Fashion News 2026: ಯಶಸ್ವಿಯಾದ ಆಸ್ಟ್ರಲ್ ಬ್ಯೂಟಿ ಪೇಜೆಂಟ್
ಬೆಂಗಳೂರಿನಲ್ಲಿ ಪ್ರತಿಷ್ಠಿತ ಆಸ್ಟ್ರಲ್ ಬ್ಯೂಟಿ ಪೇಜೆಂಟ್ ಯಶಸ್ವಿಯಾಗಿ ನಡೆಯಿತು. ಆಸ್ಟ್ರಲ್ ಮಿಸೆಸ್ ಇಂಡಿಯಾ, ಮಿಸ್ ಇಂಡಿಯಾ, ಮಿಸ್ ಟೀನ್ ಸೇರಿದಂತೆ ನಾನಾ ವಿಭಾಗಗಳಿಗಾಗಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ಭಾಗವಹಿಸಿದ್ದ ಮಾಡೆಲ್‌ಗಳು ನಾನಾ ರೌಂಡ್‌ಗಳಲ್ಲಿ ರ್ಯಾಂಪ್ ವಾಕ್ ಮಾಡಿದರು. ಒಂದೊಂದು ರೌಂಡ್‌ಗಳಲ್ಲೂ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು. ಈ ಬ್ಯೂಟಿ ಸ್ಪರ್ಧೆಯಲ್ಲಿ ವಿಜೇತರಾದವರ ಪಟ್ಟಿಯ ವಿವರ ಇಲ್ಲಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ 10ನೇ ವರ್ಷದ ಆಸ್ಟ್ರಲ್ ಬ್ಯೂಟಿ ಪೇಜೆಂಟ್ ಯಶಸ್ವಿಯಾಗಿ ನಡೆಯಿತು.
ಅತ್ಯಾಕರ್ಷಕವಾಗಿ ಕಾಣಿಸಿಕೊಂಡ ಮಾಡೆಲ್‌ಗಳು
ಆಸ್ಟ್ರಲ್ ಮಿಸೆಸ್ ಇಂಡಿಯಾ, ಮಿಸ್ ಇಂಡಿಯಾ, ಮಿಸ್ ಟೀನ್ ಸೇರಿದಂತೆ ನಾನಾ ವಿಭಾಗಗಳಿಗಾಗಿ ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ಭಾಗವಹಿಸಿದ್ದ ಮಾಡೆಲ್‌ಗಳು ನಾನಾ ರೌಂಡ್‌ಗಳಲ್ಲಿ ರ್ಯಾಂಪ್ ವಾಕ್ ಮಾಡಿದರು. ಒಂದೊಂದು ರೌಂಡ್‌ಗಳಲ್ಲೂ ಅತ್ಯಾಕರ್ಷಕವಾಗಿ ಕಾಣಿಸಿಕೊಂಡರು.
ಯಶಸ್ವಿ 10ನೇ ವರ್ಷದ ಬ್ಯೂಟಿ ಪೇಜೆಂಟ್
ಹತ್ತು ವರ್ಷದ ಹಿಂದೆಯಿಂದ ಆರಂಭಗೊಂಡಿದ್ದ ಈ ಬ್ಯೂಟಿ ಪೇಜೆಂಟ್‌ನಲ್ಲಿ ಅಂದಿನಿಂದ ಇಂದಿನವರೆಗೂ ಭಾಗವಹಿಸಿ ವಿಜೇತರಾದಂತಹ ಬಹುತೇಕ ಎಲ್ಲಾ ಬ್ಯೂಟಿ ಕ್ವೀನ್‌ಗಳು ಪಾಲ್ಗೊಂಡು, ರ‍್ಯಾಂಪ್ ವಾಕ್ ಮಾಡಿ ಸಂಭ್ರಮಿಸಿದರು. ಈ ಮಧ್ಯೆ ನಡೆದ ಈ ಸಾಲಿನ ಬ್ಯೂಟಿ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದವರ ಪಟ್ಟಿ ಈ ಕೆಳಕಂಡಂತಿದೆ.
ಮಿಸ್ ಟೀನ್ ಆಸ್ಟ್ರಲ್
ವಿನಂತಿ ರಾವ್ ಮಿಸ್ ಟೀನ್ ಕೀರೀಟವನ್ನು ಮುಡಿಗೇರಿಸಿಕೊಂಡರೇ, ಆರಾಧ್ಯ ಪ್ರದಾನ್ ನಂತರದ ಸ್ಥಾನ ಪಡೆದುಕೊಂಡರು.
ಮಿಸ್ ಇಂಡಿಯಾ ಆಸ್ಟ್ರಲ್
ಮಿಸ್ ಇಂಡಿಯಾ ಆಸ್ಟ್ರಲ್ ಕೀರೀಟ ಸೃಷ್ಠಿ ಕುಮಾರ್ ಮುಡಿಗೇರಿಸಿಕೊಂಡರೇ, ನಂತರದ ಸ್ಥಾನಗಳನ್ನು ಕ್ರಮವಾಗಿ ಮೌಲ್ಯ, ಕಾವ್ಯ ಗಳಿಸಿದರು.
ಲೇಡಿ ಇಂಡಿಯಾ ಆಸ್ಟ್ರಲ್ ವಿಜೇತರು
ಪ್ರಾಚಿ ಮಲ್ಹೋತ್ರಾ ಮೊದಲನೇ ಸ್ಥಾನ ಗಳಿಸಿದರು. ವರ್ಷಿಣಿ ಫಸ್ಟ್ ರನ್ನರ್ ಅಪ್ ಆದರು.
ಮಿಸೆಸ್ ಇಂಡಿಯಾ ಆಸ್ಟ್ರಲ್ ವಿಜೇತರು
ಡಾ. ರಶ್ಮಿ ಮಣಿ ಕೀರೀಟ ಮುಡಿಗೇರಿಸಿಕೊಂಡರು. ಕ್ರಮವಾಗಿ ಸೋನಿಯಾ ಹಾಗೂ ವಿದ್ಯಾ ಶ್ರೀ ನಂತರದ ಸ್ಥಾನ ಗಳಿಸಿದರು.
ಸೂಪರ್ ಎಲೈಟ್ & ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್
ಲಾವಣ್ಯ ಎಲೈಟ್ ಮಿಸೆಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡರೇ, ರಮ್ನಿ ಉಪ್ಪಾಳ್ ಮೊದಲನೇ ರನ್ನರ್ ಅಪ್, ರಶ್ಮಿ ಮಂಜುಶ್ರೀ 2ನೇ ರನ್ನರ್ ಅಪ್ ಸ್ಥಾನ ಗಳಿಸಿದರು. ಸೂಪರ್ ಎಲೈಟ್ ಕೀರೀಟವನ್ನು ಯಾಸ್ಮಿನ್ ಸೇಠ್ ಮುಡಿಗೇರಿಸಿಕೊಂಡರೇ, ತಾರಕೇಶ್ವರಿ ಹಾಗೂ ಮಿಲ್ಲಿ ಕ್ರಮವಾಗಿ ಸ್ಥಾನ ಗಳಿಸಿದರು.