ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Fashion Review 2026: ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಭೂಮಿಕಾ ರಮೇಶ್‌

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಗೌರಮ್ಮನಂತೆ ಕಾಣಿಸಿಕೊಂಡಿದ್ದ ನಟಿ ಭೂಮಿಕಾ ರಮೇಶ್‌ ಇದೀಗ ಮಾಡರ್ನ್‌ ಲುಕ್‌ನಲ್ಲಿ ಕಾಣಿಸಿಕೊಂಡು ಹೊಸ ವರ್ಷದ ನಯಾ ಲುಕ್‌ಗೆ ಸೈ ಎಂದಿದ್ದಾರೆ. ಅವರ ಈ ಲುಕ್‌ ಹೇಗಿದೆ? ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಭೂಮಿಕಾ ರಮೇಶ್‌, ಸೀರಿಯಲ್‌ ನಟಿ., ಫೋಟೋಗ್ರಫಿ: ಕ್ಲಿಕ್ಸ್ ಬೈ ಅತನು ದತ್ತಾ
1/5

ಮಾಡರ್ನ್‌ ಲುಕ್‌ನಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ ಸೀರಿಯಲ್‌ ನಟಿ ಭೂಮಿಕಾ ರಮೇಶ್‌.

2/5

ಭೂಮಿಕಾ ನಯಾ ಲುಕ್‌

ಹೌದು, ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಕಂಪ್ಲೀಟ್‌ ಗೌರಮ್ಮನಂತೆ ಅದರಲ್ಲೂ ಪಕ್ಕದ್ಮನೆ ಹುಡುಗಿಯಂತೆ ಕಾಣಿಸಿಕೊಂಡು ಜನಪ್ರಿಯರಾಗಿದ್ದ, ನಟಿ ಭೂಮಿಕಾ ರಮೇಶ್‌, ಹೊಸ ವರ್ಷದ ಆರಂಭದಲ್ಲೆ ಮಾಡರ್ನ್‌ ಲುಕ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು ಫ್ಯಾನ್ಸ್‌ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

3/5

ಭೂಮಿಕಾ ಮಾಡರ್ನ್‌ ಔಟ್‌ಫಿಟ್‌

ಬಹುತೇಕ ಸೀರಿಯಲ್‌ ಪ್ರೇಮಿಗಳಿಗೆ ನಟಿ ಭೂಮಿಕಾ ರಮೇಶ್‌ ಚಿರಪರಿಚಿತ ಹೆಸರು. ನಟಿಸಿದ ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಮನೆಮಗಳಂತೆ ಸಲ್ವಾರ್‌ ಹಾಗೂ ಸೀರೆಯಲ್ಲಿಯೇ ಕಾಣಿಸಿಕೊಂಡು ನಟಿಸುವ ಮೂಲಕ ಭೂಮಿಕಾ ಜನಪ್ರಿಯಗೊಂಡಿದ್ದರು. ಈ ಧಾರವಾಹಿಯ ನಂತರ ನೆರೆ ಭಾಷೆಯ ಸೀರಿಯಲ್‌ನಲ್ಲಿಯೂ ಕಾಣಿಸಿಕೊಂಡರು.

4/5

ಮಾಡರ್ನ್‌ ಲುಕ್‌ಗೂ ಸೈ

ಇನ್ನು, ಸೋಷಿಯಲ್‌ ಮೀಡಿಯಾದಲ್ಲಿಯೂ ಸಾಕಷ್ಟು ಸಕ್ರಿಯರಾಗಿರುವ ಭೂಮಿಕಾ ಹೊಸ ವರ್ಷದ ಹರ್ಷವನ್ನು ಮಾಡರ್ನ್‌ ಉಡುಗೆಯಲ್ಲಿರುವ ವಿಡಿಯೋ ಮೂಲಕ ತೋರ್ಪಡಿಸಿಕೊಂಡಿದ್ದರು. ಇದೀಗ, ಮತ್ತೊಮ್ಮೆ ಮಾಡರ್ನ್‌ ಲುಕ್‌ನ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಾನು ಪಾಶ್‌ ಲುಕ್‌ಗೂ ಸೈ ಎಂದು ಪ್ರೂವ್‌ ಮಾಡಿದ್ದಾರೆ.

ರಶ್ಮಿ ಅನೂಪ್‌ ರಾವ್‌ ಔಟ್‌ಫಿಟ್‌ನಲ್ಲಿ ಭೂಮಿಕಾ

ಸೆಲೆಬ್ರೆಟಿ ಡಿಸೈನರ್‌ ರಶ್ಮಿ ಅನೂಪ್‌ ರಾವ್‌ ಅವರ ಡಿಸೈನರ್‌ವೇರ್‌ನಲ್ಲಿ ಕಂಗೊಳಿಸಿರುವ ಭೂಮಿಕಾ, ಬ್ಲ್ಯಾಕ್‌ ಕ್ರಾಪ್‌ ಟಾಪ್‌ ಹಾಗೂ ರೆಡ್‌ ಸ್ಕರ್ಟ್ನಲ್ಲಿ ಮಿಂಚಿದ್ದಾರೆ. ಅವರ ವೈಬ್ರೆಂಟ್‌ ಐ ಶ್ಯಾಡೋ ಈ ಲುಕ್‌ಗೆ ಸಾಥ್‌ ನೀಡಿದೆ. ಮೇಕೋವರ್‌ ಕೂಡ ಅವರನ್ನು ಅಂದವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

5/5

ತಾರೆಯಂತೆ ಕಂಡ ಭೂಮಿಕಾ

ಭೂಮಿಕಾ ಈ ಲುಕ್‌ನಲ್ಲಿ ಸಿನಿಮಾ ತಾರೆಯಂತೆ ಕಂಗೊಳಿಸುತ್ತಿದ್ದಾರೆ ಎಂದು ಪ್ರಶಂಸಿದ್ದಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

ಶೀಲಾ ಸಿ ಶೆಟ್ಟಿ

View all posts by this author