ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Eco Friendly Fashion 2025: ಗ್ಲಾಮರಸ್ ವಿನ್ಯಾಸದಲ್ಲಿ ಕಾಲಿಟ್ಟ ಪರಿಸರ ಸ್ನೇಹಿ ಉಡುಪುಗಳು

Eco Friendly Fashion 2025: ಗ್ಲಾಮರಸ್ ವಿನ್ಯಾಸದಲ್ಲಿ ಪರಿಸರ ಸ್ನೇಹಿ ಉಡುಪುಗಳು ಇದೀಗ ಫ್ಯಾಷನ್ ಲೋಕದಲ್ಲಿ ಕಾಲಿಟ್ಟಿವೆ. ಹಂಗಾಮ ಎಬ್ಬಿಸಿವೆ. ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಈ ಜನರೇಷನ್ ಹೈಕಳಿಗೆ ಪ್ರಿಯವಾಗತೊಡಗಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಕೃಪೆ: ಪಿಕ್ಸೆಲ್
1/5

ಪರಿಸರ ಸ್ನೇಹಿ ಉಡುಪು

ಗ್ಲಾಮರಸ್ ಡಿಸೈನ್‌ನಲ್ಲಿ ಇದೀಗ ಪರಿಸರ ಸ್ನೇಹಿ ಉಡುಪುಗಳು ಫ್ಯಾಷನ್ ಲೋಕದಲ್ಲಿ ಕಾಲಿಟ್ಟಿದ್ದು, ಈ ಜನರೇಷನ್ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.

2/5

ಪರಿಸರ ಸ್ನೇಹಿ ಉಡುಪುಗಳಿಗೆ ಗ್ಲಾಮರ್ ಟಚ್

ಮೊದಲೆಲ್ಲ ಸಾದಾ-ಸೀದಾ ಹಾಗೂ ಸಿಂಪಲ್ ವಿನ್ಯಾಸದಲ್ಲಿ ದೊರೆಯುತ್ತಿದ್ದ ಪರಿಸರ ಸ್ನೇಹಿ ಉಡುಪುಗಳು, ಇದೀಗ ಗ್ಲಾಮರ್ ಟಚ್ ಪಡೆದುಕೊಂಡಿವೆ. ಆಯಾ ಸೀಸನ್‌ಗೆ ತಕ್ಕಂತೆ ವೈವಿಧ್ಯಮಯ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಕೇವಲ ಪ್ರಬುದ್ಧ ಫ್ಯಾಷನ್ ಪ್ರಿಯರನ್ನು ಮಾತ್ರವಲ್ಲ, ಟೀನೇಜು-ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ ಎನ್ನುತ್ತಾರೆ ಫ್ಯಾಷನ್ ಐಕಾನ್ ವಿಭಾ.

3/5

ದೇಸಿ ಫ್ಯಾಬ್ರಿಕ್ ಔಟ್‌ಫಿಟ್ಸ್‌ಗೂ ಗ್ಲಾಮರ್ ಟಚ್

ದೇಸಿ ಫ್ಯಾಬ್ರಿಕ್‌ಗಳಲ್ಲೂ ಕೂಡ ಇದೀಗ ಗ್ಲಾಮರಸ್ ಉಡುಪುಗಳು ಬಿಡುಗಡೆಗೊಳ್ಳುತ್ತಿವೆ. ಫ್ಯಾಷನ್ ಲೋಕದಲ್ಲಿ ಈ ಡಿಸೈನ್‌ಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇನ್ನು, ಇಂಟರ್‌ನ್ಯಾಷನಲ್ ಬ್ರಾಂಡ್‌ಗಳು ಕೂಡ ಕಡಿಮೆ ದರದಲ್ಲಿ ಇಂತಹ ಉಡುಪುಗಳಿಗೆ ಕೊಂಚ ಗ್ಲಾಮರ್ ಟಚ್ ನೀಡಿ ಬಿಡುಗಡೆಗೊಳಿಸಿವೆ. ಹಾಗಾಗಿ ಟೀನೇಜ್-ಕಾಲೇಜ್ ಹುಡುಗಿಯರು ಕೂಡ ಇವುಗಳತ್ತ ವಾಲುತ್ತಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟಾ ಸೀಮಾ.

4/5

ಅಲ್ಟ್ರಾ ಮಾಡರ್ನ್ ಹುಡುಗಿಯರ ಚಾಯ್ಸ್

ಖಾದಿ, ಕಾಟನ್, ಲೆನಿನ್‌ನ ಆಫ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಕ್ರಾಪ್ ಟಾಪ್. ಕಟೌಟ್ ಟಾಪ್, ಬಾರ್ಡಟ್ ಟಾಪ್, ಕಟೌಟ್ ಟಾಪ್, ಡ್ರೆಸ್, ಸ್ಟ್ರಾಪ್ ಟಾಪ್, ಟ್ಯಾಂಕ್ ಟಾಪ್ ಹಾಗೂ ನೀ ಲೆಂತ್ ಫ್ರಾಕ್‌ಗಳು ಹೆಚ್ಚು ಪಾಪುಲರ್ ಆಗಿವೆ. ಇನ್ನು ಇವುಗಳಲ್ಲೂ ಕ್ರಾಪ್ ಟಾಪ್ ಹಾಗೂ ಬ್ಯಾಕ್ಲೆಸ್ ಮ್ಯಾಕ್ಸಿ ಸ್ಟೈಲ್ ಸ್ಕರ್ಟ್, ಕೀ ಹೋಲ್ ಲೇಸ್‌ನ ಸಿಂಗಲ್ ಶೋಲ್ಡರ್ ಡ್ರೆಸ್, ಹಾಲ್ಟರ್ ನೆಕ್ ಬ್ಲೌಸ್, ಮಿನಿ, ಮಿಡಿ ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.

5/5

ಪರಿಸರ ಸ್ಬೇಹಿ ಗ್ಲಾಮರಸ್ ಔ‌ಟ್‌ಫಿಟ್ ಆಯ್ಕೆ ಹೀಗಿರಲಿ

* ಸೀಸನ್‌ಗೆ ಸೂಕ್ತವಾದುದ್ದನ್ನು ಖರೀದಿಸಿ.

* ಆದಷ್ಟೂ ಸಾಫ್ಟ್ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಿ.

* ಟ್ರೆಂಡಿ ಪ್ರಿಂಟ್ಸ್ ಅಥವಾ ಮಾನೋಕ್ರೋಮ್‌ನದ್ದನ್ನು ಚೂಸ್ ಮಾಡಿ.

* ಮಿಕ್ಸ್ ಮ್ಯಾಚ್ ಫ್ಯಾಷನ್‌ಗೆ ಹೊಂದುವಂತಿದ್ದರೇ ಮುಂದಿನ ಸೀಸನ್‌ಗೂ ಧರಿಸಬಹುದು.

* ಟ್ರಯಲ್ ನೋಡಿ, ಫಿಟ್ಟಿಂಗ್ ಇರುವಂತದ್ದನ್ನು ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author