ್ ಮಾಡಿಕೊಡುವಂತಹ ಪೆಟ್ ವೆಬ್‌ಸೈಟ್‌ಗಳು ಕಾರ್ಯನಿರತವಾಗಿವೆ. ಅವುಗಳಲ್ಲಿ, ಕ್ವಿಲ್ಟೆಡ್ ಡಾಗ್ ಜಾಕೆಟ್, ನಿಟ್ ಡಾಗ್ ಸ್ವೆಟರ್ಸ್, ಡಾಗ್ ಸ್ವೆಟರ್, ಡಾಗ್ ಉಲ್ಲನ್ ಹೂಡಿಗಳು ಬೇಡಿಕೆ ಪಡೆದುಕೊಂಡಿವೆ.

4/5

ಡಾಗ್‌ಗಳಿಗೂ ಬಂತು ಕೋಟ್ಸ್

ಪೆಟ್ ಶಾಪ್‌ಗಳಲ್ಲಿ ಇದೀಗ ಶ್ವಾನಗಳ ಬಣ್ಣಬಣ್ಣದ ಕೋಟ್‌ಗಳು ಎಂಟ್ರಿ ನೀಡಿವೆ. ಸಾಮಾನ್ಯ ಕ್ಲಾತ್ ಫ್ಯಾಬ್ರಿಕ್‌ನಿಂದಿಡಿದು ಕೋಟ್, ಅಲ್ಟ್ರಾ ವೆದರ್ ಪ್ರೂಫ್ ಕೋಟ್ ಹೆಸರಲ್ಲಿ ದೊರೆಯುತ್ತಿವೆ.

5/5

ಡಾಗ್ ವಿಂಟರ್‌ವೇರ್ಸ್ ಆಯ್ಕೆ ಮಾಡುವವರಿಗೆ ಇಲ್ಲಿವೆ ಟಿಪ್ಸ್

  • ಟ್ರೆಂಡಿಯಾಗಿರುವ ಡಿಸೈನ್‌ನದ್ದನ್ನು ಖರೀದಿಸಿ.
  • ಶ್ವಾನದ ಸರಿಯಾದ ಸೈಝ್‌ನದ್ದನ್ನು ಆಯ್ಕೆ ಮಾಡಿ.
  • ಇವುಗಳನ್ನು ನಿರ್ವಹಣೆ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
  • ನಾಯಿಯ ಜಾತಿ ಹಾಗೂ ಆಕಾರಕ್ಕೆ ತಕ್ಕಂತೆ ವಿಂಟರ್‌ವೇರ್ಸ್ ಆಯ್ಕೆ ಮಾಡುವುದು ಉತ್ತಮ.
  • ಮುಂದಿನ ವಿಂಟರ್ ಸೀಸನ್‌ಗೆ ಮರುಬಳಕೆ ಮಾಡುವಂತದ್ದನ್ನು ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author