ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Eid Milad Jewel Fashion 2026: ಈದ್ ಮಿಲಾದ್‌ಗೆ ಬಂತು ಮಿನುಗುವ ಇಯರಿಂಗ್ಸ್

ಈ ಬಾರಿಯ ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಮಿನುಗುವ ಇಯರಿಂಗ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಟ್ರೆಂಡಿಯಾಗಿವೆ. ಈ ಸೀಸನ್‌ನಲ್ಲಿ ಧರಿಸಿದಲ್ಲಿ ನೇತಾಡುವಂತಹ ಕ್ರಿಸ್ಟಲ್ ಹಾಗೂ ಸ್ಟೋನ್ಸ್‌ನ ಬಿಗ್ ಚಾಂದಬಾಲಿ, ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್, ಕುಂದನ್ ಬಿಗ್ ಹ್ಯಾಂಗಿಂಗ್ಸ್, ಶಿಮ್ಮರ್ ಟರ್ಕಿಶ್ ಇಯರಿಂಗ್ಸ್, ಬಾಲಿವುಡ್ ಸ್ಟೈಲ್ ಕುಂದನ್ ಇಯರಿಂಗ್ಸ್ ಜ್ಯುವೆಲ್ ಫ್ಯಾಷನ್‌ನಲ್ಲಿ ಸೇರಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಕೃಪೆ: ಪಿಕ್ಸೆಲ್
1/5

ಈ ಬಾರಿಯ ಈದ್ ಮಿಲಾದ್ ಹಬ್ಬದ ಸಂಭ್ರಮಕ್ಕೆ ಬಗೆಬಗೆಯ ಮಿನುಗುವ ಬಿಗ್ ಇಯರಿಂಗ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ.

ಟ್ರೆಂಡಿಯಾಗಿರುವ ಇಯರಿಂಗ್‌ಗಳಿವು

ಈ ಸೀಸನ್‌ನಲ್ಲಿ ಧರಿಸಿದಲ್ಲಿ ನೇತಾಡುವಂತಹ ಕ್ರಿಸ್ಟಲ್ ಹಾಗೂ ಸ್ಟೋನ್ಸ್‌ನ ಬಿಗ್ ಚಾಂದ್ಬಾಲಿ, ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್, ಕುಂದನ್ ಬಿಗ್ ಹ್ಯಾಂಗಿಂಗ್ಸ್, ಶಿಮ್ಮರ್ ಟರ್ಕಿಶ್ ಇಯರಿಂಗ್ಸ್, ಬಾಲಿವುಡ್ ಸ್ಟೈಲ್ ಕುಂದನ್ ಇಯರಿಂಗ್ಸ್ ಜ್ಯುವೆಲ್ ಫ್ಯಾಷನ್‌ನಲ್ಲಿ ಸೇರಿವೆ. ಲೆಕ್ಕವಿಲ್ಲದಷ್ಟು ಡಿಸೈನ್ನಲ್ಲಿ ಇವು ಬಿಡುಗಡೆಗೊಂಡಿದ್ದು, ಫ್ಯಾನ್ಸಿ ಶಾಪ್‌ಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ದೊರೆಯುತ್ತಿವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರಿಶಾ ಖಾನ್.

2/5

ಸ್ಟೋನ್ –ಕ್ರಿಸ್ಟಲ್ಸ್‌ನ ಬಿಗ್ ಚಾಂದಬಾಲಿ

ಬಿಳಿ ಬಣ್ಣದ ಸ್ಟೋನ್ಸ್ ಹಾಗೂ ಮಿನುಗುವ ಸ್ಟೋನ್ಸ್ ಹೊಂದಿರುವ ಬಿಗ್ ಮಲ್ಟಿ ಲೇಯರ್ ಲುಕ್ ಇರುವಂತಹ ಅಗಲವಾದ ಚಾಂದಬಾಲಿಗಳು ಫ್ಯಾನ್ಸಿ ಶಾಪ್‌ಗಳಲ್ಲಿ ರಾರಾಜಿಸುತ್ತಿವೆ. ಎರಡ್ಮೂರು ಚಂದ್ರನ ಆಕಾರದೊಂದಿಗೆ ಸಾಲು ಸಾಲು ಮುತ್ತಿನ ಲೈನ್ಸ್‌ಗಳಿಂದ ಸಿಂಗಾರಗೊಂಡಿರುವಂತವು ಹೆಣ್ಣುಮಕ್ಕಳನ್ನು ಸೆಳೆಯುತ್ತಿವೆ.

ಶಿಮ್ಮರ್ ಶ್ಯಾಂಡೆಲಿಯರ್ ಡ್ಯಾಂಗ್ಲಿಂಗ್ಸ್

ಧರಿಸಿದಾಗ ಭುಜವನ್ನು ಮುಟ್ಟವ ಉದ್ದನೆಯ ಶಿಮ್ಮರ್ ಶ್ಯಾಂಡೆಲಿಯರ್ ಇಯರಿಂಗ್ಸ್ ಈಗಾಗಲೇ ಚಾಲ್ತಿಯಲ್ಲಿವೆ. ಮುತ್ತು, ಬೀಡ್ಸ್ ಹಾಗೂ ನಾನಾ ವರ್ಣದ ಮಣಿಗಳಿರುವ ಗ್ರ್ಯಾಂಡ್ ಲುಕ್ ನೀಡುವ ಡಿಸೈನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

3/5

ಅಂದವಾದ ಕುಂದನ್ ಹ್ಯಾಂಗಿಂಗ್ಸ್

ನೋಡಿದಾಗ ಚಿಕ್ಕ ಚಿಕ್ಕ ಕನ್ನಡಿಯಂತೆ ಕಾಣುವ ಕುಂದನ್ ಡಿಸೈನ್‌ನ ದೊಡ್ಡದಾದ ಕಿವಿಯೊಲೆ ಹಾಗೂ ಅದಕ್ಕೆ ಅಟ್ಯಾಚ್ ಆದಂತಿರುವ ಹ್ಯಾಂಗಿಂಗ್ಸ್ ಮನಮೋಹಕ ವಿನ್ಯಾಸದಲ್ಲಿ ಎಲ್ಲರನ್ನೂ ಸೆಳೆಯುತ್ತಿವೆ.

4/5

ಶೈನಿಂಗ್ ಟರ್ಕಿಶ್ ಇಯರಿಂಗ್ಸ್

ವಿಭಿನ್ನ ವಿನ್ಯಾಸ ಎಂದೆನಿಸುವ ಟರ್ಕಿಶ್ ವಿನ್ಯಾಸದ ಇಯರಿಂಗ್‌ಗಳು ಕಂಪ್ಲೀಟ್ ಗೋಲ್ಡ್ ಕೋಟೆಡ್ ಹಾಗೂ ಇಮಿಟೇಷನ್ ಆಭರಣಗಳ ಕೆಟಗರಿಯಲ್ಲಿ ದೊರೆಯುತ್ತಿವೆ.

5/5

ಸ್ಟೇಟ್‌ಮೆಂಟ್ ಬಿಗ್ ಹ್ಯಾಂಗಿಂಗ್ಸ್

ಉಡುಪಿಗೆ ಮ್ಯಾಚ್ ಆಗುವಂತಹ ಬಾಲಿವುಡ್ ಸ್ಟೈಲ್‌ಗೆ ಸಾಥ್ ನೀಡುವ ಸ್ಟೇಟ್‌ಮೆಂಟ್ ಇಯರಿಂಗ್ಸ್, ನಾನಾ ಬಣ್ಣದ ಡಿಸೈನರ್‌ವೇರ್‌ಗಳಿಗೆ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ದೊರೆಯುತ್ತಿವೆ.

ಶೀಲಾ ಸಿ ಶೆಟ್ಟಿ

View all posts by this author