ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Festive Season 2026: ಟ್ರೆಡಿಷನಲ್ ಸಿಂಗಾರಕ್ಕೆ ರೆಡಿಮೇಡ್ ಜ್ಯುವೆಲ್ ಜಡೆಯ ಸಾಥ್!

ಹಬ್ಬ ಹಾಗೂ ಮದುವೆಯಲ್ಲಿ ಸಂಭ್ರಮ ಹೆಚ್ಚಿಸಲು ನಾನಾ ವಿನ್ಯಾಸದ ರೆಡಿಮೇಡ್ ಜಡೆಗಳು ಹೆಣ್ಣುಮಕ್ಕಳ ಕೂದಲನ್ನು ಸಿಂಗರಿಸುತ್ತಿವೆ. ಈ ಸೀಸನ್‌ನಲ್ಲಿ ನಾನಾ ವಿನ್ಯಾಸದ ಸಿಂಗಾರಗೊಂಡ ರೆಡಿಮೇಡ್ ಜ್ಯುವೆಲ್ ಜಡೆಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಟ್ರೆಂಡಿಯಾಗಿವೆ. ಅವು ಯಾವುವು? ಇಲ್ಲಿದೆ ವಿವರ.

ಚಿತ್ರಕೃಪೆ: ಮಿಂಚು
1/5

ಹಬ್ಬ ಹಾಗೂ ಮದುವೆಯಲ್ಲಿ ಹೆಣ್ಣುಮಕ್ಕಳ ಸಂಭ್ರಮ ಹೆಚ್ಚಿಸಲು ಈ ಸೀಸನ್ನಲ್ಲಿ ನಾನಾ ವಿನ್ಯಾಸದ ಸಿಂಗಾರಗೊಂಡ ರೆಡಿಮೇಡ್ ಜ್ಯುವೆಲ್ ಜಡೆಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಟ್ರೆಂಡಿಯಾಗಿವೆ.

2/5

ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ರೆಡಿಮೇಡ್ ಜಡೆಗಳು

ಅಂದಹಾಗೆ, ಎಲ್ಲಾ ವಯಸ್ಸಿನ ಹೆಣ್ಣು ಮಕ್ಕಳು ಧರಿಸಬಹುದಾದಂತಹ ಈ ರೆಡಿಮೇಡ್ ಜಡೆಗಳು ಸಾಕಷ್ಟು ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಸದ್ಯ ಸಾಂಪ್ರದಾಯಿಕ ಲುಕ್ ಬಯಸುವವರನ್ನು ಸೆಳೆದಿವೆ.

3/5

ಬಗೆಬಗೆಯ ವಿನ್ಯಾಸದ ಜಡೆಗಳು

ಹೂ- ಬಳ್ಳಿಯ ಕುಸುರಿ ಹೊಂದಿರುವಂತಹ ಜ್ಯುವೆಲ್ ಹೊಂದಿದವು, ನವಿಲು, ಗಂಡುಭೇರುಂಡ, ಜಿಂಕೆ, ನಾಗರ ಹೀಗೆ ಪ್ರಾಣಿ-ಪಕ್ಷಿಗಳ ಎಂಬೋಸಿಂಗ್ ಹೊಂದಿದಂತಹ ಜಡೆ ಬಿಲ್ಲೆ ಅಂಟಿಸಿದಂತಹ ರೆಡಿಮೇಡ್ ಕೃತಕ ಜಡೆಗಳು, ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

4/5

ಟ್ರೆಂಡಿಗೆ ತಕ್ಕಂತೆ ಬಿಡುಗಡೆಗೊಂಡ ರೆಡಿಮೇಡ್ ಜಡೆಗಳು

ಇನ್ನು, ಜಡೆ ಬಂಗಾರ, ಟೆಂಪಲ್ ಡಿಸೈನ್, ಜಡೆ ಆಕ್ಸೆಸರೀಸ್, ಮುತ್ತಿನ ಜಡೆ, ನಾಗರ ಜಡೆ, ಮ್ಯಾಂಗೋ, ಪೀಕಾಕ್, ಗೋಲ್ಡನ್ ಜಡೆ ಸೇರಿದಂತೆ ನಾನಾ ಹೆಸರಿನಲ್ಲಿ ಟ್ರೆಂಡಿಗೆ ತಕ್ಕಂತೆ ಇವು ಬಿಡುಗಡೆಗೊಂಡಿವೆ. ಹೆಣ್ಣು ಮಕ್ಕಳ ಪ್ರೀತಿಗೆ ಪಾತ್ರವಾಗಿವೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು.‌

ರಾಯಲ್ ಲುಕ್‌ಗೆ ಜಡೆ ಸಿಂಗಾರ

ಎಲ್ಲರಿಗೂ ಗೊತ್ತಿರುವಂತೆ, ಸಿಂಗಾರಗೊಂಡ ರೆಡಿಮೇಡ್ ಜಡೆಗಳು ಮೊದಲಿನಿಂದಲೂ ಚಾಲ್ತಿಯಲ್ಲಿದ್ದವು. ಆದರೆ, ಅವನ್ನು ರಾಯಲ್ ಲುಕ್ ಬಯಸುವ ಹೆಣ್ಣುಮಕ್ಕಳು ಹಾಗೂ ಮದುವೆಯಾಗುವ ವಧುಗಳು ಮಾತ್ರ ಪ್ರಿಫರ್ ಮಾಡುತ್ತಿದ್ದರು. ಆದರೆ, ಕಾಲಕಳೆದಂತೆ ಸಾಮಾನ್ಯ ಹುಡುಗಿಯರು ಕೂಡ ಗ್ರ್ಯಾಂಡ್ ಲುಕ್ಗಾಗಿ ಇವನ್ನು ಧರಿಸಲಾರಂಭಿಸಿದ್ದು, ಟ್ರೆಂಡಿಯಾಗಲು ಕಾರಣವಾಗಿದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್ ದಿವಿನ್.

5/5

ರೆಡಿಮೇಡ್ ಜಡೆ ಸಿಂಗಾರ ಮಾಡುವವರಿಗೆ ಗೊತ್ತಿರಲಿ

  • ಸೀರೆ, ದಾವಣಿ-ಲಂಗ ಹಾಗೂ ಲೆಹೆಂಗಾಗಳಿಗೂ ಈ ರೆಡಿಮೇಡ್ ಜಡೆ ಹಾಕಿಕೊಂಡರೇ ಅತ್ಯಾಕರ್ಷಕವಾಗಿ ಕಾಣಿಸುತ್ತದೆ.
  • ಕೂದಲಿನ ಲೆಂತ್‌ಗೆ ಅನುಗುಣವಾಗಿ ಸೂಕ್ತವಾಗಿರುವುದನ್ನು ಬಳಸಬೇಕು.
  • ಆದಷ್ಟೂ ಲೈಟ್‌ವೇಟ್ ಆಕ್ಸೆಸರೀಸ್ ಇರುವಂತಹ ರೆಡಿಮೇಡ್ ಜಡೆ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author