ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fashion News 2026: ಹೆರಿಟೇಜ್‌ ವೆಡ್ಡಿಂಗ್‌ ಫ್ಯಾಷನ್‌ಗೆ ಸೈ ಎಂದ ದೀಪಿಕಾ ಗೋವಿಂದ್‌

ಸೆಲೆಬ್ರೆಟಿ ಡಿಸೈನರ್ ದೀಪಿಕಾ ಗೋವಿಂದ್‌ರ ನೇತೃತ್ವದ ಹೈ ಫ್ಯಾಷನ್‌ ವೆಡ್ಡಿಂಗ್‌ ಡಿಸೈನರ್‌ವೇರ್‌ಗಳ ಪ್ರದರ್ಶನ ಉದ್ಯಾನನಗರಿಯಲ್ಲಿ ಯಶಸ್ವಿಯಾಗಿ ನಡೆಯಿತು. ವೆಡ್ಡಿಂಗ್‌ನಲ್ಲೂ ಹೈ ಫ್ಯಾಷನ್‌ ಬಯಸುವವರ ಲಿಸ್ಟ್‌ಗೆ ಸೇರುವಂತಹ ಈ ವೈವಿಧ್ಯಮಯ ಹೆರಿಟೇಜ್‌ ಡಿಸೈನರ್‌ವೇರ್‌ಗಳು ವೆಡ್ಡಿಂಗ್‌ ಕಲೆಕ್ಷನ್‌ಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಲೆಹೆಂಗಾ, ಹಾಫ್‌ ಸೀರೆ, ರೇಷ್ಮೆ ಸೀರೆ, ಧೋತಿ, ಪಂಚೆ ಹೀಗೆ ನಾನಾ ಬಗೆಯ ಸಸ್ಟೈನಬಲ್‌ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗಳನ್ನು ಹೊಂದಿದ್ದವು. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಗಳು: ದೀಪಿಕಾ ಗೋವಿಂದ್‌ ಫ್ಯಾಷನ್‌ ಶೋ ಚಿತ್ರಗಳು.
1/5

ಮುಂಬರುವ ಮದುವೆ ಸೀಸನ್‌ ಗಮನದಲ್ಲಿಟ್ಟುಕೊಂಡು ಉದ್ಯಾನನಗರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸೆಲೆಬ್ರೆಟಿ ಡಿಸೈನರ್‌ ದೀಪಿಕಾ ಗೋವಿಂದ್‌ ಅವರ ಹೈ ಫ್ಯಾಷನ್‌ ಕೆಟಗರಿ ಲಿಸ್ಟ್‌ಗೆ ಸೇರುವ ಹೆರಿಟೇಜ್‌ ವೆಡ್ಡಿಂಗ್‌ ಫ್ಯಾಷನ್‌ ಶೋ ಯಶಸ್ವಿಯಾಗಿ ನಡೆಯಿತು.

2/5

ದೀಪಿಕಾ ಗೋವಿಂದ್‌ ಡಿಸೈನ್ಸ್

ಬೆಂಗಳೂರಿನ ಮೂಲದ ಡಿಸೈನರ್ ದೀಪಿಕಾ ಗೋವಿಂದ್‌ರ ಈ ಡಿಸೈನರ್‌ವೇರ್‌ಗಳು ಸಸ್ಟೈನಬಲ್‌ ಕಾನ್ಸೆಪ್ಟ್‌ನಲ್ಲಿ ನಾನಾ ಬಗೆಯ ಡಿಸೈನ್‌ಗಳಲ್ಲಿ ಮಾಡೆಲ್‌ಗಳನ್ನು ಸವಾರಿ ಮಾಡಿದ್ದವು.

3/5

ಸಸ್ಟೈನಬಲ್‌ ವೆಡ್ಡಿಂಗ್‌ ಡಿಸೈನರ್‌ವೇರ್ಸ್

ವೆಡ್ಡಿಂಗ್‌ನಲ್ಲೂ ಹೈ ಫ್ಯಾಷನ್‌ ಬಯಸುವವರ ಲಿಸ್ಟ್‌ಗೆ ಸೇರುವಂತಹ ಈ ವೈವಿಧ್ಯಮಯ ಹೆರಿಟೇಜ್‌ ಡಿಸೈನರ್‌ವೇರ್‌ಗಳು ವೆಡ್ಡಿಂಗ್‌ ಕಲೆಕ್ಷನ್‌ಗಳನ್ನು ಒಳಗೊಂಡಿದ್ದವು. ಅವುಗಳಲ್ಲಿ ಲೆಹೆಂಗಾ, ಹಾಫ್‌ ಸೀರೆ, ರೇಷ್ಮೆ ಸೀರೆ, ಧೋತಿ, ಪಂಚೆ ಹೀಗೆ ನಾನಾ ಬಗೆಯ ಸಸ್ಟೈನೆಬಲ್‌ ವೆಡ್ಡಿಂಗ್‌ ಫ್ಯಾಷನ್‌ವೇರ್‌ಗಳನ್ನು ಹೊಂದಿದ್ದವು.

4/5

ದೀಪಿಕಾ ಗೋವಿಂದ್‌ ಡಿಸೈನರ್‌ವೇರ್ಸ್ ವಿಶೇ‍ಷತೆ

ಅಂದಹಾಗೆ, ಪಾಪುಲರ್‌ ಡಿಸೈನರ್‌ ದೀಪಿಕಾ ಗೋವಿಂದ್‌ ವೆಡ್ಡಿಂಗ್‌ ಡಿಸೈನರ್‌ವೇರ್‌ಗಳಲ್ಲಿ ಬಹುತೇಕ ಡಿಸೈನ್‌ಗಳು ಸೌತ್‌ ಇಂಡಿಯನ್‌ ಲುಕ್‌ ನೀಡುವಂತಹ ವಿನ್ಯಾಸ ಒಳಗೊಂಡಿದ್ದವು. ಜತೆಗೆ ಅಮ್ರಪಾಲಿ, ರಾಯಲ್‌ ಡಿಸೈನ್‌ಗಳನ್ನು ಹೊಂದಿದ್ದವು. ಅಲ್ಲದೇ ವೆಡ್ಡಿಂಗ್‌ ಫ್ಯಾಷನ್‌ ಟ್ರೆಂಡ್‌ನಲ್ಲಿರುವಂತಹ ಇಂಡಿಗೋ, ದಾಳಿಂಬೆ ಕಲರ್‌, ಗೋಲ್ಡನ್‌ ಕಲರ್‌ನಲ್ಲಿ ಮೇಳೈಸಿದ್ದವು.

5/5

ಫ್ಯಾಷನ್‌ ಶೋ ರಂಗು

ಈ ವೆಡ್ಡಿಂಗ್‌ ಫ್ಯಾಷನ್‌ ಶೋನಲ್ಲಿ ಫ್ಯಾಷನ್‌ ಪ್ರಿಯರು ಮಾತ್ರವಲ್ಲ, ಸಾಕಷ್ಟು ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಪಾಲ್ಗೊಂಡಿದ್ದರು.

ಶೀಲಾ ಸಿ ಶೆಟ್ಟಿ

View all posts by this author