ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fashion News 2025: ಆಜಾದಿ ಮಹೋತ್ಸವ್‌ನಲ್ಲಿ ರ‍್ಯಾಂಪ್‌ ವಾಕ್‌ ಮಾಡಿದ ಮಹಿಳಾಮಣಿಯರು

Fashion News 2025: ಅನಿ ಥಾಮಸ್‌ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಫ್ಯಾಷನ್‌ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್‌ ಕಂಪನಿಯ ಆಜಾದಿ ಮಹೋತ್ಸವ್‌ನಲ್ಲಿ ವಯಸ್ಸಿನ ಭೇಧ-ಭಾವವಿಲ್ಲದೇ ಎಲ್ಲಾ ವರ್ಗದ ಗೃಹಿಣಿಯರು ಆತ್ಮವಿಶ್ವಾಸದಿಂದ ರ‍್ಯಾಂಪ್‌ ವಾಕ್‌ ಮಾಡಿ ಸಂಭ್ರಮಿಸಿದರು. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಫ್ಯಾಷನ್‌ ಸ್ಟ್ರೀಕ್ಸ್ & ಮಾಡೆಲಿಂಗ್‌ ಆಜಾದಿ ಮಹೋತ್ಸವ್
1/5

ವಯಸ್ಸಿನ ಭೇದ-ಭಾವ ಮರೆತ ಗೃಹಿಣಿಯರು ರ‍್ಯಾಂಪ್‌ ಮೇಲೆ ತಮ್ಮದೇ ಆದ ಶೈಲಿಯಲ್ಲಿ ರ‍್ಯಾಂಪ್‌ ವಾಕ್‌ ಮಾಡಿ, ಸಂಭ್ರಮಿಸಿದರು.

2/5

ಸಂಭ್ರಮಿಸಿದ ಮಹಿಳಾಮಣಿಯರು

ಕೆಲವರು ಸೀರೆಯುಟ್ಟು ವಾಕ್‌ ಮಾಡಿದರೇ, ಇನ್ನು ಕೆಲವರು ಲೆಹೆಂಗಾದಲ್ಲಿ, ಮತ್ತೆ ಕೆಲವರು ವೆರೈಟಿ ಡಿಸೈನರ್‌ವೇರ್‌ ಧರಿಸಿ, ಥಳಕುತ್ತಾ ಬಳುಕುತ್ತಾ ಆತ್ಮವಿಶ್ವಾಸದಿಂದ ಫ್ಯಾಷನ್‌ ಪೋಸ್‌ಗಳನ್ನು ನೀಡುತ್ತಾ ನೆರೆದಿದ್ದವರ ಮನ ಗೆದ್ದರು.

3/5

ಫ್ಯಾಷನ್‌ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್‌ ಟೀಮ್‌ ಕಾರ್ಯಕ್ರಮ

ಹೌದು, ಈ ದೃಶ್ಯ ಕಂಡು ಬಂದಿದ್ದು, ಅನಿತಾ ಥಾಮಸ್‌ ನೇತೃತ್ವದ ಫ್ಯಾಷನ್‌ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್‌ ಕಂಪನಿಯ ಅಜಾದಿ ಮಹೋತ್ಸವ್‌ನಲ್ಲಿ. ವೀಕೆಂಡ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ನಡೆದ ಗೃಹಿಣಿಯರ ಈ ಫ್ಯಾಷನ್‌ ಶೋನಲ್ಲಿ, ಸಾಕಷ್ಟು ಮಹಿಳೆಯರು ತಮ್ಮ ವಯಸ್ಸಿನ ಭೇಧ-ಭಾವ ಮರೆತು ರ‍್ಯಾಂಪ್‌ ವಾಕ್‌ ಮಾಡಿ ಸಂಭ್ರಮಿಸಿದರು.

4/5

ಅನಿತಾ ಥಾಮಸ್‌ ಟೀಮ್‌ ರ‍್ಯಾಂಪ್‌ ವಾಕ್‌

ನಾವೆಲ್ಲಾ ಮಾಡೆಲ್‌ಗಳೆಂದಾಕ್ಷಣ ಅವರು ತೆಳ್ಳಗೆ ಬೆಳ್ಳಗೆ ಎಂದುಕೊಳ್ಳುವುದು ಸಹಜ. ಆದರೆ, ನಾನು ಆಯೋಜಿಸುವ ಕಾರ್ಯಕ್ರಮದಲ್ಲಿ ಮದುವೆಯಾದ ಗೃಹಿಣಿಯರು ಹಾಗೂ ಸೀನಿಯರ್‌ ಸಿಟಿಜನ್‌ ಮಹಿಳೆಯರಿಗೂ ಅವಕಾಶ ನೀಡುತ್ತೇನೆ. ಇದು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎನ್ನುತ್ತಾರೆ ಫ್ಯಾಷನ್‌ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್‌ ಟೀಮ್‌ನ ಮುಖ್ಯಸ್ಥೆ ಅನಿ ಥಾಮಸ್‌. ಅವರು ಹೇಳುವಂತೆ, ನಾನಂತೂ ಸ್ಪರ್ಧೆ ಏರ್ಪಡಿಸುವುದಿಲ್ಲ! ಬದಲಿಗೆ ಎಲ್ಲರಿಗೂ ರ‍್ಯಾಂಪ್‌ ಮೇಲೆ ವಾಕ್‌ ಮಾಡಲು ಅವಕಾಶ ಕಲ್ಪಿಸುತ್ತೇನೆ ಎನ್ನುತ್ತಾರೆ.

5/5

ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಫ್ಯಾಷನ್‌ ಇವೆಂಟ್‌

ಆಜಾದಿ ಮಹೋತ್ಸವ್‌ನ ಮಧ್ಯೆ ನಡೆದ ಈ ಫ್ಯಾಷನ್‌ ಇವೆಂಟ್‌ನಲ್ಲಿ ನಟ ಭಾರ್ಗವ್‌, ಫ್ಯಾಷನ್‌ ಪತ್ರಕರ್ತೆ ಹಾಗೂ ಲೇಖಕಿ ಶೀಲಾ ಸಿ. ಶೆಟ್ಟಿ, ಪತ್ರಕರ್ತ ಅಂಜನ್‌, ಸೇರಿದಂತೆ ನಾನಾ ಗಣ್ಯರು ಪಾಲ್ಗೊಂಡಿದ್ದರು.

ಶೀಲಾ ಸಿ ಶೆಟ್ಟಿ

View all posts by this author