ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Festive Season Fashion 2026: ಶ್ರಾವಣ ಮಾಸದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಎಥ್ನಿಕ್‌ವೇರ್ಸ್

Festive Season Fashion: ಶ್ರಾವಣ ಮಾಸದಲ್ಲಿ ವಿನೂತನ ಬಗೆಯ ಟ್ರೆಡಿಷನಲ್ ಎಥ್ನಿಕ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 3 ಬಗೆಯ ಡಿಸೈನರ್‌ವೇರ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ರೇಷ್ಮೆಯ ಮಿಕ್ಸ್ ಮತ್ತು ಮ್ಯಾಚ್ ಕಾನ್ಸೆಪ್ಟ್‌ನ ಡಿಸೈನರ್ ಲಂಗ -ದಾವಣಿ. ಟೂ ಇನ್ ವನ್ ಟ್ರೆಡಿಷನಲ್ ಲೆಹೆಂಗಾ, ಸಿಲ್ಕ್ ಗೌನ್ ಮಾದರಿಯವು ಹೆಚ್ಚು ಜನಪ್ರಿಯಗೊಂಡಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಕೃಪೆ : ಪಿಕ್ಸೆಲ್
1/5

ಶ್ರಾವಣ ಮಾಸದಲ್ಲಿ ವಿನೂತನ ಬಗೆಯ ಟ್ರೆಡಿಷನಲ್ ಎಥ್ನಿಕ್‌ವೇರ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಅವುಗಳಲ್ಲಿ 3 ಬಗೆಯ ಡಿಸೈನರ್‌ವೇರ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ. ಅವುಗಳಲ್ಲಿ ಎಥ್ನಿಕ್ ಲುಕ್ ನೀಡುವ ರೇಷ್ಮೆಯ ಮಿಕ್ಸ್ ಮತ್ತು ಮ್ಯಾಚ್ ಕಾನ್ಸೆಪ್ಟ್‌ನ ಡಿಸೈನರ್ ಲಂಗ -ದಾವಣಿ. ಟೂ ಇನ್ ವನ್ ಟ್ರೆಡಿಷನಲ್ ಲೆಹೆಂಗಾ, ಸಿಲ್ಕ್ ಗೌನ್ ಮಾದರಿಯವು ಹೆಚ್ಚು ಜನಪ್ರಿಯಗೊಂಡಿವೆ.

2/5

ರೇಷ್ಮೆ ಡಿಸೈನರ್ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ನ ಲಂಗ ದಾವಣಿ

ಎಥ್ನಿಕ್ ಶೈಲಿಯ ರೇಷ್ಮೆಯ ಡಿಸೈನರ್ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್‌ಗೆ ನಾಂದಿ ಹಾಡುವ ಲಂಗ - ದಾವಣಿ ಫೆಸ್ಟೀವ್ ಸೀಸನ್‌ಗೆ ಆಗಮಿಸಿವೆ. ಈ ಸೀಸನ್ನ ಹಬ್ಬ-ಹರಿದಿನ, ಮದುವೆ ಹಾಗೂ ಇತರೇ ಗ್ರ್ಯಾಂಡ್ ಸಮಾರಂಭಗಳಿಗೆ ಧರಿಸಬಹುದಾದ ಉಡುಪುಗಳಿವು. ರೇಷ್ಮೆ ಫ್ಯಾಬ್ರಿಕ್ ಜತೆ ಇತರೇ ಫ್ಯಾಬ್ರಿಕ್‌ನ ದುಪಟ್ಟಾ ಇವಕ್ಕೆ ಮ್ಯಾಚ್ ಮಾಡಲಾಗಿರುತ್ತದೆ.

3/5

ಟೂ ಇನ್ ವನ್ ಲೆಹೆಂಗಾ

ಟೂ ಇನ್ ವನ್ ಸ್ಟೈಲಿಂಗ್ ಮಾಡಬಹುದಾದ ಟ್ರೆಡಿಷನಲ್ ಲುಕ್ ನೀಡುವ ಲೆಹೆಂಗಾಗಳು ಟ್ರೆಂಡ್‌ನಲ್ಲಿವೆ. ಶೀರ್ ಡಿಸೈನರ್ ದುಪಟ್ಟಾ ಹೊಂದಿರುವಂತಹ ಈ ಲೆಹೆಂಗಾಗಳು ಇಂಡೋ-ವೆಸ್ಟರ್ನ್ ಲುಕ್‌ನಲ್ಲೂ ಬಳಸುವಂತಹ ಶೈಲಿಯಲ್ಲಿ ಕಾಣಿಸಿಕೊಂಡಿವೆ. ಇವನ್ನು ಕೇವಲ ಹಬ್ಬದ ಸಮಾರಂಭಗಳಿಗೆ ಮಾತ್ರವಲ್ಲ, ಮದುವೆಯಂತಹ ಗ್ರ್ಯಾಂಡ್ ಸಮಾರಂಭಗಳಿಗೂ ಧರಿಸಬಹುದು.

4/5

ಮನಮೋಹಕ ಸಿಲ್ಕ್ ಎಥ್ನಿಕ್ ಗೌನ್

ಮನಮೋಹಕವಾಗಿ ಕಾಣಿಸುವ ಸಿಲ್ಕ್ ಫ್ಯಾಬ್ರಿಕ್‌ನ ಎಥ್ನಿಕ್ ಡಿಸೈನರ್‌ವೇರ್‌ ಲಿಸ್ಟ್‌ಗೆ ಸೇರುವಂತಹ ಟ್ರೆಡಿಷನಲ್ ಗೌನ್‌ಗಳು ಕೂಡ ಈ ಫೆಸ್ಟೀವ್ ಸೀಸನ್‌ನಲ್ಲಿ ಚಾಲ್ತಿಯಲ್ಲಿವೆ. ಎಲ್ಲಾ ವಯಸ್ಸಿನವರೂ ಧರಿಸಬಹುದಾದ ಇವು ಸದ್ಯ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಡಿಸೈನರ್ ದೀಕ್ಷಾ.

5/5

ಎಥ್ನಿಕ್‌ವೇರ್ಸ್ ಪ್ರಿಯರಿಗೆ ಸಿಂಪಲ್ ಟಿಪ್ಸ್

  • ರೇಷ್ಮೆಯ ಫ್ಯಾಬ್ರಿಕ್‌ನವು ಅಂದವಾಗಿ ಬಿಂಬಿಸುತ್ತವೆ.
  • ದಪ್ಪಗಿರುವವರು ಸೂಕ್ತ ಫ್ಯಾಬ್ರಿಕ್‌ನವನ್ನು ಚೂಸ್ ಮಾಡಬೇಕು.
  • ಟ್ರೆಡಿಷನಲ್ ಮೇಕ್ ಓವರ್ ಮಾಡಿಕೊಳ್ಳಿ.
  • ಟ್ರೆಡಿಷನಲ್ ಅಟೈರ್ ಧರಿಸಿದಾಗ ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ.

ಶೀಲಾ ಸಿ ಶೆಟ್ಟಿ

View all posts by this author