ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dupatta Fashion 2025: ಹುಡುಗಿಯರ ಆಕರ್ಷಕ ಲುಕ್‌ಗಾಗಿ ಶೀರ್ ದುಪಟ್ಟಾ ಫ್ಯಾಷನ್

ಹುಡುಗಿಯರ ಆಕರ್ಷಕ ಲುಕ್‌ಗಾಗಿ ಬಗೆಬಗೆಯ ಡಿಸೈನರ್ ಶೀರ್ ದುಪಟ್ಟಾಗಳು ಎಥ್ನಿಕ್ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಡಿಸೈನರ್‌ವೇರ್‌ಗೆ ಸಾಥ್ ನೀಡುತ್ತಿವೆ. ಪಾರದರ್ಶಕವಾಗಿರುವ ಈ ದುಪಟ್ಟಾಗಳ ಫ್ಯಾಬ್ರಿಕ್ ತೀರಾ ಮೃದುವಾಗಿರುತ್ತದೆ. ಇವುಗಳ ಮೇಲೆ ಕುಂದನ್, ಕ್ರಿಸ್ಟಲ್ ಹಾಗೂ ನಕ್ಷತ್ರದಂತೆ ಮಿನುಗುವ ಹರಳುಗಳನ್ನು ಅಂಟಿಸಲಾಗಿರುತ್ತದೆ.

ಚಿತ್ರಕೃಪೆ: ಪಿಕ್ಸೆಲ್
1/5

ಶೀರ್ ದುಪಟ್ಟಾ

ಹುಡುಗಿಯರ ಆಕರ್ಷಕ ಲುಕ್‌ಗಾಗಿ ಮನಮೋಹಕ ಡಿಸೈನರ್ ಶೀರ್ ದುಪಟ್ಟಾಗಳು ಎಂಟ್ರಿ ನೀಡಿವೆ.

2/5

ಬಗೆಬಗೆಯ ಡಿಸೈನರ್ ಶೀರ್ ದುಪಟ್ಟಾ

ಪಾರದರ್ಶಕವಾಗಿರುವ ಈ ದುಪಟ್ಟಾಗಳ ಫ್ಯಾಬ್ರಿಕ್ ತೀರಾ ಮೃದುವಾಗಿರುತ್ತದೆ. ಇವುಗಳ ಮೇಲೆ ಕುಂದನ್, ಕ್ರಿಸ್ಟಲ್ ಹಾಗೂ ನಕ್ಷತ್ರದಂತೆ ಮಿನುಗುವ ಹರಳುಗಳನ್ನು ಅಂಟಿಸಲಾಗಿರುತ್ತದೆ. ಸಲ್ವಾರ್ ಕಮೀಝ್, ಲೆಹೆಂಗಾ ಹಾಗೂ ಗ್ರ್ಯಾಂಡ್ ಔಟ್‌ಫಿಟ್‌ಗಳಿಗೆ ಇವು ಪರ್ಫೆಕ್ಟ್ ಮ್ಯಾಚ್ ಮಾಡಬಹುದು. ನೋಡಲು ಅತ್ಯಾಕರ್ಷಕವಾಗಿ ಕಾಣುವ ಈ ಬಗೆಯ ದುಪಟ್ಟಾಗಳು ಎಥ್ನಿಕ್ ಫ್ಯಾಷನ್‌ನಲ್ಲಿ ಸ್ಥಾನ ಗಿಟ್ಟಿಸಿವೆ ಎನ್ನುತ್ತಾರೆ ಮಾರಾಟಗಾರರು.

3/5

ತೆಳುವಾದ ನೆಟ್ಟೆಡ್ ಫ್ಯಾಬ್ರಿಕ್‌ನಲ್ಲಿ ಶೀರ್ ದುಪಟ್ಟಾ

ಪ್ರಮುಖವಾಗಿ ಶೀರ್‌ನಲ್ಲಿ ಬಳಸುವ ದುಪಟ್ಟಾಗಳು ನೆಟ್ಟೆಡ್‌ನದ್ದಾಗಿರುತ್ತದೆ. ಇನ್ನು ಕೆಲವು ಕ್ರೆಪ್ ಇಲ್ಲವೇ ಜಾರ್ಜೆಟ್ ಪಾರದರ್ಶಕ ಮೆಟೀರಿಯಲ್‌ನದ್ದಾಗಿರುತ್ತದೆ. ಅವುಗಳ ಮೆಟೀರಿಯಲ್ ಆಧಾರದ ಮೇಲೆ ಅವುಗಳ ವಿನ್ಯಾಸ ನಿರ್ಧರಿತವಾಗಿರುತ್ತದೆ. ಕೆಲವೊಂದು ಪಾರದರ್ಶಕವಾಗಿದ್ದರೂ ಫ್ಯಾಬ್ರಿಕ್ ವಿಭಿನ್ನವಾಗಿರುತ್ತದೆ. ಕೆಲವು ಶಿಮ್ಮರಿಂಗ್ ಫ್ಯಾಬ್ರಿಕ್‌ನಲ್ಲೂ ದೊರೆಯುತ್ತವೆ.

4/5

ಫ್ಯಾಷನ್ ರ‍್ಯಾಂಪ್‌ನಲ್ಲಿ ಹಿಟ್ ಆದ ದುಪಟ್ಟಾ

ಅಂದ ಹಾಗೆ, ಡಿಸೈನರ್ ಶೀರ್ ದುಪಟ್ಟಾಗಳು ಮೊದಲು ಹಿಟ್ ಆಗಿದ್ದು ರ‍್ಯಾಂಪ್ ಶೋಗಳಲ್ಲಿ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ. ಕೇವಲ ಬ್ರೈಡಲ್‌ವೇರ್‌ಗೆ ಸೀಮಿತವಾಗಿದ್ದ ಡಿಸೈನರ್ ಪಾರದರ್ಶಕ ದುಪಟ್ಟಾಗಳು ಇಂದು ಸಾಮಾನ್ಯ ಉಡುಪಿನ ಜತೆಗೂ ಕಾಣಿಸತೊಡಗಿವೆ. ನಾರ್ತ್ ಇಂಡಿಯಾದಲ್ಲಿ ಹೆಚ್ಚು ಪ್ರಚಲಿತವಿದ್ದ ಲೆಹೆಂಗಾ ಹಾಗೂ ಗಾಗ್ರ ಸೌತ್‌ನಲ್ಲಿ ಹೆಚ್ಚು ಟ್ರೆಂಡಿಯಾಗತೊಡಗಿದಂತೆ ಶೀರ್ ದುಪಟ್ಟಾಗಳು ಪ್ರಮುಖ ಸ್ಥಾನವನ್ನು ಪಡೆದವು ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ದುಪಟ್ಟಾ ಸ್ಟೈಲಿಂಗ್ ಹೀಗೆ…

  • ಶೀರ್ ದುಪಟ್ಟಾಗಳನ್ನು ಧರಿಸುವ ಮುನ್ನ ಧರಿಸುವ ಡಿಸೈನರ್‌ವೇರ್‌ಗಳಿಗೆ ಮ್ಯಾಚ್ ಆಗುತ್ತವೆಯೇ ಎಂಬುದನ್ನು ಗಮನಿಸಿ.
  • ಉದ್ದವಾಗಿರುವವರು ಆದಷ್ಟೂ ಲಾಂಗ್ ಶೀರ್ ದುಪಟ್ಟಾ ಆರಿಸಿಕೊಳ್ಳಬೇಕು.
  • ಪ್ಲಂಪಿಯಾಗಿರುವವರು ಹಾಗೂ ಕುಳ್ಳಗಿರುವವರು ಚಿಕ್ಕ ಚಿಕ್ಕ ಫ್ಲೋರಲ್ ಹಾಗೂ ಸ್ಟಾರ್ ಡಿಸೈನ್‌ನ ದುಪಟ್ಟಾಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
  • ಶೀರ್ ದುಪಟ್ಟಾ ಧರಿಸುವಾಗ ಉಡುಪಿನ ನೆಕ್‌ಲೈನ್ ಆಗಲವಾಗಿರಬೇಕು.

ಶೀಲಾ ಸಿ ಶೆಟ್ಟಿ

View all posts by this author