Fashion News 2026: ಡಿಸೈನರ್‌ಗಳ ಕೈಚಳಕಕ್ಕೆ ಸಾಕ್ಷಿಯಾದ ಸಿಇಎಸ್ ಫ್ಯಾಷನ್ ಶೋ
CES Designer Awards 2026 – Season 5: ಭಾವಿ ಡಿಸೈನರ್‌ಗಳ ಕೈಗಳಲ್ಲಿ ಸಿದ್ಧಗೊಂಡ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್ ಪ್ರಿಯರ ಮನಸೆಳೆದರು. ಈ ಫ್ಯಾಷನ್ ಶೋ ಕುರಿತಂತೆ ಇಲ್ಲಿದೆ ವರದಿ.
ಊಹೆಗೂ ಮೀರಿದ ಡಿಸೈನರ್‌ವೇರ್‌ಗಳು, ಕೆಲವು ಹೊಸತನ ಮೂಡಿಸಿದರೇ, ಇನ್ನು ಕೆಲವು ರಿಸೈಕಲ್ ಡಿಸೈನ್‌ಗಳಾಗಿದ್ದವು. ಮತ್ತೆ ಕೆಲವು ಇಕೋ ಫ್ರೆಂಡ್ಲಿ ಡಿಸೈನರ್‌ವೇರ್‌ಗಳಾಗಿದ್ದವು. ಇವನ್ನು ಧರಿಸಿದ ಮಾಡೆಲ್‌ಗಳು ಸಾಕಷ್ಟು ಬಾರಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದರೇ, ನೋಡುಗರು ಪ್ರತಿ ಡಿಸೈನನ್ನು ಖುಷಿಯಿಂದ ನೋಡುತ್ತಾ ಎಂಜಾಯ್ ಮಾಡುತ್ತಿದ್ದರು.
ಸಿಇಎಸ್ ಫ್ಯಾಷನ್ ಕಾಲೇಜಿನ ಶೋ
ಹೌದು, ಈ ಚಿತ್ರಣ ಕಂಡದ್ದು, ಯಲಹಂಕದಲ್ಲಿರುವ ಸಿಇಎಸ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಕಾಲೇಜಿನ ಡಿಸೈನರ್ ಅವಾರ್ಡ್ ಸಮಾರಂಭದಲ್ಲಿ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭಾವಿ ಡಿಸೈನರ್‌ಗಳ ಕೈಚಳಕ
ಕಾಲೇಜಿನ ಸರಿ ಸುಮಾರು 17 ಭಾವಿ ಡಿಸೈನರ್‌ಗಳ ಕೈಗಳಲ್ಲಿ ಸಿದ್ಧಗೊಂಡಿದ್ದ ವೈವಿಧ್ಯಮಯ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಫ್ಯಾಷನ್ ಪ್ರಿಯರ ಮನಸೆಳೆದರು.
ವಿಜೇತ ಡಿಸೈನರ್‌ಗಳ ಪಟ್ಟಿ
ಬೆಸ್ಟ್ ಡಿಸೈನರ್ ಅವಾರ್ಡ್ ಹಾಗೂ ಆಕ್ಸೆಸರೀಸ್ ಪ್ರಶಸ್ತಿಯನ್ನು ಅಂಜಲಿ ಪಿಟ್ಸ್ ಗೆದ್ದುಕೊಂಡರು. ಬೆಸ್ಟ್ ಕನ್‌ಸ್ಟಕ್ಷನ್ ಪ್ರಶಸ್ತಿಯನ್ನು ಪಡೆದುಕೊಂಡರು. ಪ್ರೊಪ್ ಯುಟಿಲೈಸೇಷನ್ ಪ್ರಶಸ್ತಿಯನ್ನು ಸ್ಫೂರ್ತಿ ಪಡೆದರೇ, ಯಾಸ್ಮಿನ್ ಬೆಸ್ಟ್ ಕಲರ್ ಪ್ಯಾಲೆಟ್ ಎಕ್ಸಲೆನ್ಸ್, ಆರತಿ ಬೆಸ್ಟ್ ಸರ್ಫೆಸ್ ಎಕ್ಸಲೆನ್ಸ್ ಅವಾರ್ಡ್ ಪಡೆದು ಸಂಭ್ರಮಿಸಿದರು.
ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದ ಸೆಲೆಬ್ರೆಟಿಗಳು
ಮಿಸೆಸ್ ಇಂಡಿಯಾ (ಆಸ್ಟ್ರಲ್) ಡೈರೆಕ್ಟರ್ ಪ್ರತಿಭಾ ಸಂಶೀಮಠ, ಫ್ಯಾಷನ್ ಡಿಸೈನರ್ ಜರಿ ಪ್ರಿಯಾ, ವರ್ಷಿಣಿ, ಪ್ರಿಯಾಂಕಾ ಹಾಗೂ ಸೀನಿಯರ್ ಫ್ಯಾಷನ್ ಪತ್ರಕರ್ತೆ, ಲೇಖಕಿ ಹಾಗೂ ಫ್ಯಾಷನ್ ಸಲಹೆಗಾರರಾದ ಶೀಲಾ ಸಿ. ಶೆಟ್ಟಿ, ದೂರದರ್ಶನದ ಮಾಜಿ ಅಧಿಕಾರಿ ಶಿರಹಟ್ಟಿ, ಕಾಲೇಜಿನ ಶಬ್ನಾಜ್ ಭಾಗವಹಿಸಿದ್ದರು.