ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AI Movie: ಕನ್ನಡದಲ್ಲೇ ಸಿದ್ಧವಾಯ್ತು ಮೊದಲ ಎಐ ಸಿನಿಮಾ; ಬಿಡುಗಡೆ ಯಾವಾಗ?.

ಸಂಪೂರ್ಣ ಎಐ ಮೂಲಕವೇ ಕನ್ನಡದಲ್ಲಿ ‘ಲವ್ ಯೂ’ ಸಿನಿಮಾ ಸಿದ್ಧವಾಗಿದೆ.ಸಿನಿಮಾದ ನಿರ್ದೇಶನ ಮತ್ತು ನಿರ್ಮಾಪಕರನ್ನು ಹೊರತು ಪಡಿಸಿದರೆ, ಮತ್ತೆಲ್ಲ ಕೆಲಸಗಳನ್ನೂ ಎಐ ತಂತ್ರಜ್ಞಾನವೇ ಮಾಡಿರುವುದು ಈ ಸಿನಿಮಾದ ಮೊದಲ ವಿಶೇಷತೆ. ಸೆನ್ಸಾರ್‌ ಬೋರ್ಡ್‌ನವರೂ ಸಿನಿಮಾವನ್ನು ಕುತೂಹಲದಿಂದ ನೋಡಿ ಯು/ಎ ಸರ್ಟಿಫಿಕೆಟ್‌ ಕೂಡ ನೀಡಿದ್ದಾರೆ.

1/5

ಸದ್ಯ ಎಲ್ಲ‌ ಕ್ಷೇತ್ರದಲ್ಲಿಯೂ ಎಐ ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ.ಈ ತಂತ್ರಜ್ಞಾನ ಈಗ ಸಿನಿಮಾ ರಂಗದಲ್ಲೂ ಬಳಕೆ ಆಗುತ್ತಿದೆ. ಇದೀಗ ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣ ಎಐನಿಂದಲೇ ಕನ್ನಡ ಸಿನಿಮಾವೊಂದನ್ನು ತಯಾರಿಸಲಾಗಿದೆ. ಕೇವಲ 10 ಲಕ್ಷ ಬಜೆಟ್ ಗೆ ನಿರ್ಮಿಸಲಾದ ಈ ಸಿನಿಮಾವನ್ನು ನಿರ್ದೇಶಕ ನರಸಿಂಹ ಮೂರ್ತಿ ಮತ್ತು ಎಐ ತಂತ್ರಜ್ಞಾನಿ ನೂತನ್‌, ನಟನೆ, ಸಂಗೀತ ಸೇರಿದಂತೆ ಎಲ್ಲವನ್ನೂ ಎಐ ಬಳಸಿ ರಚಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ಕೂಡ ಸಿಕ್ಕಿದ್ದು ಸದ್ಯದಲ್ಲೇ ಬಿಡುಗಡೆ ಆಗಲಿರುವ ‘ಲವ್ ಯೂ’ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ...

2/5

ಈಗಾಗಲೇ ಕೆಲವು ಚಿತ್ರಗಳ ಪ್ರೀ-ಪ್ರೊಡಕ್ಷನ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಎಐ ಬಳಸಲಾಗುತ್ತಿದೆ. ಆದರೆ, ಈ ಚಿತ್ರತಂಡವು ಸಂಪೂರ್ಣವಾಗಿ ಎಐ ಮೂಲಕವೇ ಇಡೀ ಚಿತ್ರವನ್ನು ಸಂಪೂರ್ಣವಾಗಿ ಸೃಷ್ಟಿ ಮಾಡಿದೆ. ಕೃತಕ ಬುದ್ಧಿಮತ್ತೆ (AI) ಮೂಲಕವೇ ‘ಲವ್ ಯು’ ಹೆಸರಿನ ಕನ್ನಡದ ಮೊದಲ ಸಿನಿಮಾವನ್ನು ರೆಡಿ ಮಾಡಿದ್ದು ಈ ಚಿತ್ರವೀಗ ರಿಲೀಸ್‌ಗೂ ಸಿದ್ಧವಾಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ. ಚಿತ್ರದಲ್ಲಿ 30 ಎಐ ಟೂಲ್‌ಗಳನ್ನು ಬಳಸಲಾಗಿದ್ದು, ಕೇವಲ ಇಬ್ಬರು ಇಡೀ ಸಿನಿಮಾ ಮಾಡಿದ್ದಾರೆ. ಚಿತ್ರದ ನಾಯಕ ನಾಯಕಿಗೂ ಎಐ ತಂತ್ರಜ್ಞಾನ ಬಳಕೆ ಮಾಡಿದ್ದು ಈ ಸಿನಿಮಾ 95 ನಿಮಿಷಗಳ ಕಥೆ ಹೊಂದಿದೆ.

3/5

ಈ ಚಿತ್ರದ ಕುರಿತು ಮಾತನಾಡಿರುವ ನಿರ್ದೆಶಕ ನರಸಿಂಹಮೂರ್ತಿ, ‘ಕಥೆ, ಸಾಹಿತ್ಯ, ಸಂಭಾಷಣೆ ಹೊರತು ಪಡಿಸಿದರೆ, ಮಿಕ್ಕೆಲ್ಲವನ್ನೂ ಎಐ ತಂತ್ರಜ್ಞಾನದ ಮೂಲಕವೇ ಮಾಡಿರುವುದು ಈ ಚಿತ್ರದ ವಿಶೇಷತೆ ಅಂದಿದ್ದಾರೆ. ಕೇವಲ ಆರು ತಿಂಗಳಿ ನಲ್ಲಿಯೇ 10 ಲಕ್ಷ ಬಜೆಟ್ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಇದು ವಿಶ್ವದಲ್ಲಿಯೇ ಸಂಪೂರ್ಣ AI ನಿರ್ಮಿತ ಮೊದಲ ಸಿನಿಮಾ ವಾಗಿದ್ದು ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು, ಆ ಪಾತ್ರಗಳ ಸಂಭಾಷಣೆ, ಹಾಡುಗಳು , ಧ್ವನಿ ವಿನ್ಯಾಸ, ಸೀನ್‌ನಲ್ಲಿ ಬರುವ ಸ್ಥಳಗಳು, ಕಲರಿಂಗ್ ಹೀಗೆ ಎಲ್ಲಾ ಕೆಲಸಗಳಿಗೂ  ಎಐ ಬಳಕೆ ಮಾಡಲಾಗಿದೆ. ನೂತನ್ ಎಂಬ ಎಐ ಇಂಜಿನಿಯರ್ ಅವರ ತಾಂತ್ರಿಕ ನಾಯಕತ್ವ ಹಾಗೂ ಸುಂದರ್ ರಾಜ್ ಗುಂಡೂರಾವ್ ಯೋಜನೆಯ ನೇತೃತ್ವದಲ್ಲಿ ಈ ಸಿನಿಮಾ ಸಿದ್ಧವಾಗಿದೆ’ ಎಂದಿದ್ದಾರೆ ನಿರ್ದೇಶಕ ಎಸ್. ನರಸಿಂಹ ಮೂರ್ತಿ.

4/5

ಈ ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿರುವ ನರಸಿಂಹ ಮೂರ್ತಿ ಮೂಲತಃ ಬೆಂಗಳೂರಿನ ಬಗಲಗುಂಟೆ ಆಂಜನೇಯ ದೇವಾಲಯದ ಅರ್ಚಕರು ಆಗಿದ್ದಾರೆ. ಈ ಹಿಂದೆ ಎರಡು ಸಿನಿಮಾಗಳ ನಿರ್ದೇಶನ ವನ್ನೂ ಮಾಡಿ ಹೆಸರು ಗಳಿಸಿದ್ದರು.ಇಡೀ ಸಿನಿಮಾದ ಎಐ ಕೆಲಸ ನಿರ್ವಹಿಸಿರುವ ನೂತನ್‌ ಓದಿದ್ದು ಎಲ್‌ಎಲ್‌ಬಿ. ಕಳೆದೊಂದು ದಶಕದಿಂದ ಸ್ಯಾಂಡಲ್‌ವುಡ್‌ನಲ್ಲಿ ಸಹ ನಿರ್ದೇಶನ, ಎಡಿಟಿಂಗ್‌ ಕೆಲಸ ಮಾಡುತ್ತಿದ್ದಾರೆ.

5/5

ಎಐ ತಂತ್ರಜ್ಞಾನದಲ್ಲೇ ಮೂಡಿಬಂದಿರುವ ಲವ್ ಯು' ಸಿನಿಮಾದಲ್ಲಿ12 ಹಾಡುಗಳಿದ್ದು, 95 ನಿಮಿಷಗಳ ಅವಧಿಯನ್ನು ಹೊಂದಿದೆ. ಚಿತ್ರದಲ್ಲಿ ಒಟ್ಟು 15 ಪಾತ್ರಗಳಿವೆಯಂತೆ. ಅವೆಲ್ಲವೂ ಎಐ ಜನರೇಟೆಡ್‍ ಪಾತ್ರ ಗಳಿವೆ.ಸಿನಿಮಾದಲ್ಲಿ ರಿಯಲ್‌ ಸಿನಿಮಾದಲ್ಲಿರುವ ಎಲ್ಲ ಅಂಶಗಳೂ ಇದ್ದು. ಡ್ರೋನ್‌ ಶಾಟ್‌ಗಳೂ ಇವೆ. ಸೆನ್ಸಾರ್ ಮಂಡಳಿ ಕೂಡ ಈ ಸಿನಿಮಾವನ್ನು ವೀಕ್ಷಣೆ ಮಾಡಿ, ಯು/ಎ ಪ್ರಮಾಣ ಪತ್ರವನ್ನು ಸಹ ನೀಡಿದೆ. ನೇರವಾಗಿ ಥಿಯೇಟರ್‌ನಲ್ಲೇ ಸಿನಿಮಾವನ್ನು ಲವ್ ಯೂ’ ಸಿನಿಮಾವನ್ನು ಮೇ ಅಥವಾ ಜೂನ್ ತಿಂಗಳಲ್ಲಿ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ..