ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fashion News 2026: ಬೆಂಗಳೂರಿನ ಮಾಲ್‌ಗಳಿಗೂ ಕಾಲಿಟ್ಟ AI ಸ್ಮಾರ್ಟ್ ಟ್ರಯಲ್‌ ರೂಮ್ಸ್

AI Smart Trial Rooms: ಇದೀಗ ಉದ್ಯಾನನಗರಿಗೂ AI ಸ್ಮಾರ್ಟ್ ಟ್ರಯಲ್‌ ರೂಮ್‌ಗಳು ಕಾಲಿಟ್ಟಿವೆ. ಸ್ಮಾರ್ಟ್ ಹುಡುಗಿಯರ ಪ್ರಯೋಗಾತ್ಮಕ ಶಾಪಿಂಗ್‌ಗೆ ಸಾಥ್‌ ನೀಡುತ್ತಿವೆ. ಇದ್ಯಾವ ಬಗೆಯ ಟ್ರಯಲ್‌ ರೂಮ್ಸ್? ಏನಿದರ ಸ್ಪೆಷಾಲಿಟಿ? ಇಲ್ಲಿದೆ ಫ್ಯಾಷನ್‌ ಪತ್ರಕರ್ತೆಯ ಪ್ರತ್ಯಕ್ಷ ವರದಿ.

ಚಿತ್ರಗಳು: ಮಿಂಚು
1/5

ಉದ್ಯಾನನಗರಿಗೂ AI ಸ್ಮಾರ್ಟ್ ಟ್ರಯಲ್‌ ರೂಮ್‌ಗಳು ಕಾಲಿಟ್ಟಿವೆ. ಸದ್ಯ ಮಾಲ್‌ಗಳ ಹೈ ಫ್ಯಾಷನ್‌ ಸ್ಟೋರ್‌ಗಳಲ್ಲಿ ಜೆನ್‌ ಜಿ ಹುಡುಗಿಯರ ಹಾಗೂ ಮಾನಿನಿಯರ ಪ್ರಯೋಗಾತ್ಮಕ ಶಾಪಿಂಗ್‌ಗೆ ಸಾಥ್‌ ನೀಡುತ್ತಿವೆ.

2/5

ಟೆಕ್ನಾಲಜಿ ಪ್ರಿಯರಿಗೆ AI ಸ್ಮಾರ್ಟ್ ಟ್ರಯಲ್‌ ರೂಮ್ಸ್

ಹೌದು, ಇದುವರೆಗೂ ವಿದೇಶಗಳಲ್ಲಿ ಅತಿ ಹೆಚ್ಚಾಗಿ ಕಾಣಬಹುದಾಗಿದ್ದ ಈ AI ಸ್ಮಾರ್ಟ್ ಟ್ರಯಲ್‌ ರೂಮ್‌ಗಳು, ಇದೀಗ ಯುಬಿ ಸಿಟಿ, ಲುಲು ಮಾಲ್‌ ಸೇರಿದಂತೆ ಸಾಕಷ್ಟು ಹೈ ಟೆಕ್‌ ಮಾಲ್‌ಗಳಿಗೆ ಎಂಟ್ರಿ ನೀಡಿವೆ. ಹೈ ಬ್ರಾಂಡ್‌ನ ಫ್ಯಾಷನ್‌ವೇರ್‌ಗಳ ರಿಟೈಲ್‌ ಶಾಪ್‌ಗಳಲ್ಲಿ ಹಾಗೂ ಶೋ ರೂಂಗಳಲ್ಲಿ ಇಣುಕಿವೆ. ಟೆಕ್ನಾಲಜಿ ಪ್ರಿಯ ಯುವತಿಯರನ್ನು ಹಾಗೂ ಮಾನಿನಿಯರನ್ನು ಸೆಳೆದಿವೆ.

3/5

ಇದ್ಯಾವ ಬಗೆಯ ಟ್ರಯಲ್‌ ರೂಮ್ಸ್?

ಸಿಂಪಲ್‌ ಆಗಿ ಅರ್ಥವಾಗುವಂತೆ ಹೇಳುವುದಾದಲ್ಲಿ, ನೀವು ಫಿಸಿಕಲಿ ಯಾವುದೇ ಉಡುಪನ್ನು ಧರಿಸದೇಯೇ ವರ್ಚುವಲ್‌ ಆಗಿ ಟೆಕ್ನಾಲಜಿಯ ಸಹಾಯ ಪಡೆದು ಅಂದರೇ, ಎದುರಿಗಿರುವ ಟಿವಿಯಂತಹ ಸ್ಕ್ರೀನ್‌ ಮೇಲೆ ಖರೀದಿಸುತ್ತಿರುವ ಉಡುಪು ಹೇಗೆ ಕಾಣಿಸಬಹುದು ಎಂಬುದನ್ನು ಚೆಕ್‌ ಮಾಡುವ ವಿಧಾನ ಈ ಟ್ರಯಲ್‌ ರೂಮ್‌ನದ್ದು ಎನ್ನಬಹುದು.

4/5

AI ಸ್ಮಾರ್ಟ್ ಟ್ರಯಲ್‌ ರೂಮ್‌ ಬಳಸುವುದು ಹೇಗೆ?

ಟ್ರಯಲ್‌ ರೂಮ್‌ನಲ್ಲಿರುವ ಟಿವಿಯಂತಹ ಟಚ್‌ ಸ್ಕ್ರೀನ್‌ನಲ್ಲಿ ಲಭ್ಯವಿರುವ ಉಡುಗೆಗಳ ಕಲೆಕ್ಷನ್‌ನಲ್ಲಿ ನಿಮಗೆ ಬೇಕಾಗಿರುವ ಉಡುಗೆಯ ಕೋಡ್‌ ಇಲ್ಲವೇ ಹೆಸರು ನೀಡಿ, ಆಯ್ಕೆ ಮಾಡಿ, ನಂತರ ಧರಿಸಿದ ನಂತರ ಹೇಗೆ ಕಾಣಿಸಬಹುದು ಎಂಬುದನ್ನು ಪರಾಮರ್ಶಿಸುವುದು. ಕೆಲವು ಸ್ಕ್ರೀನ್‌ಗಳಲ್ಲಿ ಮೊದಲೇ ಮಾಡೆಲ್‌ ಚಿತ್ರವಿರುತ್ತದೆ. ಅದರ ಮೇಲೆ ಸೈಝ್‌ ಮೆನ್ಷನ್‌ ಮಾಡಿ (ಸ್ಮಾಲ್‌, ಮಿಡಿಯಂ, ಎಕ್ಸೆಲ್‌) ಕ್ಲಿಕ್‌ ಮಾಡಿದಾಗ ಹೇಗೆ ಕಾಣಿಸಬಹುದು ಎಂಬುದನ್ನು ನೋಡಿಕೊಳ್ಳಬಹುದು. ಸಮಯದ ಅಭಾವವಿದ್ದಲ್ಲಿ, ಅಲ್ಲಿಯೇ ಬಿಲ್‌ ಕೂಡ ನೀಡಬಹುದು.

5/5

ಸ್ಮಾರ್ಟ್ ಟ್ರಯಲ್‌ ರೂಮ್‌ ಬಳಕೆದಾರರಿಗೆ ಸಲಹೆಗಳು

  • ಬಳಸುವ ಮುನ್ನ ರೂಲ್ಸ್ ರೆಗ್ಯುಲೆಷನ್ಸ್ ತಿಳಿದುಕೊಳ್ಳಿ.
  • ಪಾರ್ಟಿ ಲೈಟ್‌, ನಾರ್ಮಲ್‌ ಲೈಟ್‌ ಹೀಗೆ ಅಲ್ಲಿರುವ ಲೈಟಿಂಗ್ಸ್ ಕ್ಲಿಕ್‌ ಮಾಡಿ ಹೇಗೆ ಕಾಣಿಸುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು.
  • ಟೆಕ್ನಾಲಜಿ ಬಗ್ಗೆ ತಿಳಿದಿರಲಿ.
  • ಬಟನ್‌ ಪ್ರೆಸ್‌ ಮಾಡಿ, ಅಲ್ಲಿನ ಸೇಲ್ಸ್ ಗರ್ಲ್ಸ್ ಸಹಾಯ ಕೂಡ ಪಡೆಯಬಹುದು.
  • ಯಾವುದೇ ಕಾರಣಕ್ಕೂ ನಿಮ್ಮ ಐಡೆಂಟಿಟಿ ಓರಿಜಿನಲ್‌ಗಳನ್ನು ಅಪ್‌ಲೋಡ್‌ ಮಾಡಬೇಡಿ.
  • ಬಳಸುವಾಗ ಪ್ರತಿ ವಾಕ್ಯವನ್ನು ಓದಿ, ಮುಂದುವರೆಯಿರಿ.

ಶೀಲಾ ಸಿ ಶೆಟ್ಟಿ

View all posts by this author