ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Festival Season 2026: ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌

Festival Season 2026: ವರಮಹಾಲಕ್ಷ್ಮೀಯ ಅಲಂಕಾರಿಕ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ವರಮಹಾಲಕ್ಷ್ಮೀಯ ಅಲಂಕಾರಿಕ ವಸ್ತ್ರಾಭರಣಗಳು, ಅಲಂಕಾರಿಕ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ. ಯಾವ್ಯಾವುದಕ್ಕೆ ಬೇಡಿಕೆ? ಈ ಬಾರಿ ಯಾವ್ಯಾವ ಡಿಸೈನ್‌ನವು ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಮಿಂಚು
1/5

ಬೇಡಿಕೆ ಹೆಚ್ಚಳ

ವರಮಹಾಲಕ್ಷ್ಮೀ ದೇವಿಯನ್ನು ಅಲಂಕರಿಸುವ ಅಲಂಕಾರಿಕ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ.

2/5

ದೇವಿಯ ಅಲಂಕಾರಕ್ಕೆ ಎಂಟ್ರಿ ಕೊಟ್ಟ ವಸ್ತ್ರಾಭರಣ

ವರಮಹಾಲಕ್ಷ್ಮಿ ದೇವಿಯನ್ನು ಅಲಂಕಾರ ಮಾಡಲು ಸಹಕಾರಿಯಾಗುವ ರೇಷ್ಮೆಯ ಬ್ರೋಕೆಡ್‌ನ ಮಿನಿ ಸೀರೆ, ಮಿನಿ ಲಂಗ-ದಾವಣಿ ಹಾಗೂ ಲೆಹೆಂಗಾದಂತಹ ಗ್ರ್ಯಾಂಡ್ ಪುಟ್ಟ ಡಿಸೈನರ್‌ವೇರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆಿನರಬೆಂಗಳೂ ಗಾಂಧಿ ಬಜಾರ್ ಶಾಪ್‌ವೊಂದರ ಮಾಲೀಕರು.

3/5

ಅತ್ಯಾಕರ್ಷಕ ಮಿನಿ ಆಭರಣಗಳ ಸಾಗರ

ಮನೆಯಲ್ಲಿ ಕೂರಿಸುವ ವರಮಹಾಲಕ್ಷ್ಮಿಯನ್ನು ಅತ್ಯಾಕರ್ಷಕವಾಗಿ ಬಿಂಬಿಸುವಂತಹ ಪುಟ್ಟ ತಾಳಿ, ಕಾಸಿನ ಸರ, ಹರಳಿನ ಲೇಯರ್ ಹಾರ, ನೆಕ್ಲೇಸ್, ಮೂಗುತಿ, ಕಿವಿಯೊಲೆ, ಕಿವಿ ಸರಪಳಿ, ಡಾಬು, ಕಿರೀಟ ಸೇರಿದಂತೆ ಸಾಕಷ್ಟು ಬಗೆಯ ಇಮಿಟೇಷನ್ ಆಭರಣಗಳು ಮಿನಿ ಸೈಝಿನಲ್ಲಿ ದೊರೆಯುತ್ತಿದ್ದು, ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎನ್ನುತ್ತಾರೆ ಮಲ್ಲೇಶ್ವರದ ಶಾಪ್‌ವೊಂದರ ಸೇಲ್ಸ್ ಮ್ಯಾನ್.

4/5

ದೇವಿಯ ಕೇಶಾಲಂಕಾರಕ್ಕೂ ಲಭ್ಯ

ಕೇವಲ ಆಭರಣಗಳು ಮಾತ್ರವಲ್ಲ, ದೇವಿಯ ಕೇಶಾಲಂಕಾರಕ್ಕೂ ಪುಟ್ಟ ಜಡೆ, ಕುಚ್ಚು, ಜಡೆ ನಾಗರ, ದೇವಿಯ ತೋಳಿಗೆ ಸಿಕ್ಕಿಸುವ ಹರಳಿನ ಅಸ್ತ್ರಗಳು, ಮಾತಾಪಟ್ಟಿ, ಕಿರೀಟದ ಹಿಂದಿನ ಚಕ್ರ, ಮೊಗ್ಗಿನ ಜಡೆ, ರೆಡಿಮೇಡ್ ಹರಳಿನ ತುರುಬು, ಸೊಂಟದ ಪಟ್ಟಿ, ಕಾಲ್ಗೆಜ್ಜೆ ಸಿಗುತ್ತಿವೆ. ಆಯಾ ಡಿಸೈನ್‌ಗೆ ತಕ್ಕಂತೆ ಮಾನಿನಿಯರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಮಾರಾಟಗಾರರು.

5/5

ದೇವಿಯ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸುವವರ ಗಮನಕ್ಕೆ

  • ಪೂಜಿಸುವ ದೇವಿಯ ಸೈಝಿಗೆ ತಕ್ಕಂತಹ ಮಿನಿ ಡಿಸೈನರ್‌ವೇರ್ ಕೊಳ್ಳಿ.
  • ವಸ್ತ್ರಾಭರಣಗಳನ್ನು ಬಳಸುವಾಗ ತೆಗೆದು ನಂತರ ಹಾಗೆಯೇ ಇಟ್ಟು ಪ್ಯಾಕಿಂಗ್ ಮಾಡಿ. ವರ್ಷಗಟ್ಟಲೇ ಬಣ್ಣ ಮಾಸುವುದಿಲ್ಲ.
  • ಹೆಚ್ಚಿನ ಬಿಲ್‌ಗೆ ಉಚಿತ ಹೋಮ್ ಡಿಲಿವೆರಿ ಸೌಲಭ್ಯ ನೀಡುವ ಶಾಪ್‌ಗಳಲ್ಲಿ ಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author