ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fathers Day Styling 2026: ಫಾದರ್ಸ್ ಡೇ ಸ್ಟೈಲಿಂಗ್‌ಗೆ ಇಲ್ಲಿವೆ 4 ಸಿಂಪಲ್‌ ಟಿಪ್ಸ್

Fathers Day Styling: ಫಾದರ್ಸ್ ಡೇ ಸೆಲೆಬ್ರೇಷನ್‌ಗೆ ಫ್ಯಾಷೆನಬಲ್‌ ಆಗಿ ರೆಡಿಯಾಗಬೇಕೇ! ಹಾಗಾದಲ್ಲಿ, ಈ ದಿನದ ವಿಶೇ‍ಷ ಸ್ಟೈಲಿಂಗ್‌ಗಾಗಿ 4 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್‌
1/5

ಫಾದರ್ಸ್ ಡೇ ಸೆಲೆಬ್ರೇಷನ್‌ಗೆ ಫ್ಯಾಷನೆಬಲ್‌ ಆಗಿ ರೆಡಿಯಾಗಿ. ಈ ದಿನ ವಿಶೇ‍ಷ ಸ್ಟೈಲಿಂಗ್‌ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಇದಕ್ಕಾಗಿ ಅವರು 4 ಸಿಂಪಲ್‌ ಟಿಪ್ಸ್ ನೀಡಿದ್ದಾರೆ.

2/5

ಮೊದಲೇ ಪ್ರಿಪ್ಲ್ಯಾನ್ ಮಾಡಿ

ಫಾದರ್ಸ್ ಡೇಯಂದು ನೀವು ತಂದೆಯಾಗಿದ್ದಲ್ಲಿ ಅಥವಾ ಮಕ್ಕಳಾಗಿದ್ದಲ್ಲಿ ಅವರೊಂದಿಗೆ ಯಾವ ಬಗೆಯ ಉಡುಗೆಗಳನ್ನು ಧರಿಸುತ್ತೀರಾ! ಎಂಬುದನ್ನು ಪ್ರೀ ಪ್ಲಾನ್‌ ಮಾಡಿ. ಅವರಿಗೆ ಯಾವ ಔಟ್‌ಫಿಟ್‌ ಫೇವರೇಟ್‌ ಎಂಬುದನ್ನು ತಿಳಿದುಕೊಂಡು ಗಿಫ್ಟ್ ಮಾಡಿ, ಧರಿಸಲು ಹೇಳಿ. ಅವರಿಗೆ ಇಷ್ಟವಾಗುವ ಉಡುಪನ್ನು ನೀವು ಧರಿಸಿ.

3/5

ಟ್ವಿನ್ನಿಂಗ್ ಮಾಡಿ ನೋಡಿ

ಅಪ್ಪ-ಮಕ್ಕಳು ಟ್ವಿನ್ನಿಂಗ್‌ ಮಾಡಬಹುದು. ಅದು ಹೇಗೆ? ಅಂತಿರಾ! ತೀರಾ ಸಿಂಪಲ್‌. ಶಾಪಿಂಗ್‌ ಮಾಡಿ ಖರೀದಿಸುವುದಾದಲ್ಲಿ ಆದಷ್ಟೂ ಒಂದೇ ಬಗೆಯ ಔಟ್‌ಫಿಟ್ಸ್ ಖರೀದಿಸಿ, ಧರಿಸಿ. ಇಲ್ಲವಾದಲ್ಲಿ ವಾರ್ಡ್ರೋಬ್‌ನಲ್ಲಿರುವ ಸೇಮ್‌ ಟು ಸೇಮ್‌ ಔಟ್‌ಫಿಟ್‌ಗಳನ್ನು ಧರಿಸಿ. ಧರಿಸುವ ಎಲ್ಲಾ ಉಡುಗೆ ಹಾಗೂ ಆಕ್ಸೆಸರೀಸ್‌ ಒಂದೇ ಬಗೆಯದ್ದಾಗಿರಬೇಕು.

4/5

ಹೆಣ್ಣುಮಕ್ಕಳು ತಂದೆಯೊಂದಿಗೆ ಹೀಗೆ ಮ್ಯಾಚ್ ಮಾಡಿ

ತಂದೆಯು ಹೆಣ್ಣುಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವುದು ತುಸು ಅಸಾಧ್ಯ ಎಂದು ಯೋಚಿಸುತ್ತಾರೆ. ಆದರೆ, ಇದು ಕೂಡ ಸುಲಭ ಎಂದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ! ಇದಕ್ಕೆ ಮಾಡಬೇಕಾಗಿದ್ದಿಷ್ಟೇ! ಮಕ್ಕಳ ಔಟ್‌ಫಿಟ್‌ ಶೇಡ್ಸ್‌ನ ಕಾಪಿ ಮಾಡಿದರಾಯಿತು ಅಷ್ಟೇ! ಟ್ವಿನ್ನಿಂಗ್‌ಗೆ ಡ್ರೆಸ್‌ಗಳು ಥೇಟ್‌ ಒಂದೇ ಬಗೆಯದ್ದಾಗಿರಬೇಕೆಂಬ ರೂಲ್ಸ್ ಎಲ್ಲೂ ಇಲ್ಲ! ಒಟ್ಟಿನಲ್ಲಿ ಧರಿಸುವ ಉಡುಗೆ ಒಂದೇ ಕಲರ್‌ ಇದ್ದರೂ ಸಾಕು! ಎನ್ನುತ್ತಾರೆ ಸ್ಟೈಲಿಸ್ಟ್ಸ್.

5/5

ಉಲ್ಲಾಸ ತುಂಬುವ ಔಟ್‌ಫಿಟ್ಸ್ ಆಯ್ಕೆ ಮಾಡಿ

ಅಪ್ಪಂದಿರ ದಿನದಂದು ಮನಸ್ಸಿಗೆ ಖುಷಿ ನೀಡುವಂತಹ ಬಣ್ಣಗಳ ಆಯ್ಕೆಯ ಔಟ್‌ಫಿಟ್ಟನ್ನು ಅಪ್ಪ-ಮಕ್ಕಳು ಧರಿಸಿದಲ್ಲಿ, ಸಂಭ್ರಮ ಹೆಚ್ಚುವುದು. ಟ್ವಿನ್ನಿಂಗ್‌ ಮಾಡಲು ಇಷ್ಟವಿಲ್ಲದಿದ್ದಲ್ಲಿ, ಒಬ್ಬರಿಗೊಬ್ಬರು ಇಷ್ಟಪಡುವಂತಹ ಔಟ್‌ಫಿಟ್ಸ್ ಧರಿಸಿ, ಸಂಭ್ರಮಿಸಿ ಆಚರಿಸಿದರಾಯಿತು.

ಶೀಲಾ ಸಿ ಶೆಟ್ಟಿ

View all posts by this author