Friendshipday Fashion 2026: ಫ್ರೆಂಡ್‌ಶಿಪ್ ಡೇಗಿರಲಿ ಫ್ಯಾಷನೆಬಲ್ ಲುಕ್
Friendshipday Fashion: ಫ್ರೆಂಡ್ ಶಿಪ್ ಡೇಯಂದು ಫ್ಯಾಷನೆಬಲ್ ಆಗಿ ಕಾಣಿಸಿಕೊಳ್ಳಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು. ಈ ಬಾರಿಯ ಫ್ರೆಂಡ್‌ಶಿಪ್ ಡೇ ಫ್ಯಾಷನ್ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಸೀಸನ್ ಫ್ರೆಂಡ್‌ಶಿಪ್ ಡೇ ಲುಕ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಫ್ರೆಂಡ್‌ಶಿಪ್ ಡೇಗೆ ಫ್ಯಾಷನೆಬಲ್ ಆಗಿ ಕಾಣಿಸಿಕೊಂಡು ಸೆಲೆಬ್ರೆಟ್ ಮಾಡಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು.
ಅಗಸ್ಟ್ ಮೊದಲ ಭಾನುವಾರದ ಫ್ರೆಂಡ್‌ಶಿಪ್ ಡೇ ಫ್ಯಾಷನ್
ಪ್ರತಿ ವರ್ಷದಂತೆ ಈ ವರ್ಷವೂ ಅಗಸ್ಟ್ ನ ಮೊದಲ ಭಾನುವಾರ ಫ್ರೆಂಡ್‌ಶಿಪ್ ಡೇ ಸೆಲೆಬ್ರೆಟ್ ಮಾಡಲಾಗುತ್ತಿದೆ. ಈ ದಿನದ ಫ್ಯಾಷನ್ ಕಾನ್ಸೆಪ್ಟ್ ಒಂದೇ ತರಹದ್ದಾಗಿ ಕಂಡರೂ ಥೀಮ್ ಹಾಗೂ ಸ್ಟೈಲಿಂಗ್ ಮಾತ್ರ ಬದಲಾಗುತ್ತಿರುತ್ತದೆ.
ಹಾಗಾದಲ್ಲಿ, ಈ ಬಾರಿಯ ಫ್ರೆಂಡ್‌ಶಿಪ್ ಡೇ ಫ್ಯಾಷನ್ ಏನು? ಹೇಗೆಲ್ಲಾ ಕಾಣಿಸಿಕೊಳ್ಳಬಹುದು? ಸೀಸನ್ ಫ್ರೆಂಡ್‌ಶಿಪ್ ಡೇ ಲುಕ್ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.
ಗ್ರೂಪ್‌ಗೆ ತಕ್ಕಂತೆ ಫ್ಯಾಷನ್ ಥೀಮ್
ಫ್ರೆಂಡ್‌ಶಿಪ್ ಡೇ ಆಚರಿಸುವವರು ತಮ್ಮದೇ ಆದ ಥೀಮ್ ಫ್ಯಾಷನ್ ಫಾಲೋ ಮಾಡಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಮಾಲ್-ಶಾಪ್‌ಗಳಲ್ಲಿ ಬಲ್ಕ್ ಆರ್ಡರ್‌ನಲ್ಲಿ ಫ್ಯಾಷನ್‌ವೇರ್‌ಗಳೂ ದೊರೆಯುತ್ತಿವೆ. ಕಾರ್ಪೋರೇಟ್ ಕಚೇರಿಯ ಉದ್ಯೋಗಿಗಳಾಗಿರಬಹುದು ಅಥವಾ ಕಾಲೇಜು ಹುಡುಗ-ಹುಡುಗಿಯರಾಗಿರಬಹುದು. ಅವರವರ ಗ್ರೂಪ್‌ನ ಅಭಿರುಚಿಗೆ ತಕ್ಕಂತೆ ಫ್ಯಾಷನ್ ಥೀಮ್‌ಗಳನ್ನು ರೂಪಿಸಿಕೊಂಡು ಫ್ಯಾಷನ್‌ವೇರ್‌ಗಳನ್ನು ಧರಿಸುವುದು ಟ್ರೆಂಡಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗ್ರೂಪ್ ಐಡೆಂಟಿಟಿಗೆ ತಕ್ಕಂತೆ ಸ್ಟೈಲಿಂಗ್
ಇನ್ನು, ಥೀಮ್ ಎಂದಾಕ್ಷಣಾ ಗುಂಪಿನ ಎಲ್ಲರ ಔಟ್‌ಫಿಟ್‌ಗಳು ಒಂದೇ ಆಗಿರಬೇಕೆಂದಿಲ್ಲ! ಒಟ್ಟಿನಲ್ಲಿ ಅವರೆಲ್ಲರೂ ಧರಿಸುವ ಯಾವುದೇ ಉಡುಪು ಅಥವಾ ಆಕ್ಸೆಸರೀಸ್ ಇಲ್ಲವೇ ಸ್ಟೈಲಿಂಗ್ ಒಂದೇ ಬಗೆಯದ್ದಾಗಿರಬಹುದು. ಅದು ಔಟಿಂಗ್‌ನದ್ದಾಗಿರಬಹುದು, ಪಾರ್ಟಿವೇರ್‌ನದ್ದಾಗಿರಬಹುದು ಅಥವಾ ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಕಾಲ ಕಳೆಯುವಂತದ್ದಾಗಿರಬಹುದು. ಆಯಾ ಗ್ರೂಪ್‌ನ ಐಡೆಂಟಿಟಿಗೆ ತಕ್ಕಂತೆ ಥೀಮ್ ಫ್ಯಾಷನ್ ಬದಲಿಸಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್ ದಿವಾನ್ ಹಾಗೂ ರಮಣ್.
ಜನರೇಷನ್‌ಗೆ ತಕ್ಕಂತೆ ಸ್ಟೈಲಿಂಗ್
ಸ್ನೇಹಿತರ ಗ್ರೂಪ್‌ಗಳು ಕೇವಲ ಜೆನ್ ಜಿ, ಮಿಲೆನಿಯಲ್ ಜನರಿಂದ ಕೂಡಿರಬೇಕೆಂದಿಲ್ಲ, ಗ್ರೂಪ್‌ಗಳು ವಯಸ್ಸಾಗಿರುವ ಹಿರಿಯರದ್ದು ಆಗಿರಬಹುದು ಅಥವಾ ಸಮಾನ ಮನಸ್ಕರ ವಿಭಿನ್ನ ಗ್ರೂಪ್ಗಳಾಗಬಹುದು. ಆಯಾ ಗ್ರೂಪ್‌ನ ಚಟುವಟಿಕೆಗಳಿಗೆ ತಕ್ಕಂತೆ ಡ್ರೆಸ್ಸಿಂಗ್ ಹಾಗೂ ಸ್ಟೈಲಿಂಗ್ ಬದಲಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಹೀಗಿರಲಿ ಫ್ರೆಂಡ್‌ಶಿಪ್ ಡೇ ಸ್ಟೈಲಿಂಗ್
- ಫ್ರೆಂಡ್ಸ್ ಗ್ರೂಪ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಎಥ್ನಿಕ್, ವೆಸ್ಟರ್ನ್, ಸೆಮಿ ಎಥ್ನಿಕ್, ಬಿಂದಾಸ್ ಯಾವುದಾದರೂ ಸರಿಯೇ ಕಂಫರ್ಟಬಲ್ ಸ್ಟೈಲಿಂಗ್ ಚೂಸ್ ಮಾಡಿ.
- ಔಟಿಂಗ್ ಆದಲ್ಲಿ ಮಾನ್ಸೂನ್ ಸೀಸನ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ.
- ಆದಷ್ಟೂ ಯಂಗ್ ಲುಕ್ ನೀಡುವ ಸ್ಟೈಲಿಂಗ್ ಅಳವಡಿಸಿಕೊಳ್ಳಿ.