Fashion Trend 2026: ಫ್ಯಾಷನ್ ರ‍್ಯಾಂಪ್‌ನಲ್ಲಿ ಹಂಗಾಮ ಎಬ್ಬಿಸಿದ ರೆಸಾರ್ಟ್‌ವೇರ್ಸ್
Fashion Trend 2026: ಸಮ್ಮರ್ ಸೀಸನ್‌ಗೆ ಮ್ಯಾಚ್ ಆಗುವಂತಹ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ರೆಸಾರ್ಟ್‌ವೇರ್‌ಗಳು ಈ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿವೆ. ಇದಕ್ಕೆ ರ‍್ಯಾಂಪ್ ಕೂಡ ಹೊರತಾಗಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಫ್ಯಾಷನ್ ರ‍್ಯಾಂಪ್‌ನಲ್ಲಿಯೂ ರೆಸಾರ್ಟ್‌ವೇರ್‌ಗಳು ಹಂಗಾಮ ಎಬ್ಬಿಸಿವೆ. ಹೌದು, ಸಮ್ಮರ್ ಸೀಸನ್‌ಗೆ ಮ್ಯಾಚ್ ಆಗುವಂತಹ ಹಾಲಿಡೇ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿರುವ ವೈವಿಧ್ಯಮಯ ರೆಸಾರ್ಟ್ ವೇರ್‌ಗಳು ಈ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿದ್ದು, ಇದಕ್ಕೆ ರ‍್ಯಾಂಪ್ ಕೂಡ ಹೊರತಾಗಿಲ್ಲ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಏನಿದು ರೆಸಾರ್ಟ್‌ವೇರ್ಸ್?
ಹಾಲಿಡೇ ಫ್ಯಾಷನ್ ಕೆಟಗರಿಯಲ್ಲಿ ಬರುವ ಈ ರೆಸಾರ್ಟ್‌ವೇರ್‌ಗಳು ಕಲರ್‌ಫುಲ್ ಹಾಗೂ ಇಮ್ಯಾಜಿನ್‌ಗೂ ಮೀರಿದ ಗ್ಲಾಮರಸ್ ಉಡುಪುಗಳು ಎಂದರೂ ತಪ್ಪಿಲ್ಲ! ಅವು ಮಿನಿ ಬಿಕಿನಿಯಂತಹ ಶಾರ್ಟ್ ಔಟ್‌ಫಿಟ್‌ಗಳಾಗಬಹುದು, ಮ್ಯಾಕ್ಸಿಯಂತಹ ಹಾರಾಡುವ ಜಾರ್ಜೆಟ್ ಉಡುಗೆಗಳಾಗಬಹುದು, ಇಲ್ಲವೇ, ಶಿಫಾನ್, ನೆಟ್ಟೆಡ್ ಅಥವಾ ಲೈಟ್‌ವೈಟ್ ಶೀರ್ ಫ್ಯಾಬ್ರಿಕ್‌ನ ಸ್ಕರ್ಟ್, ಟಾಪ್ ಅಥವಾ ಮಿನಿ ಫ್ರಾಕ್ ಆಗಬಹುದು. ಇವು ಪ್ರೊಫೆಷನಲ್ ಉಡುಪುಗಳಲ್ಲ, ಬದಲಿಗೆ ಬಣ್ಣಬಣ್ಣದ ಹಾಲಿಡೇ ಫ್ಯಾಷನ್ ಔಟ್‌ಫಿಟ್‌ಗಳು ಎನ್ನುತ್ತಾರೆ ಫ್ಯಾಷನಿಸ್ಟಾ ನಿಹಾಲ್.
ರ‍್ಯಾಂಪ್ ಮೇಲೂ ರೆಸಾರ್ಟ್‌ವೇರ್ಸ್
ಇತ್ತೀಚೆಗೆ ರೆಸಾರ್ಟ್‌ರ್ವೇರ್ಸ್ ರ‍್ಯಾಂಪ್ ಶೋಗಳಲ್ಲೂ ಕಾಮನ್ ಆಗಿದೆ. ಯಾವುದೇ ಪೇಜೆಂಟ್ ಆದರೂ ಅದರಲ್ಲಿ ಒಂದು ರೌಂಡ್ ರೆಸಾರ್ಟ್‌ವೇರ್‌ಗೆ ಮೀಸಲಾಗಿರುತ್ತವೆ. ಇದಕ್ಕೆ ಕಾರಣವೂ ಇದೆ. ಈ ಉಡುಗೆಗಳು ಗ್ಲಾಮರಸ್ ಜತೆಗೆ ಮಾಡೆಲ್‌ಗಳನ್ನು ಸೆಕ್ಸಿಯಾಗಿ ಹಾಟ್ ಲುಕ್‌ನಲ್ಲಿ ಬಿಂಬಿಸುವುದರಿಂದ ಈ ರೌಂಡ್ ಇದ್ದೇ ಇರುತ್ತದೆ ಎನ್ನುತ್ತಾರೆ ಫ್ಯಾಷನ್ ಡೈರೆಕ್ಟರ್ ಶ್ರೀಕಾಂತ್.
ಬಣ್ಣಬಣ್ಣದ ರೆಸಾರ್ಟ್‌ವೇರ್ಸ್
ಒಂದಕ್ಕೊಂದು ಸಂಬಂಧವಿಲ್ಲದಂತಹ ಡಿಸೈನ್ಸ್, ಊಹೆಗೂ ಮೀರಿದ ಡಿಸೈನ್ಸ್ ಈ ರೆಸಾರ್ಟ್‌ವೇರ್ಸ್‌ನಲ್ಲಿ ಕಾಣಬಹುದು. ಕಲರ್‌ಗಳಂತೂ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.
ಹಾಟ್ ಆಗಿ ಬಿಂಬಿಸುವ ಉಡುಗೆಗಳಿವು
ಧರಿಸಿದ ಹುಡುಗಿಯರನ್ನು ಹಾಟ್ ಆಗಿ ಬಿಂಬಿಸುವ ಉಡುಗೆಗಳಿವು. ಇದೀಗ ಸಾಮಾನ್ಯ ಹುಡುಗಿಯರು ಕೂಡ ಹಾಲಿಡೇ ಫ್ಯಾಷನ್‌ನಲ್ಲಿ ಬೀಚ್ ಫ್ಯಾಷನ್‌ನಲ್ಲಿ ಸೇರಿಸಿಕೊಂಡಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ಸ್ ರಾಕಿ & ಜಿನ್.