Fashion News 2026: ಯುಗಾದಿ ಕ್ಯಾಲೆಂಡರ್‌ಗಾಗಿ ಮಾಡೆಲ್‌ಗಳ ರ‍್ಯಾಂಪ್ ವಾಕ್
ಉದ್ಯಾನನಗರಿಯಲ್ಲಿ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕ್ಯಾಲೆಂಡರ್ ಲಾಂಚ್‌ನಲ್ಲಿ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿದರು. ನಾನಾ ಶೈಲಿಯ ಪೋಸ್ ನೀಡಿದರು. ತ್ರಿಶೂಲ ಟ್ರಸ್ಟ್ ಹಾಗೂ ಶ್ರೇಷ್ಠ ಫ್ಯಾಮಿಲಿ ಸ್ಟೋರ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತಂತೆ ಇಲ್ಲಿದೆ ವರದಿ.
ಯುಗಾದಿ ಸಂಭ್ರಮದ ಪ್ರಯುಕ್ತ ನಡೆದ ಶ್ರೇಷ್ಠ ಕ್ಯಾಲೆಂಡರ್ ಲಾಂಚ್‌ನಲ್ಲಿ ಮಾಡೆಲ್‌ಗಳು ರ‍್ಯಾಂಪ್ ವಾಕ್ ಮಾಡಿ, ನೋಡುಗರ ಮನ ಸೆಳೆದರು.
ತ್ರಿಶೂಲ ಟ್ರಸ್ಟ್ ಹಾಗೂ ಶ್ರೇಷ್ಠ ಫ್ಯಾಮಿಲಿ ಸ್ಟೋರ್ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಾರ್ಚ್ ಮಾಸದಲ್ಲಿ ನಡೆಯುತ್ತಿರುವ ಮಹಿಳಾ ದಿನಾಚಾರಣೆ ಹಾಗೂ ಯುಗಾದಿ ಕ್ಯಾಲೆಂಡರ್ ಲಾಂಚ್ ಎರಡೂ ಕಾರ್ಯಕ್ರಮಗಳು ಒಟ್ಟೊಟ್ಟಿಗೆ ಯಶಸ್ವಿಯಾಗಿ ನಡೆದವು.
ಯುಗಾದಿ ಕ್ಯಾಲೆಂಡರ್ ಲಾಂಚ್ ಫ್ಯಾಷನ್ ವಾಕ್
ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಕ್ಯಾಲೆಂಡರ್ ಫ್ಯಾಷನ್ ವಾಕ್‌ನಲ್ಲಿ ಶೋ ಡೈರೆಕ್ಟರ್ ರಿತೇಶ್ ನೇತೃತ್ವದಲ್ಲಿ ಉದ್ಯಾನನಗರಿಯ ಮಾಡೆಲ್‌ಗಳು ರೆಡ್ ಕಾರ್ಪೆಟ್ ಮೇಲೆ ರ‍್ಯಾಂಪ್ ವಾಕ್ ಮಾಡಿದರು. ನಾನಾ ಶೈಲಿಯ ಪೋಸ್ ನೀಡಿದರು.
ಕ್ಯಾಲೆಂಡರ್ ಮಾಡೆಲ್‌ಗಳು
ಕೆಲವು ದಿನಗಳಿಂದ ನಡೆದಿದ್ದ ಫ್ಯಾಷನ್ ಅಡಿಷನ್‌ನಲ್ಲಿ ಆಯ್ಕೆಗೊಂಡಿದ್ದ ಸಾಮಾನ್ಯ ಯುವಕ-ಯುವತಿಯರು ಹಾಗೂ ಮಹಿಳೆಯರಿಗೂ ಕೂಡ ಕ್ಯಾಲೆಂಡರ್ ಮಾಡೆಲ್ ಆಗುವ ಸದಾವಕಾಶ ನೀಡಲಾಗಿತ್ತು. ಇವರೆಲ್ಲರೂ ಕೂಡ ಕ್ಯಾಲೆಂಡರ್ ಮಾಡೆಲ್ ಆದ ಖುಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ರ‍್ಯಾಂಪ್ ವಾಕ್ ಮಾಡಿ ಸಂಭ್ರಮಿಸಿದರು.
ಕ್ಯಾಲೆಂಡರ್ ಮಾಡೆಲ್ ಅವಕಾಶ
ಕಾರ್ಯಕ್ರಮದಲ್ಲಿ ತ್ರಿಶೂಲ ಟ್ರಸ್ಟ್ ಸಂಸ್ಥಾಪಕಿ ಶುಭಾ ರಾಜಶೇಖರ್, ಹಾಲ್ ಆಫ್ ಫೇಮ್ ಫ್ಯಾಷನ್ ಪತ್ರಕರ್ತೆ ಶೀಲಾ ಸಿ. ಶೆಟ್ಟಿ, ಶ್ರೇಷ್ಠಾ ಫ್ಯಾಮಿಲಿ ಸ್ಟೋರ್‌ನ ಶಿವರಾಜ್, ಎಸ್‌ಆರ್ ಮಾಡೆಲಿಂಗ್ ಅಕಾಡೆಮಿಯ ರಿತೇಶ್ ಭಾಗವಹಿಸಿ ಮಾತನಾಡಿದರು. ಸಾಮಾನ್ಯ ಜನರಿಗೂ ಕ್ಯಾಲೆಂಡರ್ ಮಾಡೆಲ್ ಆಗುವ ಅವಕಾಶ ನೀಡಿರುವ ಬಗ್ಗೆ ಹೇಳಿದರು. ನಾನಾ ಕ್ಷೇತ್ರದಲ್ಲಿ ಆಯ್ದ ಕೆಲವು ಮಹಿಳೆಯರಿಗೆ ಶ್ರೇಷ್ಠ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿದರು.